
ಕೋಲಾರ,ಏ,೧೩- ದಾವಣಗೆರೆ ದಕ್ಕಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಆಲ್ಪಸಂಖ್ಯಾತ ರಾಜ್ಯ ಮುಖಂಡರಾದ ನಸ್ಸೀರ್ ಆಹಮದ್ ಅವರು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ಕಾರ್ಯ ಮಾಡಲಿಲ್ಲ ಎಂಬ ಆರೋಪಿಸಿ ದಾವಣಗೆರೆಯ ಆಲ್ಪಸಂಖ್ಯಾತ ಮುಖಂಡರು ಎ.ಐ.ಸಿ.ಸಿ.ಗೆ ದೂರಿರುವ ಹಿನ್ನಲೆಯಲ್ಲಿ ನಸ್ಸೀರ್ ಆಹ್ಮದ್ ಅವರು ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ಪಡೆಯುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ನಗರದಲ್ಲಿ ಆಲ್ಪಸಂಖ್ಯಾತ ಘಟಕದ ನೇತ್ರತ್ವದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾ ಕಾಂಗ್ರೇಸ್ ಭವನದ ಮುಂದೆ ಪ್ರತಿಭಟಿಸಿದರು.

ದಾವಣಗೆರೆ ಕ್ಷೇತ್ರದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಸಿಗದ ಕಾರಣಕ್ಕೆ ಕಾಂಗ್ರೇಸ್ ಪಕ್ಷದ ಪ್ರಭಾವಿ ಮುಸ್ಲಿಂ ನಾಯಕರು ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದರು. ಕೇರಳದ ಚುನಾವಣೆಯಲ್ಲಿ ವಸತಿ ಸಚಿವ ಜಮೀರ್ ಆಹಮದ್ ಖಾನ್ ಅವರು ದಾವಣಗೆರೆ ಪ್ರಚಾರದಿಂದ ತಪ್ಪಿಸಿ ಕೊಂಡು ಅಂತಿಮ ಗಳಿಗೆಯಲ್ಲಿ ಪ್ರಚಾರದಲ್ಲಿ ದರ್ಶನ ನೀಡಿದರು. ನಸ್ಸೀರ್ ಆಹಮದ್ ಅವರು ಬಾಗಲಕೋಟೆಯ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದರು. ಹಾಗಾಗಿ ದಾವಣಗೆರೆ ಚುನಾವಣೆಯಲ್ಲಿ ಆಲ್ಪಸಂಖ್ಯಾತ ಮತದಾರರಲ್ಲಿ ಗೊಂದಲಕ್ಕೆ ಕಾರಣರಾಗಿ ಭಿನ್ನಮತವು ಸ್ಫೋಟಗೊಂಡಿತು.
ದಾವಣಗೆರೆಯಲ್ಲಿ ಆಲ್ಪಸಂಖ್ಯಾತ ಮುಖಂಡರಾದ ಮುಖ್ಯ ಸಚೇತಕ ಸಲೀಂ ಆಹಮದ್, ಶಾಸಕ ರಿಜ್ವಾನ್ ಹರ್ಷದ್ ಹಾಗೂ ಶಾಸಕರಾದ ಹ್ಯಾರೀಸ್ ಅವರು ಪ್ರಚಾರದಲ್ಲಿದ್ದರು. ಅದರೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಆಲ್ಪಸಂಖ್ಯಾತರ ರಾಜ್ಯ ಘಟಕ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಅಬ್ದುಲ್ ಜಬ್ಬರ್ ಅವರು ತಮಗೆ ಟಿಕೆಟ್ ನೀಡದ ಕಾರಣಕ್ಕೆ ರಾಜ್ಯ ಆಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಏ,೩ ರಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರೂ ಸಹ ವಿಷಯವು ಬಹಿರಂಗವಾಗಿರಲಿಲ್ಲ.
ಈ ವಿಷಯವಾಗಿ ಪಕ್ಷದ ನಾಯಕರಾದ ಮುಖ್ಯ ಸಚೇತಕ ಸಲೀಂ ಆಹಮದ್ ಹಾಗೂ ವಿಧಾನ ಪರಿಷತ್ ಶಾಸಕ ರಿಸ್ವನ್ ಹರ್ಷದ್ ಅವರು ತಮ್ಮ ಪಕ್ಷದ ಅಭ್ಯರ್ಥಿ ಸೋಲಿಗೆ ತಮ್ಮ ಸಮುದಾಯದ ಹಿರಿಯ ನಾಯಕರೇ ಷಡ್ಯಂತರ ನಡೆಸಿದ್ದಾರೆ ಎಂದು ದೂರಿದ ಹಿನ್ನಲೆಯಲ್ಲಿ ಇವರ ಜೂತೆ ಸಮಾಲೋಚಿಸಿರುವ ಎ.ಐ.ಸಿ.ಸಿ. ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ತ್ ಅವರು ಹೈಕಮಾಂಡ್ಗೆ ವರದಿ ಸಲ್ಲಿಸಿದ್ದರು ಎನ್ನಲಾಗಿದೆ. ಇದರ ಜೂತೆಗೆ ಸಲೀಂ ಆಹಮದ್ ಮತ್ತು ರಿಸ್ವಾನ್ ಹರ್ಷದ್ ಅವರು ನೇರವಾಗಿ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗ ಪಡೆಸಿದ್ದರು.
