ರೈತರಿಗೆ ಸಡಗರದ ಹಬ್ಬ ಸಂಭ್ರಮದ ಕೂಟ : ಎಳ್ಳಮಾಸಿ

ಕಮಲನಗರ:ಡಿ.19:ಹಳ್ಳಿಯ ಒಕ್ಕಲಿಗರಿಗೆ ಇದೊಂದು ಮಹತ್ವದ ಹಬ್ಬದ ದಿನವಾಗಿದೆ. ಹಿಂಗಾರು ಬೆಳೆಗಳಲ್ಲಿ ಚಳಿಯ ವಾತಾವರಣದಲ್ಲಿ ಬೆಳೆಸಿದ ಬೆಳೆಗಳಿಗೆ ವಿವಿಧ ಪ್ರಕಾರದ ಅಡುಗೆಯನ್ನು ಮಾಡಿಕೊಂಡು ಬುಟ್ಟಿಯಲ್ಲಿ ತೆಗೆದುಕೊಂಡು ಹೊಲಕ್ಕೆ ಹೋಗಿ ಹೊಲದಲ್ಲಿರುವ ಬನ್ನಿ ಗಿಡದ ಕೆಳಗೆ ಪಾಂಡವರ ಸಂಕೇತವಾಗಿರುವ ಐದು ಕಲ್ಲುಗಳನ್ನು ಪೂಜೆ ಮಾಡುತ್ತಾರೆ. ಹೊಲದಲ್ಲಿ ಕೊಂಪೆಮಾಡಿ ಅದರ ಒಳಗಡೆ ಪಾಂಡವರ ಮೂರ್ತಿ ಇಟ್ಟು ಹೂಗಳಿಂದ ಅಲಂಕರಿಸಿ ಪೂಜೆಯನ್ನು ಸಲ್ಲಿಸುತ್ತಾರೆ.

ವಿಧಿ ವಿಧಾನಗಳೊಂದಿಗೆ ಮಂತ್ರ ಇಲ್ಲದೆ ಆಚರಣೆ ಇಲ್ಲದೆ ಪೂಜೆಯನ್ನು ಭಿನ್ನ ರೀತಿಯಲ್ಲಿ ಕಾಣದೆ,ಸರಳ ರೀತಿಯಲ್ಲಿ ಪೂಜೆ ಸಲ್ಲಿಸಿ ಭೂಮಿ ತಾಯಿಗೆ ನಮಿಸುತ್ತಾನೆ. ಎಡೆ ತೋರಿಸಿ ಚರಗವನ್ನು ಚೆಲ್ಲುತಾನೆ.
ಹೊಲಗಳು ಹಚ್ಚ ಹಸಿರಿನ ಬೆಳೆಗಳಿಂದ ಮೈತುಂಬಿಕೊಂಡು ಕಂಗೊಳಿಸುವಂತೆ ತುಂಬು ಬಸುರಿಯಂತಿರುವ ಭೂಮಿತಾಯಿ ಪೂಜೆ ಸಲ್ಲಿಸುವ ರೈತರ ಪ್ರಮುಖ ಹಬ್ಬಗಳಲ್ಲೊಂದಾದ ಎಳ್ಳು ಅಮಾವಾಸ್ಯೆ ಹಬ್ಬ ಹೆಮ್ಮೆಯ ಹಬ್ಬ ಇದಾಗಿದೆ.
