Home ಜಿಲ್ಲೆ ಕಲಬುರಗಿ ನಾಳೆ ಎಲೆನಾವದಗಿಯಲ್ಲಿ ನಾಗಲಿಂಗೇಶ್ವರ ರಥೋತ್ಸವ

ನಾಳೆ ಎಲೆನಾವದಗಿಯಲ್ಲಿ ನಾಗಲಿಂಗೇಶ್ವರ ರಥೋತ್ಸವ

ಕಲಬುರಗಿ,ಏ 5: ಜಿಲ್ಲೆಯ ಅಳಂದ ತಾಲೂಕಿನ ಎಲೆನಾವದಗಿಯಲ್ಲಿ ನಾಗಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಾಳೆ ( ಏ.6) ಸಂಜೆ 6 ಗಂಟೆಗೆ ರಥೋತ್ಸವ ನಡೆಯಲಿದೆ.
ಮುಂಜಾನೆ 6 ಗಂಟೆಗೆ ನಾಗಲಿಂಗೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ.ನಂತರ 108 ಕುಂಭ ಅಭಿಷೇಕ.ಮಧ್ಯಾಹ್ನ 2 ಗಂಟೆಗೆ ಸಕಲ ವಾದ್ಯಗಳಿಂದ ಗ್ರಾಮದಲ್ಲಿ ನಾಗಲಿಂಗೇಶ್ವರ ಪಲ್ಲಕ್ಕಿ ಮೆರವಣಿಗೆ.ಸಂಜೆ 6ಗಂಟೆಗೆ ರಥೋತ್ಸವ ಜರುಗುವುದು. ನಂತರ ರಾತ್ರಿ 10 ಗಂಟೆಗೆ ಬೈಲಾಟ ಮತ್ತು ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ.
7 ರಂದು ಸಂಜೆ 4.30 ಕ್ಕೆ ಜಂಗಿ ಪೈಲವಾನರ ಕುಸ್ತಿ, ನಂತರ ರಾತ್ರಿ 10 ಗಂಟೆಗೆ ಬೈಲಾಟ ಜರಗುವುದು.
ಏ.6 ರಿಂದ 11 ರ ವರೆಗೆ ದನಗಳ ಜಾತ್ರೆ ನಡೆಯಲಿದೆ ಎಂದು ಸಕಲ ಸಮಸ್ತ ಸದ್ಭಕ್ತ ಮಂಡಳಿ ಮತ್ತು ಎಲೆನಾವದಗಿ ಶ್ರೀ ನಾಗಲಿಂಗೇಶ್ವರ ದೇವಸ್ಥಾನದ ಕಮಿಟಿಯವರು ತಿಳಿಸಿದ್ದಾರೆ.