Home ಜಿಲ್ಲೆ ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ನಾಯಕ

ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ನಾಯಕ

ಸೈದಾಪುರ:ಏ.6:ಶೋಷಿತರ ಹಕ್ಕುಗಳಿಗಾಗಿ ಮತ್ತು ದಲಿತರಿಗೆ ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಜೀವನದುದ್ದಕ್ಕೂ ಹೋರಾಡಿದ ನಾಯಕ ಎಂದು ಮಾದಿಗ ದಂಡೋರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜು ಮೇತ್ರೆ ಕಡೇಚೂರು ಅಭಿಪ್ರಾಯಪಟ್ಟರು.
ಪಟ್ಟಣದ ಬಾಬು ಜಗಜೀವನ್‍ರಾಮ್ ವೃತ್ತದಲ್ಲಿ ಮಾದಿಗ ದಂಡೋರ ಸಮಿತಿಯಿಂದ ಜಗಜೀವನ್‍ರಾಮ್‍ರ 119ನೇ ಜಯಂತ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಸ್ವತಂತ್ರ ಭಾರತದ ಮಾಜಿ ಉಪ ಪ್ರಧಾನಿಗಳಾಗಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್‍ರಾಮ್ ಅವರು ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗಿ ಮಾಡಿದರು. ತುಳಿತಕ್ಕೊಳಗಾದ ವರ್ಗಗಳ ಹಕ್ಕುಗಳಿಗಾಗಿ ಹೋರಾಡಿದ ಧೀಮಂತ ನಾಯಕ. ಅವರ ತ್ಯಾಗ ಮತ್ತು ದೇಶಕ್ಕೆ ನೀಡಿದ ಕೊಡುಗೆಯನ್ನು ಯುವ ಪೀಳಿಗೆಗೆ ತಲುಪಿಸುವುದು ಹಾಗೂ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಶಾಂತಿ ಸಹಬಾಳ್ವೆ ಮೂಲಕ ಜೀವನ ನಡೆಸುವಂತೆ ಯುವಕರಿಗೆ ಮನವರಿಕೆ ಮಾಡಿಕೊಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಸೈದಾಪುರ ವಲಯ ಅಧ್ಯಕ್ಷ ಅರ್ಜುನ್ ಚಿಗಾನೂರ್, ಯೋಗೇಶ್ ಕುಮಾರ ದೊಕಾ, ಜೆಡಿಎಸ್ ಯುವನಾಯಕ ರಾಜೇಶ್ ಶೆಟ್ಟಿ ಉಡಿಪಿ, ಬನ್ನಪ್ಪ ಬೆಟ್ಟಪ್ಪನೋರ್, ಸಿದ್ದು ಪೂಜಾರಿ, ಪ್ರಭು ಗೂಗಲ್, ವೀರೇಶ್ ಸಜ್ಜನ, ಶಿವುಪಾಟೀಲ್, ಆಂಜನೇಯ ರಾಂಪುರ, ವಾಬಣ್ಣ, ಕಾಸಿಮಪ್ಪ ವಾಕಿಟಿ, ಕಡೇಚೂರು, ಜೀತೇಂದ್ರ ಪಾಟೀಲ್ ಬಾಡಿಯಾಳ, ಭೀಮಶಪ್ಪ, ನರಸಪ್ಪ ನೀಲಹಳ್ಳಿ, ತಾಯಪ್ಪ, ಅಂಜಪ್ಪ ಸೈದಾಪುರ, ಶಾಂತಪ್ಪ, ಮಲ್ಲಪ್ಪ ಕೂಡ್ಲುರ್, ಸಾಗರ್ ಹುಲ್ಲೆರ್, ಷಣ್ಮುಖ ಸೈದಾಪುರ, ಬಾಬು ಮೇಕಲ್, ನಾಗೇಶ್ ಕಂಬೋಲ್, ಬುರಾನಪ್ಪ, ರೆಡ್ಡಿ, ಆಕಾಶ್, ದೇವು, ಅನಿಲ್, ರೋಹಿತ್, ನಾಗೇಶ್ ಉಜ್ಜಿ, ಬಾಬು ಉಜ್ಜಿ, ಅರ್ಜುನ್ ಸಂಬ್ರ ಸೇರಿದಂತೆ ಇತರರಿದ್ದರು.