
ಕಲಬುರಗಿ ;ಏ.13: ಅರ್ಹತೆ ಇಲ್ಲದವರನ್ನು ಅಧಿಕಾರ ನೀಡುತ್ತಿರುವ ಶಾಸಕ ಎಂ.ವೈ.ಪಾಟೀಲ ಮತ್ತು ಅವರ ಸುಪುತ್ರ ಅರುಣಕುಮಾರ ಪಾಟೀಲ ನಡುವಳಿಕೆ ವಿರುದ್ಧ ನಮ್ಮ ಹೋರಾಟ ಮುಂದುವರುತ್ತದೆ ಎಂದು ಮಾಜಿ ಸಚಿವ ಮಾಲಿಕಯ್ಯಾ ಗುತ್ತೇದಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಎಂ.ವೈ.ಪಾಟೀಲ ಅವರನ್ನು ಮೂಲೆಗುಂಪು ಮಾಡಿ ಪುತ್ರ ಅರುಣಕುಮಾರ ಪಾಟೀಲ ಅವರೇ ತಾಲ್ಲೂಕಿನಲ್ಲಿ ರಾಜ್ಯಭಾರ ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳ ಮುಖಂಡರನ್ನು ಗುರುತಿಸಿ ಅಧಿಕಾರ ನೀಡಬೇಕು. ಅರುಣಕುಮಾರ ಪಾಟೀಲ ಮುನಿಮನಾಗಿ ಕೆಲಸ ಮಾಡ್ತಿಲ್ಲ. ಶಾಸಕರೇ ಅರುಣಕುಮಾರ ಪಾಟೀಲ ಕೈಯಲ್ಲಿ ಮುನಿಮನಾಗಿ ಕೆಲಸ ಮಾಡುತ್ತಿರುವುದು ಇಡೀ ಕ್ಷೇತ್ರದ ಜನರಿಗೆ ಗೊತ್ತಿರುವ ವಿಷಯ ಎಂದು ಗುತ್ತೇದಾರ ತಿಳಿಸಿದರು.
ಶಾಸಕ ಮತ್ತು ಪುತ್ರ ಅರುಣಕುಮಾರ ಪಾಟೀಲ ಅವರಿಗೆ ಅಷ್ಟೇ ಕಾರ್ಯಕತರು, ಅಭಿಮಾನಿಗಳು ಮತ್ತು ಮುಖಂಡರು ಇಲ್ಲ. ನಮಗೂ ಕೂಡಾ ಸಾವಿರಾರು ಹಿರಿಯ ಮುಖಂಡರು, ಕಾರ್ಯಕರ್ತರು ಇದ್ದಾರೆ. ಮಾಲಿಕಯ್ಯಾ ಗುತ್ತೇದಾರಗೆ ಯಾರು ಮೂಲೆಗುಂಪು ಮಾಸಲು ಸಾಧ್ಯವಿಲ್ಲ ಎಂದು ಗುಡುಗಿದರು. ಶಾಸಕರ ಚೇಲಾಗಳು ನಾವು ಯಾವ ಪಕ್ಷದಲ್ಲಿ ಇದ್ದಾರೆ ಎಂದು ಪ್ರಶ್ನೆ ಮಾಡುತ್ತಾರೆ. ನನ್ನ ರಕ್ತದಲ್ಲೇ ಕಾಂಗ್ರೆಸ್ ಪಕ್ಷದ ರಕ್ತ ಹರಿಯುತ್ತಿದೆ ಎಂದು ಶಾಸಕರ ಆಪ್ತರಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಮಾತನಾಡಿ, ಪಕ್ಷ ಸಂಘಟನೆ ಮಾಡುವವರನ್ನು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೇಟ್ ನೀಡಬೇಕು. ಆರ್.ಎಸ್.ಎಸ್. ಹಿನ್ನೆಲೆ ಇರುವವರನ್ನು ಕಾಂಗ್ರೆಸ್ ಪಕ್ಷ ಪರಿಗಣಿಸಬಾರದು ಎಂದು ಪಟೇಲ್ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಜೆ.ಎಂ.ಕೊರಬು, ಸಿದ್ದು ಸಾಲಿಮನಿ, ನಾನಾಗೌಡ ಪಾಟೀಲ, ದೇವಿಂದ್ರ ಜಮಾದಾರ, ವಿಶ್ವನಾಥ ಕರ್ನಾಡ, ಜಮೀಲ ಗೌಂಡಿ, ವಿಜುಗೌಡ ಪಾಟೀಲ ಸೇರಿದಂತೆ ಅನೇಕ ಮುಖಂಡರು ಇದ್ದರು.


















