Home ಜಿಲ್ಲೆ ಕ್ರೀಡೆಗಳು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿ

ಕ್ರೀಡೆಗಳು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿ


ನವಲಗುಂದ,ಏ.೧೨: ಕ್ರೀಡೆಗಳು ನಮ್ಮ ಬದುಕಿನ ಒಂದು ಭಾಗ, ಇಂಥಹ ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವುದಕ್ಕೂ ಸಹಕಾರಿ ಎಂದು ಬಿಜೆಪಿ ಮುಖಂಡ ದೇವರಾಜ ದಾಡಿಭಾವಿ ಹೇಳಿದರು.


ಅವರು ತಾಲ್ಲೂಕಿನ ಮೊರಬ ಗ್ರಾಮದಲ್ಲಿ ಮೊರಬ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಯುವಕರಿಗಾಗಿ ಪ್ರಧಾನಿ ನರೇಂದ್ರ ಮೋದಿಜಿ ಅವರ ಹೆಸರಿನ ನಮೋ ಕ್ರಿಕೆಟ್ ಟ್ರೋಫಿ ಅಂತಿಮ ಪಂದ್ಯಗಳಲ್ಲಿ ವಿಜಯಶಾಲಿಯಾದ ಮೊರಬ ಗ್ರಾಮದ ಎರಡು ತಂಡಗಳಿಗೆ ಬಹುಮಾನ ಹಾಗೂ ಕಪ್ ವಿತರಿಸಿ ಮಾತನಾಡಿದರು.


ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ಆಶಯದಂತೆ ಯುವಕರು ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡು ತಮ್ಮ ಬದುಕಿನುದ್ದಕ್ಕೂ ಮುಂದುವರಿಸಿಕೊAಡು ಹೋಗಬೇಕು. ಆ ಮೂಲಕ ಆರೋಗ್ಯಕರ ಸಮಾಜದ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು.


ಬಿಜೆಪಿ ಮಂಡಲ ಅಧ್ಯಕ್ಷ ಗಂಗಪ್ಪ ಮನಮಿ ಮಾತನಾಡಿ ದೇವರಾಜ ದಾಡಿಭಾವಿಯವರು ಅರ್ಪಿಸುವ ನಮೋ ಕ್ರಿಕೆಟ್ ಕಪ್ ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆ ಗುರುತಿಸಲು ಸಹಕಾರಿಯಾಗಿದ್ದು,ಇದರಿಂದ ಯುವಕರ ನಡುವೆ ಸೋದರ ಸಂಬAಧ ಬೆಳೆಯಲಿವೆ ಎಂದು ತಿಳಿಸಿದರು.
ಹೇಮರೆಡ್ಡಿ ಅಣ್ಣಿಗೇರಿ, ಶ್ರೀಧರ್ ಪಟ್ಟಣಶೆಟ್ಟಿ, ಹರೀಶ್ ಬೆಟಸೂರ, ನಾಗರಾಜ್ ಮಡ್ಲಿ, ಈಶ್ವರ್ ಜಾಲಿಹಾಳ, ಕೃಷ್ಣ ಭೋವಿ ಸೇರಿದಂತೆ ಗ್ರಾಮದ ಗುರು ಹಿರಿಯರು ಸ್ಪರ್ದಾಳುಗಳು ಮುಖಂಡರು. ಉಪಸ್ಥಿತರಿದ್ದರು.