Home ಸುದ್ದಿ ಅಂತರಾಷ್ಟ್ರೀಯ ಗಗನಯಾನಿಗಳ ೧೦ ದಿನಗಳ ಬಾಹ್ಯಾಕಾಶ ಯಾನ ಯಶಸ್ವಿ ಟ್ರಂಪ್ ಅಭಿನಂದನೆ

ಗಗನಯಾನಿಗಳ ೧೦ ದಿನಗಳ ಬಾಹ್ಯಾಕಾಶ ಯಾನ ಯಶಸ್ವಿ ಟ್ರಂಪ್ ಅಭಿನಂದನೆ

ವಾಷಿಂಗ್ಟನ್,ಏ.೧೧- ಚಂದ್ರಯಾನ ಕೈಗೊಂಡಿದ್ದ ಮಿಷನ್ ಆರ್ಟೆಮಿಸ್-೨ ಸಿಬ್ಬಂದಿ ೧೦ ದಿನಗಳ ಬಾಹ್ಯಕಾಶ ಯಾನ ಮುಗಿಸಿ ಯಶಸ್ವಿಯಾಗಿ ಭೂಮಿಗೆ ಮರಳಿಸಿದ್ದಾರೆ.

ಗಗನಯಾನ ಕೈಗೊಂಡಿದ್ದ ಕೆನಡಾದ ಜೆರೆಮಿ ಹ್ಯಾನ್ಸೆನ್ ಹಾಗು ಮೂವರು ಅಮೆರಿಕನ್ ಸಹೋದ್ಯೋಗಿಗಳು ಕ್ಯಾಫ್ಸುಲ್ ಮೂಲಕ ಪೆಸಿಫಿಕ್ ಮಹಾಸಾಗರದಲ್ಲಿ ಯಶಸ್ವಿಯಾಗಿ ಇಳಿದಿದ್ದು ನಾಸಾ ಸಿಬ್ಬಂದಿಯಿಂದ ಅಭೂತಪೂರ್ವ ಸ್ವಾಗತ ಸಿಕ್ಕಿದೆ.

ಚಂದ್ರಯಾನ ಪೂರ್ಣಗೊಳಿಸಿದ ನಾಲ್ವರು ಗಗನಯಾನಿಗಳ ತಂಡವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿನಂದಿಸಿದ್ದಾರೆ.

ಕಳೆದ ೧೦ ದಿನಗಳಿಂದ ಬಾಹ್ಯಾಕಾಶದ ವಾತಾವರಣಕ್ಕೆ ಹೊಂದಿಕೊಂಡಿದ್ದ ಗಗನಯಾನ ಸಿಬ್ಬಂದಿಗಳು ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಅವರನ್ನು ಸ್ವಲ್ಪದಿನಗಳ ಕಾಲ ತರಬೇತಿ ಕೇಂದ್ರದಲ್ಲಿ ಹಾರೈಕೆ ನಡೆಯಲಿದೆ, ಆ ನಂತರ ಭೂಮೀಯ ವಾತಾರವರಣಕ್ಕೆ ಹೊಂದಿಕೊಂಡ ನಂತರ ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಮಾಹಿತಿ ನೀಡಿದೆ.

ಕ್ಯಾಪ್ಸುಲ್‌ನಿಂದ ಫೆಸಿಫಿಕ್ ಸಾಗರದಲ್ಲಿ ಇಳಿದ ನಂತರ ಮಕ್ಕಳು, ಪತ್ರಕರ್ತರು ಪ್ರಧಾನಿ ಮತ್ತು ಅಧ್ಯಕ್ಷರೊಂದಿಗೆ ಮಾತನಾಡಿದ ಇತಿಹಾಸ ನಿರ್ಮಿಸಿದ್ದಾರೆ. ಜೆರೆಮಿ ಹ್ಯಾನ್ಸೆನ್ ಚಂದ್ರನ ಮಿಷನ್‌ನ್ ಕೈಗೊಂಡಿದ್ದ ಕೆನಡಾದ ಬಾಹ್ಯಾಕಾಶ ಸಂಸ್ಥೆಯ ಮೊದಲ ಗಗನಯಾತ್ರಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ಪ್ಯಾರಾಚೂಟ್‌ಗಳ ಕ್ರಿಯಾತ್ಮಕ ನೃತ್ಯ, ಬಾಳಿಕೆ ಬರುವ ಶಾಖ ಕವಚ ಮತ್ತು ನಿಖರವಾಗಿ ಯೋಜಿಸಲಾದ ಮಾರ್ಗದ ಮೂಲಕ ನಾಲ್ವರು ಗಗನಯಾತ್ರಿಗಳು ಅಂತಿಮ ಕಾರ್ಯಾಚರಣೆ ನಡೆಸುವ ಮೂಲಕ ಭೂಮಿಗೆ ಯಶಸ್ವಿಯಾಗಿ ಮರಳಿದ್ದಾರೆ.

ನಾಸಾ ಸಹಾಯಕ ಆಡಳಿತಾಧಿಕಾರಿ ಅಮಿತ್ ಕ್ಷತ್ರಿಯ ಪ್ರತಿಕ್ರಿಯಿಸಿ ನಾಲ್ಕು ಸದಸ್ಯರ ಸಿಬ್ಬಂದಿ ಮತ್ತು ಓರಿಯನ್ ಕ್ಯಾಪ್ಸುಲ್ ಅನ್ನು ನಿರ್ಮಿಸಿದ ಎಂಜಿನಿಯರ್ ನಿರ್ಮಿಸಿದ್ದ ಕ್ಯಾಪ್ಸುಲ್ ಮೂಲಕ ಫೆಸಿಫಿಕ್ ಸಾಗರದಲ್ಲಿ ಯಶಸ್ವಿಯಾಗಿ ಇಳಿದಿದ್ದಾರೆ ಎಂದು ತಿಳಿಸಿದ್ದಾರೆ.

ನಾಸಾ ಓರಿಯನ್ ಕಾರ್ಯಕ್ರಮ ವ್ಯವಸ್ಥಾಪಕ ಹೊವಾರ್ಡ್ ಹು ಪ್ರತಿಕ್ರಿಯಿಸಿ “ಚಂದ್ರನ ಮೇಲ್ಮೈಗೆ ಹೋಗುವ ಮಾರ್ಗ ಮುಕ್ತವಾಗಿದೆ, ಹಿಂದಿನ ಕೆಲಸಕ್ಕಿಂತ ಮುಂದಿನ ಕೆಲಸ ದೊಡ್ಡದಾಗಿದೆ.”ಈ ಕಾರ್ಯಾಚರಣೆ”ಐತಿಹಾಸಿಕ” ಇದು ಓರಿಯನ್ ಬಾಹ್ಯಾಕಾಶ ನೌಕೆಗೆ ಹೊಸ ಸಾಮರ್ಥ್ಯಗಳನ್ನು ಪ್ರದರ್ಶಿಸಿದೆ ಎಂದಿದ್ದಾರೆ.

“ಈ ಕ್ಷಣ ಸಾಧ್ಯವಾಗುತ್ತಿರುವುದಕ್ಕೆ ಸಂತೋಷವಾಗಿದೆ, ಇಂತಹ ಇನ್ನೂ ಹಲವು ಕ್ಷಣಗಳಲ್ಲಿ ಬರಲಿವೆ.ಅದಕ್ಕಾಗಿ ಎದರು ನೋಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.