
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.05: ನಗರದಲ್ಲಿಂದು ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನಾಚರಣೆಯನ್ನು ಜಿಲ್ಲಾಡಳಿತದಿಂದ ಆಚರಸಿಲಾಯ್ತು.
ನಗರದ ಬಾಬು ಜಗಜೀವನ್ ರಾಮ್ ಭವನದ ಆವರಣದಲ್ಲಿನ ಜಗಜೀವನ್ ರಾಮ್ ಅವರ ಬೃಹತ್ ಪುತ್ಥಳಿಗೆ ಮೇಯರ್ ಪಿ.ಗಾದೆಪ್ಪ, ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ, ಪಾಲಿಕೆ ಸದಸ್ಯ ಕೆ.ಹನುಂಮತಪ್ಪ, ಅಂಬೇಡರ್ ಸಂಘದ ಜಿಲ್ಲಾ ಅಧ್ಯಕ್ಷ ತಿಪ್ಪೆಸ್ವಾಮಿ, ದಲಿತ ಲೇಖಕಿ ಎನ್.ಡಿ.ವೆಂಕಮ್ಮ ಮೊದಲಾದವರು ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿದರು
ಈ ವೇಳೆ ಮಾತನಾಡಿದ ಮೇಯರ್ ಗಾದೆಪ್ಪ, ನಮ್ಮ ದೇಶ ಆಹಾರಕ್ಕಾಗಿ ಪರ ದೇಶಗಳನ್ನು ಅವಲಂಬಿಸದಂತೆ ಮಾಡಿದ ಖ್ಯಾತರು ಜಗಜೀವನ್ ರಾಂ ಅವರು ಅವರ ಸ್ಮರಣೆ ಸದಾ ನಾವು ಮಾಡಬೇಕಿದೆಂದರು.
ಲೇಖಕಿ ಎನ್.ಡಿ.ವೆಂಕಮ್ಮ ಮಾತನಾಡಿ, ಭಾರತ ದೇಶದಲ್ಲಿ ಜನತೆಗೆ ಆಹಾರ ಧನ್ಯ ಉತ್ಪಾದನೆ ಕುಸಿದು ಹಸಿವಿನ ತೃಷೆ ಉಂಟಾದಾಗ.ವಿದೇಶಗಳಿಗೆ ತೆರಳಿ ಅಲ್ಲಿನ ಕೃಷಿ ತಂತ್ರಜ್ಞಾನವನ್ನು ಅರಿತುಕೊಂಡು ನಂದು ದೇಶದ ಜನತೆಗೆ ಅಗತ್ಯವಾದ ಆಹಾರ ಧಾನ್ಯ ಬೆಳೆಯಲು ಕಾರಣರಾಗಿ ಹಸಿರು ಕ್ರಾಂತಿಯ ಹರಿಕಾರರಾದರು. ಅವರ ಕೊಡುಗೆ ದೇಶಕ್ಕೆ ಅನನ್ಯ ಎಂದರು.
ನಂತರ ಮುನಿಷಿಪಲ್ ಹೈಸ್ಕೂಲ್ ಮೈದಾನದಿಂದ ಜಗಜೀವನ್ ರಾಂ ಅವರ ಭಾವಚಿತ್ರದ ಮೆರವಣಿಗೆ ಹಗಲು ವೇಷ, ವೀರಗಾಸೆ, ಡೊಳ್ಳು ಮೊದಲಾದ ಜನಪದ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು.
ಜೊತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಕುರಿತಾದ ಆರೋಗ್ಯ, ಕೃಷಿ, ಸಮಾಜಕಲ್ಯಾಣ ಇಲಾಖೆ, ಇಂಧನ, ತೋಟಗಾರಿಕೆ, ಸಾರಿಗೆ ಮೊದಲಾದ ಇಲಾಖೆಗಳ ಸ್ಥಬ್ದ ಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು.
ಈ ವೇಳೆ ದಲಿತ ಮುಖಂಡರುಗಳಾದ ಹೆಚ್.ಸಿದ್ದೇಶ್, ವೆಂಕಟೇಶ್ ಹೆಗಡೆ, ಚೇಳ್ಳಗುರ್ಕಿ ರಾಮಣ್ಣ, ಇ.ರಾಜೇಶ್. ಅರುಣಾ ಚಲಂ, ಎ. ಈಶ್ವರಪ್ಪ, ಕಂದುಕೂರು ರಾಮುಡು, ಕುಡುತಿನಿ ಪಂಪಾಪತಿ ಕರಚೇಡು ಶ್ರೀನಿವಾಸ್, ಅನಂತಕುಮಾರ್, ಕಮಲ ಮರಿಸ್ವಾಮಿ. ಸಿ.ಸೋಮಶೇಖರ, ಮಾರೆಣ್ಣ ಮೊದಲಾದವರು ಇದ್ದರು.
g11




















