Home ಜಿಲ್ಲೆ ಕಲಬುರಗಿ ನಿಜವಾದ ಮನುಷ್ಯನನ್ನಾಗಿ ರೂಪಿಸುವ ಶಕ್ತಿ ಎನ್.ಎಸ್.ಎಸ್‍ಗೆ ಇದೆ: ಡಾ. ಖಾಜಾವಲಿ ಈಚನಾಳ

ನಿಜವಾದ ಮನುಷ್ಯನನ್ನಾಗಿ ರೂಪಿಸುವ ಶಕ್ತಿ ಎನ್.ಎಸ್.ಎಸ್‍ಗೆ ಇದೆ: ಡಾ. ಖಾಜಾವಲಿ ಈಚನಾಳ

ಜೇವರ್ಗಿ, ಏ.12- ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿ ಗಳಲ್ಲಿ ರಾಷ್ಟ್ರ ಪ್ರೀತಿ, ರಾಷ್ಟ್ರಭಕ್ತಿ ರಾಷ್ಟ್ರಾಭಿಮಾನ, ಸಹಬಾಳ್ವೆ, ಸಹಿಷ್ಣುತೆ, ಸೌಹಾರ್ದತೆಯನ್ನು ಕಲಿಸುತ್ತದೆ. ಎನ್.ಎಸ್.ಎಸ್. ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿ ರೂಪಿಸುವ ಶಕ್ತಿ ಹೊಂದಿದೆ ಎಂದು ಜೇವರ್ಗಿ ಸರ್ಕಾರಿ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಖಾಜಾವಲಿ ಈಚನಾಳ ಹೇಳಿದರು.
ಅವರು ಗುಲಬರ್ಗಾ ವಿಶ್ವವಿದ್ಯಾಲಯ ರಾಸೇಯೋ ಕೋಶ ಹಾಗೂ ಜೇವರ್ಗಿ ಸಪ್ರದ ಕಾಲೇಜಿನ ಮೂರು ಎನ್ನೆಸ್ಸೆಸ್ ಘಟಕಗಳ ವತಿಯಿಂದ ಕೆಲ್ಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಪನ್ಮೂಲವ್ಯಕ್ತಿಯಾಗಿ ಆಗಮಿಸಿದದ್ದ ಜೇವರ್ಗಿಯ ಕ್ಷೇತ್ರ ಆರೋಗ್ಯಾಧಿಕಾರಿಗಳಾದ ಅಂಬಾರಾಯ ತಂಗಾ
‘ಸಮೂದಾಯ ಆರೋಗ್ಯ ಮತ್ತು ನೆ?ರ್ಮಲ್ಯೀಕರಣ ದಲ್ಲಿ ಯುವಕರ ಪಾತ್ರ’ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಆರೋಗ್ಯ ಶಿಕ್ಷಣ, ಪರಿಸರ ರಕ್ಷಣೆ, ಸಾಂಕ್ರಾಮಿಕ ರೋಗಗಳ ಲಕ್ಷಣ, ಚಿಕಿತ್ಸೆ ಮತ್ತು ಪರಿಹಾರೋಪಾಯ ಗಳ ಕುರಿತು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಾ ಬಿ ಅಸ್ಟಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಐಕ್ಯುಏಸಿ ಸಂಚಾಲಕ ಡಾ. ಸಂದೀಪ ತಿವಾರಿ, ಡಾ. ಖುತೇಜಾ ನಸ್ರಿನ್, ಡಾ. ನಿಜಗುಣ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿಗಳಾದ ಡಾ. ಶರಣಪ್ಪ ಗುಂಡಗುರ್ತಿ, ಕುಪೇಂದ್ರ ರಾಠೋಡ, ಅಪರ್ಣಾ, ವೇದಿಕೆ ಮೇಲಿದ್ದರು. ಅಮರ್ಜಾ ತಂಡದವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟರು.