Home ಜಿಲ್ಲೆ ಕಲಬುರಗಿ ಸಮುದಾಯ ಕಟ್ಟುವ ಕೆಲಸ ಆಗಬೇಕು: ಡಾ. ರಮೇಶ್ ಲಂಡನಕರ್

ಸಮುದಾಯ ಕಟ್ಟುವ ಕೆಲಸ ಆಗಬೇಕು: ಡಾ. ರಮೇಶ್ ಲಂಡನಕರ್

ಕಲಬುರಗಿ:ಏ.12:ನಗರದ ಅನಿರುದ್ಧ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಕಲ್ಬುರ್ಗಿಯ ಸಾಮ್ರಾಟ್ ಅಶೋಕ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್ ಎಸ್ ಎಸ್ ಘಟಕದ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭದ ಉದ್ಘಾಟಕರಾದ ಗುಲ್ಬರ್ಗ ವಿಶ್ವವಿದ್ಯಾಲಯ ಕಲ್ಬುರ್ಗಿಯ ಕುಲ ಸಚಿವರಾದ ಡಾ. ರಮೇಶ್ ಲಂಡನಕರ್ ಅವರು ಮೇಲಿನಂತೆ ನುಡಿದರು. ಭಾರತ ದೇಶದಲ್ಲಿ ಶತಶತಮಾನಗಳಿಂದ ಅನ್ಯಾಯ ದಬ್ಬಾಳಿಕೆ ದೌರ್ಜನ್ಯ ಇವುಗಳ ವಿರುದ್ಧ ಹೋರಾಡಿದ ಮಹಾತ್ಮ ಗೌತಮ ಬುದ್ಧ ,ಜ್ಯೋತಿಬಾಪುಲೆ , ಬಸವಣ್ಣ ಮತ್ತು ಡಾ. ಅಂಬೇಡ್ಕರರು ತನಗಾಗಿ ಬದುಕಲಿಲ್ಲ ಸಮಾಜಕ್ಕಾಗಿ ಬದುಕಿ ಚರಿತ್ರೆಯನ್ನು ಸೃಷ್ಟಿಸಿದ್ದಾರೆ. ಬಲಿಷ್ಠ ಯುವಕರ ಭಾರತವಾಗಬೇಕಾದರೆ ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು ವೈಜ್ಞಾನಿಕ ಚಿಂತನೆಗಳನ್ನು ಅವಳಿಸಿಕೊಂಡು ದೇಶ ಅಭಿವೃದ್ಧಿ ಕೈಗೊಳ್ಳಬೇಕು ಸಮಾಜದಲ್ಲಿ ಸಮಾನತೆ ತರುವ ವಿಚಾರಗಳು ವಿದ್ಯಾರ್ಥಿಗಳ ಅಳವಡಿಸಿಕೊಳ್ಳಬೇಕು ಎಂದರು.
ಪುಸ್ತಕ ಬಿಡುಗಡೆಗೊಳಿಸಿದ ರಾಷ್ಟ್ರೀಯ ಸೇವಾ ಯೋಜನೆಯ ಕೋಶ ಗುಲ್ಬರ್ಗ ವಿಶ್ವವಿದ್ಯಾಲಯ ಕಲ್ಬುರ್ಗಿಯ ಸಂಯೋಜಕರಾದ ಡಾ. ಎಚ್.ಎಸ್ ಜಂಗೆ ಅವರು ಮಾತನಾಡುತ್ತಾ ಒಂದು ಸಂಸ್ಥೆಯು ಎತ್ತರಕ್ಕೆ ಬೆಳೆಯಬೇಕೆಂದರೆ ಎಲ್ಲರ ಸ್ನೇಹ ಮತ್ತು ಹೃದಯವಂತಿಕೆಯಿಂದ ಬೆಳೆಯಲು ಸಾಧ್ಯವಾಗುತ್ತದೆ ತಾಳಿದವನು ಬಾಳಿಯಾನು ಎಂಬಂತೆ ಯುವಕರು ಕೆಟ್ಟ ಗುಣಗಳನ್ನು ಬಿಟ್ಟು ಒಳ್ಳೆ ವ್ಯಾಯಾಮಗಳನ್ನು ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಆರೋಗ್ಯವೇ ಭಾಗ್ಯ ಎಂಬಂತೆ ತಾನು ನಗಬೇಕು, ಬೇರೆಯವರನ್ನು