
ಜೇವರ್ಗಿ: ಏ.5:ಧಾರ್ಮಿಕ ಕಾರ್ಯಕ್ರಮಗಳ ಮೂಲಕವೇ ನಾಡಿನಲ್ಲಿ ಶಾಂತಿ, ಸೌಹಾರ್ದ ಮೂಡಲು ಸಾಧ್ಯ ಎಂದು ನೆಲೋಗಿ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನೀರಲಕೋಡ ಗ್ರಾಮದ ಅಂಬಾಭವಾನಿ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಅಂಗವಾಗಿ ಆಯೋಜಿಸಲಾಗಿದ್ದ ಗುಡ್ಡಾಪೂರದ ದಾನಮ್ಮದೇವಿ ಪುರಾಣ ಕಾರ್ಯ-ಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅವರು
ಭಾರತ ದೇಶ ಧರ್ಮ ಪ್ರಧಾನ ದೇಶವಾಗಿದ್ದು, ಹತ್ತಾರು ಧರ್ಮಗಳು, ಪರಂಪರೆಗಳು ಅಸ್ತಿತ್ವದಲ್ಲಿವೆ. ಎಲ್ಲ ಧರ್ಮ, ಪರಂಪರೆಗಳ ಆಚರಣೆ ವಿಭಿನ್ನವಾಗಿದ್ದರೂ ದೇವರಲ್ಲಿ ಲೀನವಾಗುವುದೇ ಆಗಿದೆ ಎಂದರು.
ಜೇವರ್ಗಿ ತಾಲ್ಲೂಕಿನ ನೀರಲಕೋಡ ಗ್ರಾಮದಲ್ಲಿ ಆಯೋಜಿಸಿದ್ದ ಪುರಾಣ ಕಾರ್ಯಕ್ರಮದಲ್ಲಿ ನೆಲೋಗಿ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಸೊನ್ನದ ಶಿವಾನಂದ ಸ್ವಾಮೀಜಿ, ಕಡಕೋಳ ರುದ್ರಮುನಿ ಶಿವಾಚಾರ್ಯರು ಇದ್ದರು
ಸೊನ್ನ ಸಿದ್ದಲಿಂಗೇಶ್ವರ ವಿರಕ್ತ ಮಠದ ಶಿವಾನಂದ ಸ್ವಾಮೀಜಿ ಪುರಾಣ ಕಡಕೋಳ ದಾಸೋಹಗೈದರು. ಮಡಿವಾಳೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಂಕರ ಬಿರಾದಾರ, ರಾಜಶೇಖರಮುದ್ದಾ, ಭೀಮಾಶಂಕರ ಕಾಚಾಪೂರ, ಭೂತಾಳಿ ಭಾಸಗಿ, ಬಸವರಾಜ ಗುಳಗಿ, ಸೂಗಯ್ಯಸ್ವಾಮಿ ಹಿರೇಮಠ, ಶರಣಪ್ಪಗೌಡ ಪಾಟೀಲ, ಬಾಪುಗೌಡ ಪಾಟೀಲ, ಯಶವಂತ್ರಾಯಗೌಡ ಪಾಟೀಲ, ರಾಜಶೇಖರ ಕೊಂಗಂಡಿ ಸೇರಿದಂತೆ ಹಲವಾರು ಜನ ಭಾಗವಹಿಸಿದರು.




















