
ಜೇವರ್ಗಿ: ಅಧ್ಯಾಪಕ ವೃತ್ತಿ ಶ್ರೇಷ್ಠವಾದದ್ದು ಶಿಕ್ಷಕರು ಸೇವಾ ಮತ್ತು ತ್ಯಾಗಜೀವಿಗಳಾಗಿ ಬದ್ಧತೆ ಉಳ್ಳವರಾಗಿರ ತಮ್ಮ ಸೇವೆಯನ್ನು ಕಚ್ಚುಕಟ್ಟಾಗಿ ನಿರ್ವಾಹಿಸುವರು, ಈ ನಿಟ್ಟಿನಲ್ಲಿ ಪ್ರೊ. ಪ್ರಮೋದ ನಾರಾಯಣ ಪೇಟ್ಕರ್ ಅವರು, ಶೈಕ್ಷಣಿಕ ಸೇವೆಯಲ್ಲಿ ಅದ್ಭುತ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಕಲಬುರಗಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಸಂಗಣ್ಣ ವಿ. ನಿಷ್ಠಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಪೆÇ್ರ. ಪ್ರಮೋದ್ ಎಸ್. ನಾರಾಯಣಪೇಟ್ಕರ್ ಅವರ ಸೇವಾ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರಾಂಶುಪಾಲೆ ಡಾ. ಶಾಂತಾ ಅಸ್ಟಿಗೆ ಅಧ್ಯಕ್ಷತೆ ವಹಿಸಿದ್ದರು. ಸೇವಾ ನಿವೃತ್ತ ರಾದ ಪೆÇ್ರ. ಪ್ರಮೋದ್ ನಾರಾಯಣಪೇಟ್ಕರ್ ಮಾತನಾಡಿದರು.
ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎನ್. ಜಿ. ಶ್ರೀಧರ್, ಡಾ. ರೂಪಾ ಕುಲ್ಕರ್ಣಿ, ವರ್ಷಿಣಿ ನಾರಾಯಣಪೇಟ್ಕರ್ ಮಾತನಾಡಿದರು. ಸಿಬ್ಬಂದಿ ಕಾರ್ಯದರ್ಶಿ ಡಾ. ಖಾಜಾವಲಿ ಈಚನಾಳ ಪ್ರಾಸ್ತಾವಿಕ ನುಡಿದರು. ಹಿಂದಿ ವಿಭಾಗದ ಮುಖ್ಯಸ್ಥ ಕುಪೇಂದ್ರ ಸ್ವಾಗತಿಸಿದರು. ಕನ್ನಡ ಅಧ್ಯಾಪಕ ಭೀಮಣ್ಣ ನಿರೂಪಿಸಿದರು.
ಐಕ್ಯುಏಸಿ ಸಂಚಾಲಕ ಡಾ. ಸ?ಂದೀಪ್ ತಿವಾರಿ ವಂದಿಸಿದರು. ಅನುರಾಧಾ ನಾರಾಣಪೇಟಕರ್, ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





