ಅಂತೆಯೇ ಭೂಮಿಯು ಎಲ್ಲಾ ಬೆಳೆಗಳಿಂದ ಹೊಲ ಹಚ್ಚಹಸಿರಾಗಿದ್ದಾಗ ಆಕೆ ಗರ್ಭಿಣಿಯಾಗಿರುತ್ತಾಳೆ ಅವಳಿಗೆ ಬಯಕೆ ತೀರುವ ನೀಟ್ಟಿನಲ್ಲಿ ಈ ರೀತಿಯ ಎಳ್ಳು ಅಮಾವಾಸ್ಯೆ ಹಬ್ಬ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.ಹೀಗಾಗಿ ಈ ಹಬ್ಬಕ್ಕೆ ವಿಶೇಷ ರೀತಿಯಲ್ಲಿ ವಿವಿಧ ಪದಾರ್ಥಗಳಿಂದ ಮಾಡಿದ ಅಡುಗೆಯಿಂದ ಕಾಯಿ ಪಲ್ಯಮಾಡುತ್ತಾರೆ. ಅವರೆಕಾಯಿ,ಕಡಲೆಬೀಜ, ಬಟ್ಟಾಣಿ, ತೊಗರಿಕಾಯಿ, ಮಂತ್ಯೆಪಲ್ಯ ,ಪಾಲಕ್, ಉಳ್ಳಾಗಡ್ಡಿ ತಪ್ಪಲು, ಗಜರಿ, ಈರುಳ್ಳಿ ಸೋಪು, ಹಸಿ ಹುಣಸಿನಕಾಯಿ, ಹಣ್ಣು,ಹಸಿ ತರಕಾರಿ ಕಡಲೆ ಹಿಟ್ಟಿನಿಂದ ಸಿದ್ಧಪಡಿಸಿರುವ ಭಜ್ಜಿ ತಯಾರಿಸುತ್ತಾರೆ. ನಾನಾ ತರಹದ ಅಡಿಗೆ ಮಾಡಿ ಕಿಚಡಿ ಅನ್ನ, ಬಿಳಿ ಅನ್ನ, ಚಕೋಲಿ, ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಅಂಬಲಿ, ಹುಗ್ಗಿ ಒಂದೇ ಎರಡೇ ಹತ್ತಾರು ತರಹದ ತಿಂಡಿ ತಿನಿಸುಗಳನ್ನು ಭಜ್ಜಿ ರೊಟ್ಟಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಭೂತಾಯಿಗೆ ಪೂಜಿಸಿ ಎಡೆ ತೋರಿಸಿ ಕೊಂಪೆಯ ಸುತ್ತಲೂ ಹಾಗೂ ಬೆಳೆ ಬೆಳೆದ ಹೊಲದಲ್ಲಿ ನಿಂತು ಚರಗವನ್ನು ಚೆಲ್ಲುತ್ತಾರೆ.

ಹೊಲದ ರೈತನಾಗಿರುವನು ಕುಂಬಾರ ಮನೆಯಿಂದ ತಂದಿರುವ ಮಡಿಕೆಯನ್ನು ಮಗ್ಗಿ -ಮುಚ್ಚಳದಲ್ಲಿ ಮಾಡಿರುವ ಆಹಾರ ಪದಾರ್ಥಗಳನ್ನು ಮಾಡಿ ಮಿಶ್ರಣ ಮಾಡಿ ಚೆಲ್ಲುತ್ತಾರೆ ಓಲಿಗ್ಯಾ…ಓಲಿಗ್ಯಾಎಂದು ಹೇಳಿದರೆ ಇನ್ನೊಬ್ಬ ಚಾಲೋ…ಪಲಗ್ಯಾ ಎಂದು ಘೋಷಣೆಗಳೊಂದಿಗೆ ಚರಗ ಚೆಲ್ಲುತ್ತಾರೆ. ಪಾಂಡವರ ಮೂರ್ತಿ ಮುಂದೆ ದೀರ್ಘ ದಂಡ ನಮಸ್ಕಾರ ಮಾಡಿ ದಾಸೋಹ ಮಾಡಿಸುತ್ತಾರೆ. ಈ ದಾಸೋಸಕೆ ಎಲ್ಲಿಲ್ಲದ ಸಂಬಂಧಿಕರು ಹಳ್ಳಿಯನ್ನು ಬಿಟ್ಟು ಹೋಗಿದ್ದವರು ಪಟ್ಟಣದಿಂದ ಹಳ್ಳಿ ಕಡೆ ಮುಖ ಮಾಡಿದವರು ಸಂಬಂಧಿಕರು ಹಾಗೂ ಆತ್ಮೀಯರೆಲ್ಲ ಹೊಲಕ್ಕೆ ಬಂದು ಭೋಜನವನ್ನು ಸ್ವೀಕರಿಸುತ್ತಾರೆ. ಮಹಿಳೆಯರು ಯುವಕರು ಮಕ್ಕಳು ಭೂಮಿತಾಯಿಯ ಮಕ್ಕಳಂತೆ ಭೂಮಿಯನ್ನು ನಂಬಿಕೊಂಡಿರುವ ರೈತರಿಗೆ ಇದೊಂದು ಜೀವನೋತ್ಸಾಹದ ಸಂಭ್ರಮದ ಹಬ್ಬ ಇದ್ದಾಗಿದೆ. ಅಂತೆಯೇ ಭೂಮಿ ತಾಯಿಯ ಬಯಕೆ ತೀರಿಸುವ ಹಬ್ಬವು ಇದಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ .ಹಳ್ಳಿಯ ಒಕ್ಕಲಿಗರಿಗೆ ಇದೊಂದು ಮಹತ್ವದ ಹಬ್ಬದ ದಿನವಾಗಿದೆ.
