
ಕೊಲ್ಹಾರ:ಏ.5: ದವನದ ಹುಣ್ಣಿಮೆಯ ದಿನದಂದು ಪ್ರಾರಂಭವಾಗುವ ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದ ಜಾತ್ರಾ ನಿಮಿತ್ಯ ವಿವಿಧ ಕಾರ್ಯಕ್ರಮಗಳು ಜರುಗಿದವು. ಬುಧವಾರ ಸಾವಿರಾರು ಮಾತೆಯರ ಸಹಯೋಗದಲ್ಲಿ ರೊಟ್ಟಿ ಬುತ್ತಿ ಮೆರವಣಿಗೆ ಜರುಗಿತು. ಗುರುವಾರ ಪಲ್ಲಕ್ಕಿ ಉತ್ಸವ , ರಥೋತ್ಸವದ ಕಳಸದ ಮೆರವಣಿಗೆ, ನಂತರ ಸಂಜೆ ಲಕ್ಷಾಂತರ ಭಕ್ತರ ಮಧ್ಯದಲ್ಲಿ ಮಹಾರಥೋತ್ಸವ ಜರುಗಿತು. ಶುಕ್ರವಾರ ಇತಿಹಾಸ ಪ್ರಸಿದ್ಧ ಹಾಲೋಕುಳಿಯು ಮಠದ ಪೀಠಾಧಿಪತಿ ಪ ಪೂ ಯೋಗಿ ಕಲ್ಲಿನಾಥ ದೇವರು ದಿವ್ಯ ಸಾನಿಧ್ಯದಲ್ಲಿ ಜರುಗಿತು. ಶನಿವಾರ ಎತ್ತಿನಗಾಡಿ ಓಟದ ಸ್ಪರ್ಧೆ ಹಾಗೂ ಚಿತ್ರವಿಚಿತ್ರ ಮದ್ದು ಸುಡುವ ಕಾರ್ಯಕ್ರಮ ಜರುಗಿದವು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ, ಮುಖಂಡರಾದ ಹಣಮಂತ ಬೆಳ್ಳುಬ್ಬಿ,ಉಸ್ಮಾನ್ ಪಟೇಲ ಖಾನ್ನವರ, ಚಿನ್ನಪ್ಪ ಗಿಡ್ಡಪ್ಪಗೋಳ, ಬಸವರಾಜ ಕೊಠಾರಿ, ಶಂಕ್ರಪ್ಪ ಪತಂಗಿ, ಶ್ರೀಶೈಲ ಬೆಳ್ಳುಬ್ಬಿ , ಶರಣಪ್ಪ ಲಿಂಬಿಕಾಯಿ, ರಮೇಶ ಲಿಂಬಿಕಾಯಿ ಸೇರಿದಂತೆ ಅನೇಕರು ಇದ್ದರು.




















