Home ಜಿಲ್ಲೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ


ನವಲಗುಂದ,ಏ.೫:
ಪಟ್ಟಣದಲ್ಲಿರುವ ನವಲಗುಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕ-ಕಿಯರ ಸಹಕಾರಿ ಪತ್ತಿನ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀನಿವಾಸ ಅಮಾತೆಣ್ಣವರ, ಉಪಾಧ್ಯಕ್ಷರಾಗಿ ಸುರೇಶ ಭಜಂತ್ರಿ ತಲಾ ೯ ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದರು.


ಚುನಾವಣಾಧಿಕಾರಿಯಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀದೇವಿ ಕುಲಕರ್ಣಿ ಕಾರ್ಯನಿರ್ವಹಿಸಿದರು. ಇದೇ ವೇಳೆ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಗಣೇಶ ಹೊಳೆಯನ್ನವರ, ಬಿ ಕೆ ಹಾಲವರ, ರಾಮಪ್ಪ ಹಳ್ಳಿಕೇರಿ, ಎನ್. ಎನ್. ಹಾಲಿಗೇರಿ, ಎಸ್. ಎಚ್.ಚನ್ನಪ್ಪಗೌಡ್ರ, ಪಿ. ಸಿ. ಸೂರಪ್ಪನವರ, ಎಂ. ಎನ್. ವಗ್ಗರ, ಪ್ರಕಾಶಗೌಡ ಪಾಟೀಲ, ವೆಂಕಟೇಶ ಭಜಂತ್ರಿ, ಡಿ.ಡಿ.ಇನಾಮತಿ, ಎಚ್ ಎಂ ನಾಯ್ಕರ, ಸೊಸೈಟಿ ಕಾರ್ಯನಿರ್ವಾಹಕರಾದ ಈರಣ್ಣ ಬೂದಿಹಾಳ ಇದ್ದರು.