ನಗಿಸಬೇಕು. ಇದರಿಂದ ಸದೃಢ ರಾಷ್ಟ್ರವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾದ ಡಾ. ಗಾಂಧೀಜಿ ಮೊಳಕೆರೆಯವರು ಮಾತನಾಡುತ್ತಾ ಯುವಶಕ್ತಿಯೇ ದೇಶದ ಶಕ್ತಿ ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಶಿಸ್ತು ,ಸಂಯಮ, ಸಹಬಾಳ್ವೆ ಮತ್ತು ಭಾವೈಕ್ಯತೆಯ ಗುಣಗಳನ್ನು ಬೆಳೆಸುವುದರ ಜೊತೆಗೆ ಸಮುದಾಯದಲ್ಲಿ ಬಾಳಬೇಕು ಮತ್ತು ನಾವೆಲ್ಲರೂ ಒಂದು ಎನ್ನುವ ಭಾವನೆಯನ್ನು ಮೂಡಿಸುತ್ತದೆ ಎಂದರು.
ಸಮಾರಂಭದಲ್ಲಿ ಘನ ಉಪಸ್ಥಿತಿ ವಹಿಸಿದ ಅನಿರುದ್ಧ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಡಾ. ಪರಮೇಶ್ವರ್ ಎಸ್. ಬನಸೋಡೆ ಅವರು ಪ್ರಾಸ್ತಾವಿಕ ಮಾತನಾಡುತ್ತಾ ತಮ್ಮ ಸಂಸ್ಥೆಯು ಬೆಳೆದು ಬಂದ ಹಿನ್ನೆಲೆ ಕುರಿತು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಪ್ರಿಯ ದೇವರು ವಹಿಸಿದರು. ವೇದಿಕೆಯ ಮೇಲೆ ಸಮಾರಂಭದ ಮುಖ್ಯ ಅತಿಥಿಗಳಾದ ಡಾ. ಅಂಬೇಡ್ಕರ್ ಪದವಿ ಮಹಾವಿದ್ಯಾಲಯ ಕಲಬುರಗಿಯ ಪ್ರಾಧ್ಯಾಪಕರಾದ ಡಾ. ಸುದರ್ಶನ್ ಮದನ್ಕರ್, ಸ.ಪ್ರ.ದ.ಕಲೇಜು ಕಮಲಾಪುರದ ಉಪನ್ಯಾಸಕರಾದ. ಜಗಪ್ಪ ತಳವಾರ, ಡಾ. ಲಕ್ಷ್ಮಿ ಪುತ್ರ ದೊಡ್ಮನಿ ಉಪಸ್ಥಿತರಿದ್ದರು. ಡಾ. ಪರಮೇಶ್ವರ ಬನಸೋಡೆ ಬರೆದಿರುವ ಇಂಡಿಯನ್ ಪೆÇಲಿಟಿಕಲ್ ಥಿಂಕರ್ಸ್ ಮತ್ತು ಡಾಕ್ಟರ್ ಲಕ್ಷ್ಮೀಪುತ್ರ ಎಂ ಡಿ ಮತ್ತು ಜಟೇಪ್ಪ ಮಲ್ಲಪ್ಪ ಅವರು ಸಂಪಾದಿಸಿರುವ ಪ್ರಾಸ್ಪೆಕ್ಟಿವ್ ಆಫ್ ಎಕನಾಮಿಕ್ ಫೆನೋಮಿನ ಕೃತಿಗಳನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಬೇರೆ ಬೇರೆ ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು
ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಮತಿ ಸಂಗೀತಾ ಎಲ್.ಮಳ್ಳಿ ಸ್ವಾಗತಿಸಿದರು. ಡಾ. ಸಂತೋಷ್ ಹೊಸಮನಿ ನಿರೂಪಿಸಿದರು. ಡಾ. ಹರ್ಷವರ್ಧನ್ ಬಿ. ವಂದಿಸಿದರು.