Home ಜಿಲ್ಲೆ ಕಲಬುರಗಿ ಉಚಿತ ಸಾಮೂಹಿಕ ವಿವಾಹ ನೋಂದಣಿ ಪ್ರಾರಂಭ

ಉಚಿತ ಸಾಮೂಹಿಕ ವಿವಾಹ ನೋಂದಣಿ ಪ್ರಾರಂಭ

ಜೇವರಗಿ,ಏ ೫:ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ನಿಮಿತ್ಯ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಲಕ್ಷ್ಮಿನಾರಾಯಣ್ ನಾಗವರ್ ಸ್ಥಾಪಿತ ಸಂಘಟನೆ ವತಿಯಿಂದ ಬರುವ ಮೇ ೧೫ರಂದು ಶಹಪುರ ತಾಲೂಕಿನ ಭೀಮರಾಯನಗುಡಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಆದ್ದರಿಂದ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ದಲಿತ ಬಂಧುಗಳು ಉಚಿತವಾಗಿ ನೋಂದಾಯಿಸಿಕೊಳ್ಳಲು ತಾಲೂಕ ಸಂಚಾಲಕ ವಿಶ್ವರಾಧ್ಯ ಮಾಯರ್ ಗಂವಾರ ತಿಳಿಸಿದ್ದಾರೆ.
ರಾಜ್ಯ ಸಮಿತಿ ಮುಖಂಡ ಹೊನ್ನಪ್ಪ ಗಂಗನಾಳ,ವಿಭಾಗೀಯ ಸಂಚಾಲಕ ಮಾಹದೇವ ಕೊಳಕೂರು ಮಾತನಾಡಿ ನವ ವಧು-ವರರು ಶಾಲೆಯ ದಾಖಲೆ ಆಧಾರ್ ಕಾರ್ಡು ರೇಷನ್ ಕಾರ್ಡ್ ಅಥವಾ ಗುರುತಿನ ಚೀಟಿ ಡಾಕ್ಟರ್ ಸರ್ಟಿಫಿಕೇಟ್ ಕಡ್ಡಾಯವಾಗಿ ನೋಂದಣಿ ಮಾಡಲು ತರಬೇಕು ಜೇವರ್ಗಿ ತಾಲೂಕು ಸಂಚಾಲಕ ವಿಶ್ವರಾಧ್ಯ ಗಂವಾರ್೯೯೪೫೮೩೨೫೧೯ ಮತ್ತು ಯಡ್ರಾಮಿ ತಾಲೂಕ ಸಂಚಾಲಕ ಸಂಗಮೇಶ್ ವಡಿಗೇರಿ ಮಾದೇವ ಕೋಳಕೂರು ೮೧೫೦೯೦೯೨೨೮ ಅವರಿಗೆ ಸಂಪರ್ಕಿಸಲು ಕೋರೊದರು. ಈ ಸಂದರ್ಭದಲ್ಲಿ ಶಿವಶರಣಪ್ಪ ಯಾಳಗಿ, ಶರಣಪ್ಪ ಭೂತಾಳಿ, ಮರಿಯಪ್ಪ ಸಲದಪೂರ, ಭೀಮರಾಯ ಜಗ್ರಿ, ರಾಯಪ್ಪ ಬಾರಿಗಿಡ,ಶರಣಪ್ಪ ಡೀಲರ್ ಮರೆಪ್ಪ ಬೇಗಾರ್, ರಾಜಶೇಖರ್ ಶಿಲ್ಪಿ ಸಂಗಣ್ಣ ಗುಡೂರ್ ಗುರುಲಿಂಗಪ್ಪ ಗುಡೂರು ಸೇರಿದಂತೆ ಅನೇಕರಿದ್ದರು