
ಕಲಬುರಗಿ,ಮಾ.30-ನಾಟಕ ಸಮಾಜ ಸುಧಾರಿಸುವ ವಿಶೇಷ ಕಲೆಯಾಗಿದೆ. ನಾಟಕದ ಮೂಲಕ ಮನುಷ್ಯನ ಜೀವನ ಬದಲಾವಣೆಯಾಗುತ್ತದೆ ಎಂದು ಮಾಜಿ ಸಚಿವ ರೇವು ನಾಯಕ ಬೆಳಮಗಿ ಹೇಳಿದರು.
ಮೌನೇಶ್ವರ ನಾಟ್ಯ ಕಲಾವಿದರ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಳಂದ ತಾಲ್ಲೂಕಿನ ಬೋಧನ ಗ್ರಾಮದ ಬಯಲು ಆವರಣದಲ್ಲಿ ಹಮ್ಮಿಕೊಂಡಿದ್ದ ಭೀಮೇಶ ಕಲಬುರಗಿ ತಂಡದ ಭಗವಂತ ಕೊಟ್ಟ ಭಾಗ್ಯ ಹಾಗೂ ಶರಣಬಸಪ್ಪ ಕಲಬುರಗಿ ತಂಡದ ಕಿವುಡ ಮಾಡಿದ ಕಿತಾಪತಿ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕಾಶಿನಾಥ ಆರ್.ವಾರದ್, ಮಹಾದೇವಪ್ಪ ಹಡಪದ, ಮಲ್ಲಣ್ಣ ಎಂ.ಪಿ., ಸುಭಾಶ್ಚಂದ್ರ ಬಾದುನ, ಅಶೋಕ ಬಿರಾದಾರ, ಕಾಂಗ್ರೆಸ್ ಮುಖಂಡ ಸಂಜು ಶೆಟ್ಟಿ, ವೀರೇಶ ರೋಳೆ, ನಾಗೇಂದ್ರಪ್ಪ ಬಾದುನ, ಮೌನೇಶ್ವರ ನಾಟ್ಯ ಸಂಘದ ಅಧ್ಯಕ್ಷ ಮಹೇಶ ಉಪಸ್ಥಿತರಿದ್ದರು.




























