Home ಜಿಲ್ಲೆ ಅಕ್ಕನ ವಚನ ಬದುಕಿಗೆ ಮಾರ್ಗದರ್ಶಿ

ಅಕ್ಕನ ವಚನ ಬದುಕಿಗೆ ಮಾರ್ಗದರ್ಶಿ

ಬೀದರ್: ಏ.5:ಅಕ್ಕಮಹಾದೇವಿ ಅವರ ವಚನಗಳು ಬದುಕಿಗೆ ಮಾರ್ಗದರ್ಶಿಯಾಗಿವೆ ಎಂದು ಸಾಹಿತಿ ಡಾ. ರೇಣುಕಾ ಸ್ವಾಮಿ ನುಡಿದರು.
ನಗರದ ಅಲ್ಲಮಪ್ರಭುನಗರದ ಉದ್ಯಾನದಲ್ಲಿ ಈಚೆಗೆ ಆಯೋಜಿಸಿದ್ದ ಅಕ್ಕ ಮಹಾದೇವಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಅಕ್ಕಮಹಾದೇವಿ ಸ್ತ್ರೀಯರ ಆತ್ಮಗೌರವ, ಧೈರ್ಯ ಹಾಗೂ ಭಕ್ತಿಯ ಸಂಕೇತವಾಗಿದ್ದಾರೆ. ಅವರ ಜೀವನ ಹೆಣ್ಣುಮಕ್ಕಳಿಗೆ ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಅಕ್ಕ ಮಹಿಳಾ ಲೋಕಕ್ಕೆ ಬೆಳಕಾಗಿದ್ದಾರೆ ಎಂದು ಹೇಳಿದರು.
ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ರಾಜಶ್ರೀ ವಿಶ್ವನಾಥ ಲಕ್ಕಶೆಟ್ಟಿ ಹಾಗೂ ಶಶಿಕಲಾ ಚೋಡೆ ಅವರನ್ನು ಸನ್ಮಾನಿಸಲಾಯಿತು.
ವಿಜಯಲಕ್ಷ್ಮಿ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬೀದರ್ ಮಹಾನಗರ ಪಾಲಿಕೆ ಸದಸ್ಯ ರಾಜಾರಾಮ ಚಿಟ್ಟಾ, ಭುವನೇಶ್ವರಿ ಚಿಟ್ಟಾ, ಸಂಗೀತಾ ಶಿವರಾಜ ಮತ್ತಿತರರು ಇದ್ದರು.
ಬಸವಶ್ರೀ ಚಂದ್ರಶೇಖರ ಸ್ವಾಮಿ ದಂಪತಿ ಅಕ್ಕ ಮಹಾದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿವಕುಮಾರ ಪಾರಾ ಹಾಗೂ ಬಸವರಾಜ ಲಾಡಗೇರಿ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಗಂಗಾ ನಿರೂಪಿಸಿದರು. ಮಹಾದೇವಿ ನಿರ್ಣಾ ಸ್ವಾಗತಿಸಿದರು.