Home ಜಿಲ್ಲೆ ಕಲಬುರಗಿ ನಿಷೇಧಿತ ಗಾಂಜಾ ಸಾಗಿಸುತ್ತಿದ್ದ ಆರೋಪಿ ಬಂಧನ6.13 ಲಕ್ಷ ರೂ.ಮೌಲ್ಯದ 6 ಕೆ.ಜಿ.,450 ಗ್ರಾಂ.ಗಾಂಜಾ ಜಪ್ತಿ

ನಿಷೇಧಿತ ಗಾಂಜಾ ಸಾಗಿಸುತ್ತಿದ್ದ ಆರೋಪಿ ಬಂಧನ6.13 ಲಕ್ಷ ರೂ.ಮೌಲ್ಯದ 6 ಕೆ.ಜಿ.,450 ಗ್ರಾಂ.ಗಾಂಜಾ ಜಪ್ತಿ

ಕಲಬುರಗಿ,ಏ.11-ನಿಷೇಧಿತ ಗಾಂಜಾ ಸಾಗಿಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ವಿಶ್ವವಿದ್ಯಾಲಯ ಪೊಲೀಸರು 6.13 ಲಕ್ಷ ರೂ.ಮೌಲ್ಯದ 6 ಕೆ.ಜಿ., 450 ಗ್ರಾಂ.ಜಪ್ತಿ ಮಾಡಿದ್ದಾರೆ.
ನಗರದ ಹೊರವಲಯದ ಕೋಟನೂರ (ಡಿ) ಸೀಮಾಂತರದ ಜೇವರ್ಗಿ ರಸ್ತೆಯ ವಾಜಪೇಯಿ ಬಡಾವಣೆಯ ರಸ್ತೆ ಬದಿಯಲ್ಲಿ ನಿಷೇಧಿತ ಗಾಂಜಾ ಸಾಗಿಸಲು ಯತ್ನಿಸಲಾಗುತ್ತಿದೆ ಎಂಬ ಮಾಹಿತಿ ಮೇಲೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರ ಮಾರ್ಗದರ್ಶನದಲ್ಲಿ ಎಸಿಪಿ ಪ್ರವೀಣ್ ನಾಯಕ್, ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಚಂದ್ರಶೇಖರ ತಿಗಡಿ, ಪಿಎಸ್‍ಐ ಸಿದ್ದಪ್ಪ ಸೈದಾಪೂರ, ಸಿಬ್ಬಂದಿಗಳಾದ ಈರಣ್ಣ, ಸಂಜುಕುಮಾರ, ವಿಠ್ಠಲ, ಪ್ರಕಾಶ, ರಾಜಕುಮಾರ ಪವಾರ, ನಾಗೇಂದ್ರ, ಶಿವಶರಣ, ಸಿದ್ದಣ್ಣ, ಮಹೇಶ, ಯಶ್ವಂತರಾವ, ಶಿವಶರಣಪ್ಪ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿ ಮೈಸೂರು ಜಿಲ್ಲೆಯ, ಹೆಚ್.ಡಿ.ಕೋಟೆ ತಾಲ್ಲೂಕಿನ ಸೋಳೆಪೂರದ ದೇವರಾಜ ನಾಯಕ ತಂದೆ ಭೀಮಾನಾಯಕ (38) ಎಂಬಾತನನ್ನು ಬಂಧಿಸಿ 6,43,200 ರೂ.ಮೌಲ್ಯದ 6 ಕೆ.ಜಿ, 450 ಗ್ರಾಂ.ಗಾಂಜಾ, 1200 ರೂ.ನಗದು, 1 ವಿವೋ ಮೊಬೈಲ್, 2 ಬ್ಯಾಗ್ ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.