
ವಾಷಿಂಗ್ಟನ್, ಏ.11– ಇರಾನ್ನ ಸಹಕಾರದೊಂದಿಗೆ ಅಥವಾ ಇಲ್ಲದೆಯೇ ಕಚ್ಚಾ ತೈಲಪೂರೈಕೆ ಮಾಡುವ ಹೋರ್ಮುಜ್ ಜಲಸಂಧಿಯನ್ನು ಶೀಘ್ರದಲ್ಲಿಯೇ ತೆರೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ ಮಾಡಿದ್ದು ಯಾವುದೇ ಕಾರಣಕ್ಕೂ ಇರಾನ್ ಹೋರ್ಮುಜ್ ಜಲಸಂಧಿಯ ಮೇಲೆ ಶುಲ್ಕ ವಿಧಿಸಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಶಾಂತಿ ಮಾತುಕತೆಗಳಲ್ಲಿ ತಮ್ಮ ಪ್ರಮುಖ ಆದ್ಯತೆ ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದದಂತೆ ನೋಡಿಕೊಳ್ಳುವುದಾಗಿ ಅಮೆರಿಕ- ಇರಾನ್ ಎರಡೂ ರಾಷ್ಟ್ರಗಳ ನಿಯೋಗಗಳು ತಮ್ಮ ಕದನ ವಿರಾಮ ಒಪ್ಪಂದ ಅಂತಿಮಗೊಳಿಸಲು ಪಾಕಿಸ್ತಾನದಲ್ಲಿ ಭೇಟಿಯಾಗುವ ಕೆಲವೇ ಗಂಟೆಗಳ ಮೊದಲು ಹೇಳಿಕೆ ಬಂದಿದ್ದು ಮಹತ್ವ ಪಡೆದುಕೊಂಡಿದೆ.
ಇರಾನ್ ಸಹಕಾರ ಇರಲಿ ಅಥವಾ ಇಲ್ಲದಿರಲಿ ಹೋರ್ಮುಜ್ ಜಲಸಂಧಿಯನ್ನು ಶೀಘ್ರದಲ್ಲಿ ತೆರೆಯುತ್ತೇವೆ. ಅದು ಆಗದಿದ್ದರೆ, ಇಡೀ ಇರಾನ್ ಅನ್ನು ಸರ್ವ ನಾಶ ಮಾಡಿಬಿಡಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.
ಕಚ್ಚಾ ತೈಲ ಪೂರೈಕೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ ಸುಂಕ ವಿಧಿಸಲು ಇರಾನ್ಗೆ ಬಿಡುವುದಿಲ್ಲ.ಇರಾನ್ ಜತೆಗಿನ ಉದ್ವಿಗ್ನತೆಯ ನಡುವೆಯೇ ಹೋರ್ಮುಜ್ ಜಲಸಂಧಿಯು ಒಂದು ಅಂತರರಾಷ್ಟ್ರೀಯ ಜಲಮಾರ್ಗ ಎಂದು ಅವರು ಬಣ್ಣಿಸಿದ್ದಾರೆ.ಹೋರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ ಶುಲ್ಕ ವಿಧಿಸಲು ಇರಾನ್ಗೆ ನಾವು ಅವಕಾಶ ನೀಡುವುದಿಲ್ಲ. ಅದು ಅಂತರರಾಷ್ಟ್ರೀಯ ಜಲಮಾರ್ಗವಾಗಿದೆ' .ಅಂತರರಾಷ್ಟ್ರೀಯ ಜಲಮಾರ್ಗಗಳನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಇರಾನ್ ಕುರಿತು ಟೀಕಿಸಿರುವ ಅವರು, ಮಾತುಕತೆಗೆ ಅವಕಾಶ ನೀಡುವ ಸಲುವಾಗಿ ಮಾತ್ರ ನಾವು ಇಲ್ಲಿಯವರೆಗೆ ಸಂಯಮ ಕಾಯ್ದುಕೊಂಡಿದ್ದೇವೆ’ ಎಂದು ಅವರು ಗುಡುಗಿದ್ದಾರೆ.
ಇರಾನ್ನ ಸಂವಹನ ತಂತ್ರದ ಬಗ್ಗೆ ಡೊನಾಲ್ಡ್ ಟ್ರಂಪ್ ತಮ್ಮ ಒಡೆತನದ ಸಾಮಾಜಿಕ ಮಾಧ್ಯಮ ಟೂಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದು,ಇರಾನಿಯನ್ನರು ಹೋರಾಡುವುದಕ್ಕಿಂತ ಹೆಚ್ಚಾಗಿ ಸುಳ್ಳು ಸುದ್ಧಿ ಮಾಧ್ಯಮಗಳನ್ನು ಮತ್ತು ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸುವುದರಲ್ಲಿ ಹೆಚ್ಚು ನಿಸ್ಸಿಮರಾಗಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.
ವಿಶ್ವದ ಪ್ರಮುಖ ಇಂಧನ ಸಾಗಣೆ ಮಾರ್ಗವಾದ ಹೋರ್ಮುಜ್ ಜಲಸಂಧಿಯ ಮೂಲಕ ಸಾರಿಗೆ ನೀತಿಗಳ ಬಗ್ಗೆ ಹೊಸ ಚರ್ಚೆಗಳು ನಡೆಯುತ್ತಿರುವ ನಡುವೆ ಈ ಬೆಳವಣಿಗೆ ಸಂಭವಿಸಿದೆ.
ಮುಂಬೈನಲ್ಲಿರುವ ಇರಾನ್ನ ಕಾನ್ಸುಲೇಟ್ ಜನರಲ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಹೋರ್ಮುಜ್ ಜಲಸಂಧಿಯ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯ ಕಾರ್ಯತಂತ್ರದ ಯೋಜನೆಯಡಿ, ಇರಾನ್ ಸರ್ಕಾರ ಅಗತ್ಯವಿದ್ದರೆ ಓಮನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಬಹುದು ಎಂದು ಅಜೀಜಿ ತಿಳಿಸಿದ್ದಾರೆ.






















