Home ಜಿಲ್ಲೆ ವಿಜೃಂಭಣೆಯಿAದ ಜರುಗಿದ ರಥೋತ್ಸವ

ವಿಜೃಂಭಣೆಯಿAದ ಜರುಗಿದ ರಥೋತ್ಸವ


ನವಲಗುಂದ,ಏ.೩:
ಹನುಮ ಜಯಂತಿ ನಿಮಿತ್ತ ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಲಾಲಘಡ ಮಾರುತಿ ದೇವಸ್ಥಾನದ ರಥೋತ್ಸವವು ಗುರುವಾರ ಸಕಲ ವಾದ್ಯ,ಮೇಳಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿAದ ಜರುಗಿತು.


ಬೆಳಿಗ್ಗೆ ದೇವಸ್ಥಾನದಲ್ಲಿ ಹನುಮನ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದರು. ಮದ್ಯಾಹ್ನ ಅನ್ನ ದಾಹೋಹ ಏರ್ಪಡಿಸಲಾಗಿತ್ತು


ಶಾಸಕ ಎನ್‌ಎಚ್.ಕೋನರಡ್ಡಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿ ಕುರಿತಾಗಿ ಜೀರ್ಣೊದ್ಧಾರ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಈಗಾಗಲೇ ಸರಕಾರದಿಂದ ಅನುದಾನ ನೀಡಲಾಗಿದ್ದು ಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ಒದಗಿಸುವ ಮೂಲಕ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಜೀರ್ಣೋದ್ಧಾರ ಸಮಿತಿಯ ರಾಯನಗೌಡ ಪಾಟೀಲ್,ಪ್ರಭು ಇಬ್ರಾಹಿಂಪೂರ,ಅಪ್ಪಣ್ಣ ಹಳ್ಳದ,ಚನ್ನಪ್ಪ ನಾಗರಳ್ಳಿ. ಶ್ರೀಧರ ಪಾರೆಗುಂಗೊAಡ, ಸಂತೋಷ ಅಸುಂಡಿ.ಮAಜು ಆರೇರ.ರಾಜು ಹಿರಗಣ್ಣವರ.ಮುರಳಿ ಹೆಬಸೂರ.ಆನಂದ ಹವಳಕೋಡ.ಮಂಜು ಜಾಧವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.