
ಕೆ.ಆರ್. ಪುರ,ಏ.೧೨- ಕಾಮಗಾರಿಗಳನ್ನು ಸಾರ್ವಜನಿಕರಿಗೆ ತೊಂದರೆ ಯಾಗದಂತೆ ಎಚ್ಚರಿಕೆ ವಹಿಸಿ ಗುಣಮಟ್ಟದೊಂದಿಗೆ ಮಾಡುವಂತೆ ಶಾಸಕ ಬೈರತಿ ಬಸವರಾಜ ಅವರು ತಿಳಿಸಿದರು.
ಕ್ಷೇತ್ರದ ವಿಜಿನಾಪುರ ವಾರ್ಡನ ಗಾಯತ್ರಿ ಶಾಲೆಯ ಬಳಿ ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕಾಮಗಾರಿ ಮಾಡುವ ಸಂದರ್ಭದಲ್ಲಿ ವಾಹನಗಳು ಸಂಚಾರಕ್ಕೆ ಸಮಸ್ಯೆಯಾಗದಂತೆ,ಮುನ್ನೆಚ್ಚರಿಕೆ ವಹಿಸಿ ಗುಣಮಟ್ಟದಿಂದ ಕಾಮಗಾರಿ ಮಾಡಬೇಕು, ಅನುದಾನದ ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.
ಕೆಆರ್ ಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಬಯಕೆ ಇದೆ . ಅನುದಾನದ ಕೊರತೆಯಿಂದ ಕಾಮಗಾರಿಗಳನ್ನು ಮಾಡಲು ಆಗುತ್ತಿಲ್ಲ ಎಂದು ಹೇಳಿದರು.
ಕ್ಷೇತ್ರದ ಜನತೆ ಯಾವುದೇ ಅಪಪ್ರಚಾರಕ್ಕೆ ಕಿವಿಕೊಡಬೇಡಿ, ಕ್ಷೇತ್ರದಲ್ಲಿನ ಅಭಿವೃದ್ಧಿ ನೋಡಿ, ಎಲ್ಲಾ ಅಪಪ್ರಚಾರಕ್ಕೆ ಆದಷ್ಟು ಬೇಗ ಕಡಿವಾಣ ಬೀಳಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮುನೇಗೌಡ,ಉತ್ತರ ಜಿಲ್ಲಾ ಮಾಜಿ ಅಧ್ಯಕ್ಷ ಬಾಕ್ಸರ್ ನಾಗರಾಜ್,ಮುಖಂಡರಾದ ಪ್ರದೀಪ್ ಗೌಡ,ಬಾಬುಸೆಲ್ವಂ, ರಮೇಶ್ ಗೌಡ,ಎಂಎಲ್ ಡಿಸಿ,
ಸುಗುಮಾರ್,ಗೋಪಾಲ್, ದಿನೇಶ್, ಅಶೋಕ್, ಶೇಖರ್, ನವೀನ್ ಮುನಿರಾಜು, ಮತ್ತಿತರರಿದ್ದರು.























