
ಆಲಮೇಲ, ಫೆ. 9: ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ಕೊರಳಿನಿಂದ ಅಂದಾಜು ಮೂರು ತೊಲ ಚಿನ್ನದ ಸರವನ್ನು ಬೈಕ್ ಮೇಲೆ ಬಂದ ಇಬ್ಬರು ಕಳ್ಳರು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ ಪ್ರಯಾಣಿಕರು ಬಸ್ ಹತ್ತಲು ಮುಗಿಬಿದ್ದಿದ್ದಾರೆ. ಈ ಜನದಟ್ಟಣೆಯ ವೇಳೆಯಲ್ಲಿ ಬೈಕ್ ಮೇಲೆ ಬಂದ ಇಬ್ಬರು ಕಳ್ಳರು, ಬಸ್ ಹತ್ತುತ್ತಿದ್ದ ಮಹಿಳೆಯ ಕೊರಳಿಗೆ ಕೈ ಹಾಕಿ ಸರವನ್ನು ಕಿತ್ತುಕೊಂಡಿದ್ದಾರೆ. ಕ್ಷಣಾರ್ಧದಲ್ಲಿ ನಡೆದ ಈ ಕೃತ್ಯದಿಂದ ಮಹಿಳೆ ಹೌಹಾರಿ ದಿಕ್ಕು ಕಾಣದೆ ಏರಿದ ದನಿಯಲ್ಲಿ ಕಿರುಚಾಡಿದ್ದಾರೆ .
ಆಗ ಕಳ್ಳರು ಬೈಕ್‍ನಲ್ಲಿ ವೇಗವಾಗಿ ಪರಾರಿಯಾಗಿದ್ದು, ಆಲಮೇಲ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಮನವಿಗಳಿಗೆ ಬೆಲೆ ನೀಡದ ಸಾರಿಗೆ ಇಲಾಖೆ:
ಆಲಮೇಲ ಬಸ್ ನಿಲ್ದಾಣದಲ್ಲಿ ಭದ್ರತೆಗಾಗಿ ಸಿಸಿಟಿವಿ ಅಳವಡಿಸಲು ಸಾರಿಗೆ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಸಾರ್ವಜನಿಕರು ತಮ್ಮ ಬೆಲೆಬಾಳುವ ಆಭರಣಗಳನ್ನು ಕಳೆದುಕೊಳ್ಳುವಂತಾಗಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೆÇಲೀಸರು
ಸ್ಥಳಕ್ಕೆ ಭೇಟಿ ನೀಡಿದ ಪೆÇಲೀಸರು ಪರಿಶೀಲನೆ ನಡೆಸುತ್ತಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ. ನಿಲ್ದಾಣದಲ್ಲಿ ಹೆಚ್ಚುತ್ತಿರುವ ಕಳ್ಳತನದ ಪ್ರಕರಣಗಳಿಂದ ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ.





















