
ಕಲಬುರಗಿ,ಏ.13-ಮನೆ ಬೀಗ ಮುರಿದು 2 ಲಕ್ಷ ರೂಪಾಯಿ ನಗದು ಕಳವು ಮಾಡಿರುವ ಘಟನೆ ನಗರದ ಸಂತೋಷ ಕಾಲೋನಿಯ ವರದಾ ನಗರದಲ್ಲಿ ನಡೆದಿದೆ.
ಶರಣಮ್ಮ ಸಂತೋಷ ಸಜ್ಜನ್ ಎಂಬುವವರ ಮನೆ ಬೀಗ ಮುರಿದು ಕಳ್ಳರು 2 ಲಕ್ಷ ರೂ.ನಗದು ಹಣ ಕಳವು ಮಾಡಿಕೊಂಡು ಹೋಗಿದ್ದಾರೆ. ಇವರು ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದ ಪ್ರಯುಕ್ತ ಮನೆಗೆ ಬೀಗ ಹಾಕಿಕೊಂಡು ಶಹಾಪುರ ತಾಲ್ಲೂಕಿನ ಕನ್ಯಾಕೋಳೂರಿಗೆ ಹೋಗಿದ್ದಾಗ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