ಈ ಹಬ್ಬದಲ್ಲಿ ರೈತರ ಶ್ರಮ ಫಲ ಸಿಗಲಿ ಬೆಳೆ ಹುಲುಸಾಗಿ ಬರಲಿ ಎನ್ನುವ ಉದ್ದೇಶ ಇದಾಗಿದೆ.
ರೈತರ ಹೊಲಗಳಲ್ಲಿ ಜೋಳದ ತೆನೆಯ ಕಾಳುಗಳನ್ನು ತಿನ್ನಬಾರದು ಬೆಳೆದಿರುವ ಬೆಳೆಯನ್ನ ಕೀಟನಾಶಕ ತಡೆಗಟ್ಟಬೇಕೆಂದು ಚರಗ ಚೆಲ್ಲುವ ಪದ್ಧತಿಯನ್ನು ಇರುವುದು ರೈತ ನಂಬಿದ್ದಾನೆ.

ಈ ಕಾರಣದಿಂದ ಚರಗಾ ಚೆಲುವ ಪದ್ಧತಿ ಇಂದಿಗೂ ಹೊಲದ ಸುತ್ತಮುತ್ತಲು ಚರಗಾ ಚೆಲ್ಲುವುದು ಕೊಂಡುಕೊಳ್ಳಬಹುದು. ಕಮಲನಗರ ತಾಲೂಕಿನಾದ್ಯಂತ ಸುತ್ತಮುತ್ತಲಿನ
ರೈತರು ಕುಟುಂಬಗಳು ಇಂದು ಪ್ರತಿ ಹೊಲಗಳಲ್ಲಿ ಎಳ್ಳು ಅಮಾವಾಸ್ಯೆ ಆಚರಿಸುತ್ತಾರೆ. ಇದರಿಂದ ಪಕ್ಷಿಗಳು ಕೀಟ ನಿಯಂತ್ರಕ್ಕೆ ಒತ್ತು ನೀಡುವ ನೈಸರ್ಗಿ ಪದ್ಧತಿ ಇರುವುದನ್ನು
ಕೃಷಿಯ ಅವಿಭಾಜ್ಯ ಅಂಗವಾಗಿದೆ. ಇದರೊಂದಿಗೆ ಸಡಗರ ಸಂಭ್ರಮದಿಂದ ಇಡೀ ಹೊಲದ ಬೆಳೆ ಸಮೃದ್ಧಿಯಾಗಲು ರೈತನ ಗಾಢವಾದ ನಂಬಿಕೆಯಾಗಿದೆ ಕುಟುಂಬ ನೆಂಟರು ಸ್ನೇಹಿತರಲ್ಲರೂ ಹಾಗೂ ಮಹಿಳೆಯರು ಯುವಕರು ಮತ್ತು ಮಕ್ಕಳು ಹೊಲದಲ್ಲಿ ಸೇರಿ ಒಟ್ಟಿಗೆ ಊಟ ಮಾಡುವ ಊಟ ಸಂಭ್ರಮದ ಕೂಟವೆಂದೇ ತಿಳಿಬೇಕಾಗಿದೆ.