
ಬೀದರ:ಏ.೯: ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ಸಂಚಾರ ಮಾಡಬೇಕು. ಕುಟುಂಬಕ್ಕೆ ನೀವೇ ಆಸರೆಯಾದ ಕಾರಣ ಯಾವುದೇ ಅನಾಹುತ ನಡೆಯದಂತೆ ಹೆಲ್ಮೆಟ್ ಧರಿಸಬೇಕೆಂದು ಎಸ್.ಪಿ. ಪ್ರದೀಪ ಗುಂಟಿ ತಿಳಿಸಿದರು.
೪೦ನೇ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನ ಪ್ರಯುಕ್ತ ನಗರದಲ್ಲಿ ಆಯೋಜಿಸಿದ ಬೈಕ್ ರ್ಯಾಲಿಗೆ ಬಲೂನ್ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಮ್ಮೇಳನ ಮೂಲಕ ಸಮಾಜಕ್ಕೆ ಹಲವು ರೀತಿಯ ಸಂದೇಶ ನೀಡುತ್ತಿರುವ ಸಂಘದ ಕಾರ್ಯ ಶ್ಲಾಘನೀಯ. ಏ. ೧೧ ರಂದು ಮುಖ್ಯಮಂತ್ರಿಗಳು ಬೀದರ ನಗರಕ್ಕೆ ಆಗಮಿಸುತ್ತಿರುವ ಪ್ರಯುಕ್ತ ಸಕಲ ಬಂದೋಬಸ್ತ್ ಮಾಡಲಾಗಿದೆ. ಸಮ್ಮೇಳನ ಯಶಸ್ವಿಯಾಗಿ ಜರುಗಲಿ ಎಂದು ಶುಭ ಹಾರೈಸಿದರು.
ಇದೇ ವೇಳೆ ಪೊಲೀಸ್ ಇಲಾಖೆ ವತಿಯಿಂದ ಪತ್ರಕರ್ತರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡಲಾಯಿತು. ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಡಾ. ಚನ್ನಬಸವಾನಂದ ಸ್ವಾಮೀಜಿ, ಕ.ಕಾ.ಪ.ಸಂಘದ ರಾಜ್ಯ ಕಾರ್ಯದರ್ಶಿ ಜಿ.ಸಿ.ಲೋಕೇಶ, ಬಾಳೋಜಿ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಎಸ್ಪಿ ಚಂದ್ರಕಾAತ ಪೂಜಾರಿ, ಸಂಘದ ಅಧ್ಯಕ್ಷ ಆನಂದ ದೇವಪ್ಪ, ಅಡಾಕ್ ಸಮಿತಿಯ ಸದಸ್ಯರಾದ ಅಪ್ಪಾರಾವ ಸೌದಿ, ಶಿವಕುಮಾರ ಸ್ವಾಮಿ, ಪ್ರಮುಖರಾದ ದೀಪಕ ವಾಲಿ, ಅಶೋಕ ಕರಂಜಿ, ಸಿದ್ರಾಮಯ್ಯ ಸ್ವಾಮಿ, ಮಾಳಪ್ಪ ಅಡಸಾರೆ, ಪ್ರಚಾರ ಸಮಿತಿಯ ಸಂಚಾಲಕರಾದ ನಾಗೇಶ ಪ್ರಭಾ, ಮಲ್ಲಿಕಾರ್ಜುನ ನಾಗರಾಳ, ಮಹಾರುದ್ರ ಡಾಕುಳಗೆ, ಶಶಿ ಶೆಂಬೆಳ್ಳಿ, ವಿಜಯಕುಮಾರ ಸೋನಾರೆ, ಸಂಜೀವಕುಮಾರ ಬುಕ್ಕಾ ಸೇರಿದಂತೆ ಹಲವರಿದ್ದರು.
ಸಮ್ಮೇಳನದ ಪ್ರಚಾರ ಸಮಿತಿ ವತಿಯಿಂದ ಆಯೋಜಿಸಿದ ಬೈಕ್ ರ್ಯಾಲಿಯು ನಿಯಮಾನುಸಾರವಾಗಿ ನಗರದ ಬಸವೇಶ್ವರ ವೃತ್ತದಿಂದ ಭಗತಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ರೋಟರಿ ವೃತ್ತ, ಮಡಿವಾಳ ವೃತ್ತ, ಹೊಸ ಬಸ್ ನಿಲ್ದಾಣದ ಮೂಲಕ ಪತ್ರಿಕಾ ಭವನವರೆಗೆ ಸಾಗಿತು.




















