
ಕಲಬುರಗಿ:ಏ.5: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಸರದಾರ ವಲ್ಲಭಭಾಯಿ ಪಟೇಲ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶಾತಿ ಬಯಸಿ ಪರೀಕ್ಷೆ ಬರೆಯಲು 10ನೇ ತರಗತಿಯ ಸರಿಸುಮಾರು ಐದುನೂರು ವಿದ್ಯಾರ್ಥಿಗಳು ಆಗಮಿಸಿ ಉತ್ಸಾಹದಿಂದ ಪರೀಕ್ಷೆ ಬರೆದು ಖುಷಿ ಪಟ್ಟರು. ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ಶಿಸ್ತುಬದ್ದವಾಗಿ ಕೊಠಡಿಗಳಿಗೆ ತೆರಳಿ, ಮದ್ಯಾಹ್ನ 2 ರಿಂದ 4ರ ವರೆಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಭಾಗದ ಫಾರ್ಮುಲಾ ಪುಸ್ತಕಗಳನ್ನು ವಿತರಿಸಲಾಯಿತು.
ಕಾಲೇಜಿನ ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿತ್ತು. ಮಕ್ಕಳಿಗೆ ಹಾಗೂ ಜೊತೆಗೆ ಬಂದ ಪಾಲಕರಿಗೆ ಪರೀಕ್ಷೆ, ಪ್ರವೇಶಾತಿ, ಉತ್ತಮ ಭೋದನಾ ಕ್ರಮ, ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯ, ಭೋದನಾ ಕೊಠಡಿಗಳು, ಹಾಗೂ ಕಾಲೇಜಿನ ನುರಿತ ಉಪನ್ಯಾಸಕರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಾದ ಓಇಇಖಿ, ಎಇಇ ಮತ್ತು ಏಅಇಖಿ ತರಬೇತಿ ಹಾಗೂ ಅದರ ಅಭ್ಯಾಸ ಪುಸ್ತಕ ರಚಿಸಿದÀ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು. ಅದೇರೀತಿಯಾಗಿ ಕಳೆದ ಸಾಲಿನಲ್ಲಿ ಆರ್.ಜೆ. ಕಾಲೇಜಿನ ಫಲಿತಾಂಶ 100% ಬಂದಿರುವುದು ವಿದ್ಯಾರ್ಥಿಗಳ ಸಾಧನೆಗೆ ನುರಿತ ಉಪನ್ಯಾಸಕರ ಕಾರ್ಯ ಶ್ಲಾಘನೀಯವಾದದ್ದು ಎಂದು ಪ್ರಾಚಾರ್ಯರು ಹೇಳಿದರು.
ಈ ಪರೀಕ್ಷೆಯ ಕಾರ್ಯದಲ್ಲಿ ಕಾಲೇಜಿನ ಉಪನ್ಯಾಸಕ ಹಾಗೂ ಸಿಬ್ಬಂದಿ ಬಳಗ ಉತ್ತಮ ವ್ಯವಸ್ಥೆಯನ್ನು ನೀಡಿದರು. ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಂಪಾದ ಮಜ್ಜಿಗೆ ವ್ಯವಸ್ಥೆಯನ್ನು ಮಾಡಲಾಯಿತು.
ಆರ್.ಜೆ. ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರವೇಶ ಪರೀಕ್ಷೆಗೆ ನಾನು ಬಂದಿದ್ದು, ಡಾ. ಭುರ್ಲಿ ಪ್ರಹ್ಲಾದ ಸರ್ ಅವರು ಶಿಸ್ತಿನ ಸಿಪಾಯಿಯಾಗಿದ್ದು, ಒಳ್ಳೆಯ ಆಡಳಿತಗಾರರಾಗಿದ್ದು, ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಾರೆ. ನಾನು ಕೂಡ ಇದೇ ಕಾಲೇಜಿನಲ್ಲಿ ಓದಬೇಕೆಂಬ ಆಕಾಂಕ್ಷೆ ಇಟ್ಟುಕೊಂಡು ಪರೀಕ್ಷೆ ಬರೆದಿದ್ದೇನೆ. ಇಲ್ಲಿನ ವಾತಾವರಣ ಶಿಸ್ತಿನ ವ್ಯವಸ್ಥೆ ಕಂಡು ಖುಷಿ ಪಟ್ಟಿದ್ದೇನೆ. ಇದೇ ಕಾಲೇಜಿನಲ್ಲಿ ಪ್ರವೇಶಾತಿಗೆ ಇಚ್ಚಿಸುತ್ತೇನೆ. ತಂಪಾದ ಮಜ್ಜಿಗೆಯನ್ನು ಕುಡಿದು ನಮ್ಮ ಗೆಳೆಯರೆಲ್ಲರು ಸಂಭ್ರಮಿಸಿದೆವು.
