
ಕೋಲಾರ.ಏ,೧೧- ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವೀರಶೈವ ಲಿಂಗಾಯಿತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏ.೨೦ ರಂದು ಬಸವ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಶ್ರೀಮತಿ ಮಂಗಳ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಬಸವ ಜಯಂತಿ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿ ಬಸವಣ್ಣನವರ ತತ್ವ ಆದರ್ಶಗಳ ಅರಿವು ಮೂಡಿಸುವ ದೆಸೆಯಲ್ಲಿ ವಿಜೃಂಭಣೆಯ ಜೂತೆಗೆ ಅರ್ಥಪೂರ್ಣವಾಗಿ ಆಚರಿಸಬೇಕೆಂದು ತಿಳಿಸಿದರು.
ಏ,೨೦ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಪ್ರವಾಸಿ ಮಂದಿರದ ಬಳಿ ಬಸವಣ್ಣನವರ ಭಾವಚಿತ್ರಗಳನ್ನು ಹೊಂದಿದ ಅಲಂಕೃತ ಪಲ್ಲಕ್ಕಿಯ ವಾಹನಗಳೊಂದಿಗೆ ಹಾಗೂ ಜನಪದ ಕಲಾತಂಡಗಳೊಂದಿಗೆ ವೀರಗಾಸೆ, ನಂದಿಧ್ವಜ ಹಾಗೂ ವಾದ್ಯ ತಮಟೆಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಟಿ.ಚೆನ್ನಯ್ಯ ರಂಗ ಮಂದಿರವನ್ನು ಬೆಳಿಗ್ಗೆ ೧೧ ಗಂಟೆಗೆ ತಲುಪುವ ಮೂಲಕ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
ವೇದಿಕೆಯ ಕಾರ್ಯಕ್ರಮಕ್ಕೆ ಸರ್ಕಾರದ ಶಿಷ್ಟಚಾರ ಪ್ರಕಾರ ಜಿಲ್ಲಾ ಸಚಿವರ ಸುರೇಶ್ ಕುಮಾರ್, ಶಾಸಕರಾದ ಡಾ.ಕೊತ್ತೂರು ಮಂಜುನಾಥ್ ಸಂಸದರಾದ ಎಂ ಮಲ್ಲೇಶ್ ಬಾಬು, ವಿಧಾನ ಪರಿಷತ್ ಶಾಸಕರಾದ ಎಂ.ಎಲ್ ಅನಿಲ್ ಕುಮಾರ್, ಇಂಚರ ಗೋವಿಂದರಾಜು. ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ವೇದಿಕೆಯಲ್ಲಿ ಬಸವಣ್ಣನವರ ಭಾವ ಚಿತ್ರಕ್ಕೆ ಗಣ್ಯರಿಂದ ಪುಷ್ಪಾರ್ಚನೆ ಹಾಗೂ ಉಪನ್ಯಾಸ ,ವಚನಗಳ ಗಾಯನ, ನಂತರ ಜನಪ್ರತಿನಿಧಿಗಳ ಉದ್ಘಾಟನಾ ಭಾಷಣ ನಡೆಯಲಿದೆ.
ಬಸವ ಜಯಂತಿ ಕಾರ್ಯಕ್ರಮದಲ್ಲಿ ಯಾವೂದೇ ರೀತಿ ಲೋಪ ದೋಷಗಳು ಉಂಟಾಗದಂತೆ ಶಿಷ್ಟಚಾರದ ಪ್ರಕಾರವೇ ಎಲ್ಲರನ್ನು ಆಹ್ವಾನಿಸಿ ಆರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಆಚರಿಸಲು ಎಲ್ಲರ ಸಹಕಾರ ಪಡೆಯುವಂತಾಗ ಬೇಕು ಎಂದರು
ಸಭೆಯಲ್ಲಿ ಬಸವೇಶ್ವರ ಭಕ್ತ ಮಂಡಳಿ. ಶರಣೆಯರ ಬಳಗ, ಅಖಿಲ ಭಾರತ ವೀರಶೈವ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ನೀಡಿದ ಸಲಹೆ ಸೂಚನೆಗಳನ್ನು ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಎಲ್ಲಾರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ, ಅಖಿಲ ವೀರಶೈವ ಮಹಾ ಸಭಾದ ಶ್ರೀಮತಿ ಪ್ರಮೀಳ ಮಲ್ಲಿಕಾರ್ಜುನ್, ಬಸವೇಶ್ವರ ಭಕ್ತ ಮಂಡಳಿಯ ಬೈಲಪ್ಪ. ಶರಣೆಯರ ಬಳಗದ ಶ್ರೀಮತಿ ವಿಮಲ, ವೀರಶೈವ ಸಮುದಾಯದ ಮುಖಂಡರಾದ ಸಿದ್ದಲಿಂಗ ಒಡೆಯರ್, ವೀರೇಂದ್ರ ಪಾಟೀಲ್ ಭಾಗವಹಿಸಿದ್ದರು.





