ಈ ಹಿನ್ನಲೆಯಲ್ಲಿ ಕಾಂಗ್ರೇಸ್ ಪಕ್ಷದ ಆಲ್ಪಸಂಖ್ಯಾತ ಘಟಕದಲ್ಲಿ ಭಿನ್ನಮತ, ಗುಂಪುಗಾರಿಕೆಗಳ ಕುರಿತಾದ ಚರ್ಚೆಗಳು ನಡೆದು ಆಲ್ಪಸಂಖ್ಯಾತ ಘಟಕದ ರಾಜ್ಯ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜಿನಾಮೆ ಸಲ್ಲಿಸಿರುವುದು ಎ.ಐ.ಸಿ.ಸಿಯ ಕದ ತಟ್ಟಿ ಆತಂಕಕ್ಕೆ ಒಳಪಡೆಸಿದೆ.
ರಾಜ್ಯದಲ್ಲಿ ಸಚಿವ ಸಂಪುಟ ಪುನರಚನೆಯ ವಿಷಯವು ಪ್ರಸ್ತಪಕ್ಕೆ ಬಂದಿದ್ದು ಸಚಿವ ಜಮೀರ್ ಆಹಮದ್ ಅವರನ್ನು ಸಚಿವ ಸಂಪುಟದ ಪುನರಚನೆಯಲ್ಲಿ ಕೈ ಬಿಡಲು ಹಾಗೂ ನಸ್ಸೀರ್ ಆಹಮದ್ ಅವರನ್ನು ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ರಾಜಿನಾಮೆ ಪಡೆಯಲು ಪಕ್ಷದ ಹೈಕಮಾಂಡ್ ಸೂಚಿಸಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಡಿದ್ದು ಕೋಲಾರ ಜಿಲ್ಲಾ ಕಾಂಗ್ರೇಸ್ ಪಕ್ಷದ ವಲಯದ ಆಲ್ಪಸಂಖ್ಯಾತರ ವಿಭಾಗದಲ್ಲಿ ಸುನಾಮಿಯಂತೆ ಸ್ಪೋಟಕವಾಗಿದೆ.
ನಗರದಲ್ಲಿ ಭಾನುವಾರ ಈ ವಿಷಯವು ಕಾಡ್ಗಿಚ್ಚಿನಂತೆ ಹರಡಿದ್ದು ಜಿಲ್ಲಾ ಕಾಂಗ್ರೆಸ್ ಪಕ್ಷದ ಆಲ್ಪಸಂಖ್ಯಾತ ಮುಖಂಡರು ಹಾಗೂ ವಿವಿಧ ನಿಗಮ ಮಂಡಳಿಗಳಲ್ಲಿ ಸ್ಥಾನ ಮಾನ ಪಡೆದಿದ್ದ ಪದಾಧಿಕಾರಿಗಳು ಸಂಘಟಿತರಾಗಿ ನಗರದಲ್ಲಿ ಜಿಲ್ಲಾ ಕಾಂಗ್ರೇಸ್ ಭವನದ ಮುಂದೆ ಪ್ರತಿಭಟನೆ ನಡೆಸಿ ಯಾವೂದೇ ಕಾರಣಕ್ಕೂ ನಸ್ಸೀರ್ ಅಹಮದ್ ಅವರನ್ನು ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಸ್ಥಾನದಿಂದ ಕೈ ಬಿಟ್ಟರೆ ಕಾಂಗ್ರೇಸ್ ಪಕ್ಷಕ್ಕೆ ಭಾರಿ ನಷ್ಟ ಉಂಟಾಗಲಿದೆ ಇದು ಆಲ್ಪಸಂಖ್ಯಾತ ವಿಭಾಗದಲ್ಲಿನ ನಮ್ಮಲಿನ ಕೆಲವು ನಾಯಕರು ಹೊಡಿರುವ ಷಡ್ಯಾಂತವಾಗಿದೆ ನಸ್ಸೀರ್ ಆಹಮದ್ ಅವರು ವಿದ್ಯಾರ್ಥಿ ದೆಸೆಯಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ೪೦ ವರ್ಷಗಳ ಪರಿಶ್ರಮವಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಈ ಬಗ್ಗೆ ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ರಾಜ್ಯದ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ವಿಷಯವು ನನ್ನ ಗಮನಕ್ಕೂ ಬಂದಿದ್ದು ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿರುವ ಅವರು ಆಲ್ಪಸಂಖ್ಯಾತ ಘಟಕದಲ್ಲಿ ಪದಾಧಿಕಾರಿಗಳು ರಾಜಿನಾಮೆ ಸಲ್ಲಿಸಿರುವುದರಿಂದ ರಾಜ್ಯ ಕಾಂಗ್ರೇಸ್ ಆಲ್ಪಸಂಖ್ಯಾತ ಘಟಕವನ್ನು ವಿಸರ್ಜಿಸಿ ಶೀಘ್ರದಲ್ಲೇ ಪುನರಚನೆ ಮಾಡುವುದಾಗಿ ತಿಳಿಸಿದ್ದಾರೆ ಕಾಂಗ್ರೇಸ್ ಮೂಲಗಳಿಂದ ವರದಿಯಾಗಿದೆ.





















