Home ಜಿಲ್ಲೆ ಕಲಬುರಗಿ ನಿರ್ಣಯಕ್ಕೆ ವಿರುದ್ಧವಾಗಿ ದೇಣಿಗೆ ಸಂಗ್ರಹ

ನಿರ್ಣಯಕ್ಕೆ ವಿರುದ್ಧವಾಗಿ ದೇಣಿಗೆ ಸಂಗ್ರಹ

ಕಲಬುರಗಿ,ಏ 12: ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿಯ ನಿರ್ಣಯಕ್ಕೆ ವಿರುದ್ಧವಾಗಿ ಸಮಿತಿ
ಹೆಸರಲ್ಲಿ ರಸೀದಿಯನ್ನು ಮುದ್ರಿಸಿ ದೇಣಿಗೆ ಸಂಗ್ರಹ ನಡೆಯುತ್ತಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯತ್ವ ಅಭಾಯಾನದ ಪ್ರಮುಖ ಎಂ.ಎಸ್ ಪಾಟೀಲ ನರಿಬೋಳ ಆರೋಪಿಸಿದ್ದಾರೆ.
ಇದರಿಂದ ಸಮೀತಿಯ ಅಧ್ಯಕ್ಷ ಶಾಸಕ ಬಿ.ಆರ್ ಪಾಟೀಲರಿಗೆ, ಕಾರ್ಯಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಬಿ.ಜಿಪಾಟೀಲ, ಸಮಾಜದ ಮುಖಂಡರಿಗೂ ಮಹಾಸಭೆಗೂ ಒಟ್ಟಿನಲ್ಲಿ ಸಮಾಜಕ್ಕೂ ಕೂಡಾ ಕಳಂಕ.ಹಾಗಾಗಿ ಇದನ್ನು ತಡೆಹಿಡಿಯಬೇಕು. ಅಲ್ಲದೆ ಸಮಿತಿಯ ಗಮನಕ್ಕಿಲ್ಲದೆ ಯಾರಾದರೂ ವಸೂಲಿ ಮಾಡುತ್ತಾ ಇದ್ದರಾ ?ಒಂದು ಖಚಿತತೆ ಇಲ್ಲದಿರುವುದು ಗೊಂದಲಕ್ಕೀಡುಮಾಡಿದೆ. ಆದ್ದರಿಂದ ಸಮೀತಿಯ ಅಧ್ಯಕ್ಷರು ಕಾರ್ಯಾಧ್ಯಕ್ಷರು ಮಹಾಸಭೆಯ ಅಧ್ಯಕ್ಷರು ಈ ವಿಷಯಕ್ಕೆ ಸಂಬಂಧಿಸಿದಂತೆ ಜಾಗೃತರಾಗಿ ದೇಣಿಗೆ ರಸೀದಿ ವಶಕ್ಕೆ ಪಡೆಯಬೇಕು. ಸಮಿತಿಯ ಹೆಸರು ದುರುಪಯೋಗ ಪಡಿಸಿಕೊಂಡು ಇಂತಹ ಕೆಲಸಕ್ಕೆ ಇಳಿದಿದ್ದರೆ ಅವರ ಮೇಲೆ ದೂರು ದಾಖಲಿಸಬೇಕು ಎಂದು ಎಂ.ಎಸ್ ಪಾಟೀಲ ನರಿಬೋಳ ಆಗ್ರಹಿಸಿದ್ದಾರೆ.