Home ಜಿಲ್ಲೆ ಭಕ್ತರು ನಿತ್ಯ ವೀರಭದ್ರೇಶ್ವರ ದೇವರ ಪೂಜೆ ಮಾಡಿ : ಡಾ. ಬಸವಲಿಂಗ ಅವಧೂತರ

ಭಕ್ತರು ನಿತ್ಯ ವೀರಭದ್ರೇಶ್ವರ ದೇವರ ಪೂಜೆ ಮಾಡಿ : ಡಾ. ಬಸವಲಿಂಗ ಅವಧೂತರ

ಚಿಟಗುಪ್ಪಾ:ಏ.5: ಭಕ್ತರು ನಿತ್ಯ ವೀರಭದೇಶ್ವರ ದೇವರ ಪೂಜೆ ಮಾಡಿ ಕೃಪೆಗೆ ಪಾತ್ರರಾಗಬೇಕು. ಮೋಕ್ಷಕ್ಕಾಗಿ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಸವಕಲ್ಯಾಣ, ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು. ಅವರು ಶುಕ್ರವಾರ ಚಿಟಗುಪ್ಪಾ ತಾಲ್ಲೂಕಿನ ಕೊಡಂಬಲ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ನೂತನವಾಗಿ ನಿರ್ಮಿಸಿದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮಹಾದ್ವಾರದ ಉದ್ಘಾಟನೆ ಮತ್ತು ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು
ಶ್ರೀ ವೀರಭದ್ರೇಶ್ವರು ಶಿವನ 12 ನೇ ಲೀಲೆಯೇ ಅವತಾರ. ಹೀಗಾಗಿ ಇವರು ಅವತಾರ ಪುರುಷರು ಎಂದು ಹೇಳಿದರು.
ಮಾನವ ಜನ್ಮ ಶ್ರೇಷ್ಠವಾಗಿದೆ. ಹೀಗಾಗಿ ಕೇವಲ ಸಂಸಾರದ ಜಂಜಾಟದಲ್ಲೇ ಮುಳುಗದೆ, ಪಾರಮಾರ್ಥದ ಒಲುವನ್ನು ಸಹ ಬೆಳೆಸಿಕೊಳ್ಳಬೇಕು. ಶರಣರು, ಸಂತರು, ಪೂಜ್ಯರ ವಾಣಿಗಳನ್ನು ಆಲಿಸಬೇಕು, ತಂದೆ ತಾಯಿಯ ಜೀವಿತವರೆಗೂ ಅವರ ಸೇವೆ ಮಾಡಲೇ ಬೇಕು ಎಂದರು
ಇಂದಿನ ಯುವ ಪೀಳಿಗೆ ಮಾದಕ ವಸ್ತುಗಳ ಚಟಕ್ಕೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಚಟಗಳಿಂದ ಆರೋಗ್ಯ ಹಾಳಾಗುತ್ತದೆ ಪೆÇೀಷಕರು ಮಕ್ಕಳನ್ನೂ ರಕ್ಷಿಸಿ ಕೊಳ್ಳಬೇಕು ಎಂದು ನುಡಿದರು
ಇನ್ನೋಬರ ಬಗ್ಗೆ ದೂರಾಲೋಚನೆ ಮಾಡಬೇಡಿ ಒಂದು ವೇಳೆ ಮಾಡಿದರೆ ನಿಮ್ಮಗೆ ಕೆಟ್ಟದಾಗುತ್ತದೆ. ಜಪ ತಪ ದೇವರ ಧ್ಯಾನ ಮಾಡಿ ಮನಸ್ಸಿಗೆ ಸಮಧಾನ ತಂದು ಕೊಳ್ಳಿ ಎಂದು ಹೇಳಿದರು. ಮಟ್ಕಾ, ಜೂಜು, ಸಾರಾಯಿ, ತಂಬಾಕು ಸೇವನೆ ಕುಟುಂಬವನ್ನು ಬೀದಿಗೆ ತರುತ್ತವೆ. ತಮ್ಮ ಕುಟುಂಬಕ್ಕಾಗಿಯಾದರೂ ದುಶ್ಚಟಗಳಿಂದ ದೂರ ಇರಬೇಕು ಎಂದು ಹೇಳಿದರು.
ಪರರ ಕಷ್ಟಕ್ಕೆ ಮಿಡಿಯಬೇಕು. ದಾನ, ಧರ್ಮ ಮಾಡಬೇಕು. ಗುರುವಿನ ವಾಣಿ ಆಲಿಸಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಜೀವನದಲ್ಲಿ ಗುರುವಿನ ಪಾತ್ರ ಬಹಳ ಮಹತ್ವದ್ದಾಗಿದೆ. ಗುರು ಭಕ್ತರನ್ನು ಉದ್ಧರಿಸುತ್ತಾನೆ. ಸನ್ಮಾರ್ಗ ತೋರುತ್ತಾನೆ. ಅಂತೆಯೇ ಸಂತರು ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕ್ತಿ ಎಂದಿದ್ದಾರೆ ಎಂದು ನುಡಿದರು.
ಗ್ರಾಮದ ಮುಖಂಡರಾದ ಗುರುರಾಜ ಕುಲಕರ್ಣಿ, ರವಿ ಪಾಟೀಲ, ವೈಜಿನಾಥ ಕುಂಬಾರ, ಶರಣಪ್ಪ ಹುಡೆದ್,ಕೃಷ್ಟ್ಣಕುಮಾರ ಹಣಕುಣಿ, ಬಸಪ್ಪ ಹುಡೆದ್, ವೈಜಿನಾಥ ಭೊಸಗೆ, ಪ್ರವೀಣ ಬ್ಯಾಲಹಳ್ಳಿ, ದೀಲಿಪ ಪಾಟಿಲ ಮೊದಲಾದವರು ಪಾಲ್ಗೊಂಡಿದ್ದರು