
ನವಲಗುಂದ,ಏ.೧೨: ಸಮಾಜದಲ್ಲಿ ಸಮಾನತೆ, ನ್ಯಾಯ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಜೀವನಪೂರ್ತಿ ಹೋರಾಡಿದ ಮಹಾನ್ ನಾಯಕ ಡಾ. ಬಾಬು ಜಗಜೀವನರಾಮ್ ಅವರ ೧೧೯ ನೇ ಜಯಂತಿಯನ್ನು ಸಂಭ್ರಮದಿAದ ಆಚರಿಸಲಾಯಿತು.
ಪಟ್ಟಣದ ಅಂಬೇಡ್ಕರ್ ಭವನದ ಮುಂದೆ ಡಾ. ಬಾಬು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಟ್ರಾಕ್ಟರ್ನಲ್ಲಿ ಅಲಂಕರಿಸಲಾದ ಬಾಬುಜೀ ಅವರ ಭಾವಚಿತ್ರ ಗಮನಸೆಳೆಯಿತು. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಮೆರಗು ನೀಡಿದವು.
ಬಳಿಕ ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಅಜಾತ ನಾಗಲಿಂಗಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ, ಶಾಸಕ ಎನ್ ಎಚ್ ಕೋನರಡ್ಡಿ, ಧಾರವಾಡ ಕೆ ಯು ಡಿ ಮೌಲ್ಯಮಾಪನ ಕುಲಸಚಿವರಾದ ನಿಜಲಿಂಗಪ್ಪ ಮಟ್ಟಿಹಾಳ, ತಹಸೀಲ್ದಾರ ಸುದೀರ ಸಾಹುಕಾರ್, ಸಿಪಿಐ ರವಿಕುಮಾರ ಕಪ್ಪತ್ತನವರ, ವಿನೋದ ಅಸೂಟಿ, ಸದುಗೌಡ ಪಾಟೀಲ, ರೋಹನ್ ಪಾಟೀಲಮುನೇನಕೊಪ್ಪ, ಮರೀಶ್ ನಾಗಣ್ಣವರ,ಅಣ್ಣಪ್ಪ ಬಾಗಿ, ಸಾವಿತ್ರಿಬಾಯಿ ಪೂಜಾರ,ಶೋಭಾ ಹಿರೇಮಠ್, ಕುಮಾರ ಮಾದರ, ಶಂಕ್ರು ಹುನಸಿಮರದ, ದುರಗಪ್ಪ ನಾಗಣ್ಣವರ,ನಿಂಗಪ್ಪ ಕೆಳಗೇರಿ, ದೀಲಿಪ್ ರತ್ನಾಕರ, ಶಿವಪುತ್ರಪ್ಪ ಕೆಳಗೇರಿ, ಹಣಮಂತಪ್ಪ ಕೆಳಗೇರಿ, ಮಂಜುಳಾ ಹೊಸಮನಿ, ಸಿರಾಜುದ್ದಿನ ಧಾರವಾಡ, ಅಶೋಕ ಮದಗುಣಕಿ, ರಾಘವೇಂದ್ರ ಜಾಲಗಾರ್, ಶಿವು ನಾಯ್ಕ, ರವಿ ಬೆಂಡಿಗೇರಿ, ರಾಜು ದೊಡಮನಿ, ಆನಂದ ಹವಳಕೋಡ್, ಸುಭಾಸಚಂದ್ರಗೌಡ ಪಾಟೀಲ, ಕಲ್ಮೇಶ ಹಾದಿಮನಿ, ನಾಗಲಿಂಗಪ್ಪ ದೊಡಮನಿ, ಮೈಲಾರಪ್ಪ ವೈದ್ಯ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.




















