Home ಜಿಲ್ಲೆ ವೀರೇಶ ಹಲ್ಲೆ ಪ್ರಕರಣ ಕಾಂಗ್ರೆಸ್ ನದು ಧ್ವಂದ ನಿಲುವು

ವೀರೇಶ ಹಲ್ಲೆ ಪ್ರಕರಣ ಕಾಂಗ್ರೆಸ್ ನದು ಧ್ವಂದ ನಿಲುವು

Oplus_16908288

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.05: ಮೇಯರ್ ಪಿ.ಗಾದೆಪ್ಪ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ವೀರೇಶ ಅವರ ಹಲ್ಲೆ ಖಂಡಿಸಿ ಪಾಲಿಕೆ ಸಿಬ್ಬಂದಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ, ನಾವು ಬೆಂಲಕ್ಕೀದ್ದೇವೆ ಎಂದು ಇಂದು ಹೇಳುತ್ತಿದ್ದಾರೆ. ಜೊತೆಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎನ್ನುತ್ತಿದ್ದಾರೆ.

ಈ ಮುಷ್ಕರ ಹೀಗೆ ಮುಂದುವರೆದರೆ ಸಾರ್ವಜನಿಕರಿಗೆ ಬಹಳ ತೊಂದರೆ ಆಗುತ್ತದೆ. ಕುಡಿಯುವ ನೀರನ್ನು ಕಾಲುವೆಗೆ ಬಿಡಲಾಗಿದೆ. ನೀರನ್ನು ಪಂಪ್ ಮಾಡಿ ಸ್ಟಾಕ್ ಮಾಡಬೇಕಾಗಿದೆ. ಮಾಡದಿದ್ದರೆ. ಮುಂದೆ ನೀರಿನ ಸಮಸ್ಯೆ ಆಗಬಾರದು ಹಾಗೂ ನಾವು ವೀರೇಶ್ ಅವರ ಪರವಾಗಿ ಇದ್ದೇವೆ. ತಮಗೆ ಏನು ನ್ಯಾಯ ಬೇಕು.. ತಮ್ಮ ಬೇಡಿಕೆಗಳನ್ನು ಈಡೇರಿಸಲು.. ನಾನು ಮಹಾಪೌರನಾಗಿ. ಹಾಗೂ ಮಹಾನಗರ ಪಾಲಿಕೆ ಸದಸ್ಯರನ್ನು ಒಳಗೊಂಡು ಹಾಗೂ ನಗರ ಹಾಗೂ ಗ್ರಾಮೀಣ ಶಾಸಕರನ್ನು ಒಪ್ಪಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ. ಮುಂದಿನ ದಿನದಲ್ಲಿ ಈ ರೀತಿಯಾಗಿ ತೊಂದರೆ ಯಾಗದಂತೆ ಮುಂಜಾಗ್ರತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಈ ಬೇಡಿಕೆಯನ್ನು ಈ ಮುಷ್ಕರವನ್ನು ಇವತ್ತಿಗೆ ಮುಗಿಸಿ. ಕುಬೇರ ಅವರ ಮೇಲೆ ಕಾನೂನ್ ಪ್ರಕಾರ ಏನು ಕ್ರಮ ಕೈಗೊಳ್ಳಬೇಕು ಕೈಗೊಳ್ಳಲಾಗುವುದು ಎಂದು ಮನವಿ ಮಾಡಿದರು.

ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದ ಬಾಬು ಹಾಗೂ ಪದಾಧಿಕಾರಿಗಳು ಮಧ್ಯಾಹ್ನದೊಳಗೆ ನಮ್ಮ ನೌಕರರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು. ವೆಂಕಟೇಶ್ ಹೆಗಡೆ, ಕೆ ಶ್ರೀನಿವಾಸಲು, ಅಲುವೇಲು ಸುರೇಶ್ ಹಾಗೂ ಇನ್ನಿತರರು ಇದ್ದರು.

ಮತ್ತೊಂದು ಕಡೆ ನಿನ್ನೆ ಸಂಜೆ ಮೇಯರ್ ಗಾದೆಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು ನಗರದಲ್ಲಿ ಪಾದಯಾತ್ರೆ ಮೂಲಕ ಬ್ರೂಸ್ ಪೇಟೆ ಠಾಣೆಗೆ ತೆರಳಿ ಎಇಇ ವೀರೇಶ್ ಅವರ ಮೇಲೆ ಕಾರ್ಪೊರೇಟರ ಕುಬೇರ ಅವರ ಪತ್ನಿ ರಾಜೇಶ್ವರಿ ಮೂಲಕ ಅಟ್ರಾಸಿಟಿ ಕೇಸ್ ದಾಖಲು ಮಾಡಿದ್ದಾರೆ.

ವಾರ್ಡಿನ ಸಮಸ್ಯೆ ಕುರಿತುಕೆಲಸ ಮಾಡಿ ಎಂದ್ರೇ ತಮ್ಮ ಪತಿ ಕುಬೇರ ವಿರುದ್ಧಜಾತಿ ನಿಂದನೆ ಮಾಡಿದ್ದಾರೆಂದು ಕುಬೇರ ಪತ್ನಿ ರಾಜೇಶ್ವರಿ ದೂರು ನೀಡಿದ್ದಾರೆ.

ಕುಬೇರ ಎನ್ನುವ ಮತ್ತೊರ್ವ ವ್ಯಕ್ತಿಯಿಂದ ಸಹ ಜಾತಿ ನಿಂದನೆಯ ಅಟ್ರಾಸಿಟಿ ಕೇಸು ದಾಖಲಿಸಿದ್ದಾರೆ.

ಈ ಮಧ್ಯೆ ಪಾಲಿಕೆ ನೌಕರರನ್ನು ಧರಣಿ ಹಿಂದಕ್ಕೆ ಪಡೆಯುವಂತೆ ಮನವೊಲಿಸುವ ಕಾರ್ಯ ಮುಂದುವರೆದಿದೆ.

ಅಂತರಂಗ:

ಹಲ್ಲೆಗೊಳಗಾದ ಮೇಲೆ ವೀರೇಶ್ ಅವರು ಮನೆ ಕಡೆ ಹೊರಟಿದ್ದರು. ಆದರೆ ಅವರನ್ನು ಪ್ರಭಾವಿ ನಾಯಕನ ಬೆಂಬಲಿಗರು ಪುಸಲಾಯಿಸಿ. ಜಿಲ್ಲಾ ಆಸ್ಪತ್ರೆಗೆ ಸೇರಿಸಿ. ಇಷ್ಟೆಲ್ಲಾ ರಾದ್ದಾಂತ ಮಾಡಲು ಹುನ್ನಾರ ನಡೆಸಿದ್ದಾರೆ. ಇದಕ್ಕೆ ಕಾರಣ ಮೇಯರ್ ಗಾದೆಪ್ಪ ಅವರು ಸುಲಭವಾಗಿ ಆಡಳಿತ ನಡೆಸುವಂತೆ ಆಗಬಾರದು ಎಂಬ ಮಾತುಗಳು ಪಾಲಿಕೆಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.