- ಸುಮೀತ್ ಮಲ್ಲಿಕಾರ್ಜುನ್
10ನೇ ತರಗತಿ ವಿದ್ಯಾರ್ಥಿ
ಸರಕಾರಿ ಪ್ರೌಢ ಶಾಲೆ ಸೊಂತ, ತಾ. ಕಮಲಾಪೂರ
ಜಿ. ಕಲಬುರಗಿ
ಡಾ. ಭುರ್ಲಿ ಸರ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ಇಂದು ಆರ್.ಜೆ.ಸಿ.ಇ.ಟಿ. ಪ್ರವೇಶ ಪರೀಕ್ಷೆ ಏರ್ಪಡಿಸಿದ್ದರು. ಪರೀಕ್ಷೆಯು “ಚಿಂತನೆಗೆ ಪ್ರೇರೇಪಿಸುವ ಪ್ರಶ್ನೆಪತ್ರಿಕೆ”ಯಾಗಿತ್ತು. ನಾನು ಖುಷಿಯಿಂದ ಪರೀಕ್ಷೆ ಬರೆದಿದ್ದೇನೆ. ಇದೇ ಕಾಲೇಜಿನಲ್ಲೇ ಓದಬೇಕೆಂಬ ಬಯಕೆಯಿದ್ದು ಪ್ರಥಮ ಪಿಯುಗೆ ಪ್ರವೇಶ ಪಡೆಯುತ್ತೇನೆ. ನಮಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯಗಳ ಪಾರ್ಮುಲಾ ಪುಸ್ತಕಗಳನ್ನು ಸಂಸ್ಥೆಯವರು ವಿತರಿಸಿದರು ಅವು ನಮಗೆ ಬಹು
ಉಪಯೋಗವಾಗುತ್ತವೆ.- ಅನುಷ್ಕಾ ಕೆ. ಕುಲಕರ್ಣಿ ಗುರುಕುಲ ಪಬ್ಲಿಕ್ ಸ್ಕೂಲ್ ಕಲಬುರಗಿ
ದೇವಲ ಗಾಣಗಾಪುರದಿಂದ ಬಂದಿರುವ ನಾನು ಕನ್ನಡ ಮಾಧ್ಯಮ ವಿದ್ಯಾರ್ಥಿನಿಯಾಗಿದ್ದು ನಮ್ಮ ಭಾಗದಲ್ಲಿ ಕಲಬುರಗಿಯ ಆರ್.ಜೆ. ಕಾಲೇಜಿನ ಹೆಸರು ಮತ್ತು ಫಲಿತಾಂಶ ಕೇಳಿ ಇದೇ ಕಾಲೇಜಿಗೆ ಸೇರಬಯಸಲು ಪರೀಕ್ಷೆ ಬರೆಯಲು ಬಂದಿದ್ದೇನೆ. ಸುಸಜ್ಜಿತ ಆಸನಗಳು, ಪ್ರಶಾಂತ ವಾತಾವರಣ, ಶಿಸ್ತು, ಉಪನ್ಯಾಸಕರ ಕಾಳಜಿ ಕಂಡುಬಂದಿದೆ. ಇದೇ ಕಾಲೇಜಿನಲ್ಲೇ ಪ್ರವೇಶ ಪಡೆಯಲು ಇಚ್ಚಿಸಿದ್ದೇನೆ.
- ನಿಶಾ ಕುಲಕರ್ಣಿ
ಯತಿರಾಜ ಪ್ರೌಢ ಶಾಲೆ ದೇವಲ ಗಾಣಗಾಪುರ
ತಾ. ಅಫಜಲಪುರ್
ಸರಿಸುಮಾರು ಐದುನೂರು ವಿದ್ಯಾರ್ಥಿಗಳು ಪ್ರಥಮ ಪಿಯು ಪ್ರವೇಶಕ್ಕೆ ಪರೀಕ್ಷೆ ಬರೆಯಲು ಬಂದಿದ್ದರು. ನಮ್ಮ ಕಾಲೇಜಿನ ಉಪನ್ಯಾಸಕ ಹಾಗೂ ಸಿಬ್ಬಂಧಿಬಳಗ ಯಶಶ್ವಿಯಾಗಿ, ಶಿಸ್ತುಬದ್ದವಾಗಿ ಕಾರ್ಯ ನಿರ್ವಹಿಸಿದ್ದಕ್ಕಾಗಿ ಅಭಿನಂದನೆಗಳು. ವಿದ್ಯಾರ್ಥಿಗಳು, ಪಾಲಕರು ಬಂದು ನಮ್ಮ ಸಂಸ್ಥೆಯ ವಾತಾವರಣ ನೋಡಿ ಖುಷಿಪಟ್ಟರು. ನಮ್ಮ ಕಾಲೇಜಿನ ಬಗ್ಗೆ ಒಳ್ಳೆಯ ವಾತಾವರಣ ನಿರ್ಮಿಸಿದ್ದು ಸಂತೋಷವನ್ನುಂಟುಮಾಡಿದೆ.
- ಡಾ. ಭುರ್ಲಿ ಪ್ರಹ್ಲಾದ
ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಚಾರ್ಯರು, ಆರ್.ಜೆ. ಪಿಯು ಕಾಲೇಜು ಕಲಬುರಗಿ




















