Home ಜಿಲ್ಲೆ ವಿಪ್ರಮಕ್ಕಳ ಬೇಸಿಗೆ ಧಾರ್ಮಿಕ ಶಿಬಿರ ಸಂಪನ್ನಗುರು ಅನುಗ್ರಹವಾದರೆ ಸಕಲವೂ ಲಭಿಸುತ್ತದೆ : ಪುರಾಣಿಕ

ವಿಪ್ರಮಕ್ಕಳ ಬೇಸಿಗೆ ಧಾರ್ಮಿಕ ಶಿಬಿರ ಸಂಪನ್ನಗುರು ಅನುಗ್ರಹವಾದರೆ ಸಕಲವೂ ಲಭಿಸುತ್ತದೆ : ಪುರಾಣಿಕ

ಯಾದಗಿರಿ : ಏ.೧೩:ಗುರುಗಳಲ್ಲಿ ನಾವು ಪ್ರಾರ್ಥಿಸಬೇಕಾಗಿರುವುದು ಕೇವಲ ಅನುಗ್ರಹವನ್ನು ಮತ್ತು ಗುರು ಕೃಪೆಯನ್ನು ಮಾತ್ರ.
ಗುರು ಕೃಪೆ ನಮ್ಮ ಮೇಲೆ ಹರಿಯಿತೆಂದರೆ ಸಕಲವೂ ದೊರಕುತ್ತದೆ ಎಂದು ಪಂಡಿತ್ ನರಸಿಂಹಾಚಾರ್ ಪುರಾಣಿಕ ಹೇಳಿದರು

ಅವರು ಪ್ರತಿವರ್ಷದಂತೆ ಈ ವರ್ಷವೂ ಮಕ್ಕಳಿಗಾಗಿ ಏರ್ಪಡಿಸಿದ ವಿಶೇಷ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಲಿಕಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡಿ, ಶಾಸ್ತ್ರಗಳು ವಿದ್ಯೆಯನ್ನು ಪಡೆಯುವುದೇ ದೊಡ್ಡ ಸಾಧನೆ ಯಾಗಲಾರದು ಎಂದು ಒತ್ತಿ ಹೇಳುತ್ತವೆ. ಕಾರಣ ಅದರೊಡನೆ ನಮ್ರತೆಯೂ ಇರಬೇಕು. ವಿಧ್ಯೆಯು ವಿನಯದಿಂದ ಭೂಷಿತವಾದಾಗ ಮಾತ್ರ ವಿದ್ಯೆ ಪರಿಪೂರ್ಣವಾಗಿ ನಮಗೆ ದೊರಕುತ್ತದೆ ಎಂದು ಹೇಳಿದ ಅವರು ಈಗ ಕಲಿತ ವಿದ್ಯೆಯನ್ನು ದಿನಂಪ್ರತಿ ಹಿತಾವತ್ತಾಗಿ ಮುಂದುವರಿಸಿಕೊAಡು ಹೋಗಬೇಕೆಂದು ಮಕ್ಕಳಿಗೆ ಆಶೀರ್ವಚನ ನೀಡಿದರು.

ನಗರದ ಉತ್ತರಾದಿ ಮಠ ಶ್ರೀ ರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ನಾಳೆಯಿಂದ ಒಂದು ವಾರಗಳ ಕಾಲ ಶ್ರೀಮದ್ ಉತ್ತರಾದಿ ಮಠ ಹಾಗೂ ವಿಶ್ವಮದ್ವ ಮಹಾ ಪರಿಷತ್ ಯಾದಗಿರಿ ಘಟಕದ ವತಿಯಿಂದ ಶ್ರೀ ೧೦೮ ಶ್ರೀ ಸತ್ಯ ಪ್ರಮೋದ ತೀರ್ಥ ಕರಕಮಲ ಸಂಜಾತರಾದ ಶ್ರೀ ೧೦೮ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಪರಮಾನುಗ್ರಹದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು

ಏಪ್ರಿಲ್ ೬ ಸೋಮವಾರ ಏ. ೧೨ರ ರವಿವಾರದವರೆಗೆ ಒಟ್ಟು ಏಳು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ದೇವರ ನಾಮ, ದೇವರ ಸ್ತೋತ್ರಗಳು, ಹರಿಕಥಾಮೃತಸಾರ, ತ್ರಿಕಾಲ ಸಂಧ್ಯಾವAದನೆ, ಸೂಳಾದಿಗಳು, ನಿತ್ಯ ನೈಮೆತಿಕ ವಿಚಾರ, ಯತಿಗಳ ದಾಸರ ಪರಿಚಯ, ಹಾಗೂ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ತಿಳಿಸಿಕೊಡಲಾಯಿತು.

ಒಂದು ವಾರದ ಕಾಲ ನಡೆದ ಈ ಶಿಬಿರದಲ್ಲಿ ಉತ್ತರಾದಿ ಮಠದ ವ್ಯವಸ್ಥಾಪಕರಾದ ರಾಘವೇಂದ್ರ ಜೋಶಿ ಅವರು ಕಲಿಕಾರ್ಥಿಗಳಿಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿದರೆ, ೭ ದಿನಗಳ ಕಾಲ ಶಿಬಿರಾರ್ಥಿಗಳಿಗೆ ಪಂ.ನರಸಿAಹಾಚಾರ್ ಪುರಾಣಿಕ ಅವರ ಜೊತೆ ಹೆಣ್ಣು ಮಕ್ಕಳಿಗೆ ಶ್ರೀಮತಿ ದಿವ್ಯಾ ಪುರಾಣಿಕ ಮತ್ತು ಗಂಡು ಮಕ್ಕಳಿಗೆ ಪಂ.ಹರೀಶ ಅಚಾರ ನಾರಾಯಣಪೇಟ್ ಅವರುಗಳು ಧಾರ್ಮಿಕ ವಿಷಯವಾಗಿ ಭೊದನೆ ಮಾಡಿದರು.

ಇದೇ ಸಂದರ್ಭದಲ್ಲಿ ದಿನೇಶ ವಿಸಿ ಮತ್ತು ಲಕ್ಷ್ಮಿಕಾಂತ್ ಕುಲಕರ್ಣಿ ಅವರಿಗೆ ಕಳೆದ ಜನವರಿ ೨೬ ರಂದು ಜಿಲ್ಲಾಡಳಿತ ವತಿಯಿಂದ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿರುವುದನ್ನು ಸ್ಮರಿಸಿ, ಶ್ರೀಮದ್ ಉತ್ತರಾದಿ ಮಠ ಹಾಗೂ ವಿಶ್ವಮದ್ವ ಮಹಾ ಪರಿಷತ್ ಯಾದಗಿರಿ ಘಟಕದ ವತಿಯಿಂದಲೂ ಸನ್ಮಾನಿಸಿ ಗೌರವಿಸಲಾಯಿತು.

ಈ ಶಿಬಿರದಲ್ಲಿ ನಗರದ ನುರಾರು ವಿಪ್ರ ಮಕ್ಕಳು ಬೇಸಿಗೆಯ ಧಾರ್ಮಿಕ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗಪಡಿಸಿಕೊಳ್ಳವುದರ ಮುಖಾಂತರ ದೇವರ ಅನುಗ್ರಹಕ್ಕೆ ಪಾತ್ರರಾದರು.