Home ಜಿಲ್ಲೆ ಆಸ್ತಿ ತೆರಿಗೆಗೆ ಶೇ.೫ ರಷ್ಟು ರಿಯಾಯಿತಿ

ಆಸ್ತಿ ತೆರಿಗೆಗೆ ಶೇ.೫ ರಷ್ಟು ರಿಯಾಯಿತಿ

ತಾಳಿಕೋಟೆ:ಏ.೫: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ಆಸ್ತಿಗಳ ಮಾಲಿಕರು ಏಪ್ರೀಲ್ ೩೦ ರೊಳಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಭರಣಾ ಮಾಡಿದ್ದಲ್ಲೆ ಪುರಸಭೆ ವತಿಯಿಂದ ಶೇ.೫ ರಷ್ಟು ರಿಯಾಯಿತಿ ಸೌಲಭ್ಯ ನೀಡಲಾಗಿದೆ ಎಂದರು ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರು ತಿಳಿಸಿದ್ದಾರೆ.
೨೦೨೬-೨೭ನೇ ಸಾಲಿನ ವರ್ಷಾರಂಭವಾಗಿದ್ದು ಆಸ್ತಿ ತೆರಿಗೆ ಮಾಲಿಕರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಈ ರೀಯಾಯಿತಿ ನೀಡಲಾಗಿದ್ದು ಹಾಗೂ ಮೇ ಮತ್ತು ಜೂನ್ ೨೦೨೬ರ ಒಳಗೆ ಆಸ್ತಿ ತೆರಿಗೆಯನ್ನು ತುಂಬಿದಲ್ಲಿ ಆಸ್ತಿ ತೆರಿಗೆಯ ಮೇಲೆಯೂ ಬಡ್ಡಿ ಇರುವದಿಲ್ಲಾ ಜೂಲೈ ೧ ರಿಂದ ಆಸ್ತಿ ತೆರಿಗೆ ತುಂಬಿದಲ್ಲಿ ಶೇ.೧೦೦ಕ್ಕೆ ಒಂದು ತಿಂಗಳಿಗೆ ೨ ರೂ.ಯಂತೆ ಬಡ್ಡಿ ಆಕರಣೆ ಮಾಡಲಾಗುವದು. ಹಾಗೂ ತಪ್ಪು ಮಾಹಿತಿ ನೀಡಿ ಕಂದಾಯ ತುಂಬಿದ್ದು ಕಂಡು ಬಂದಲ್ಲಿ ಮರು ಲೆಕ್ಕಾಚಾರ ಮಾಡಿ ನೋಡಿದರೆ ಈ ಹಿಂದೆ ತುಂಬಿದ ಹಣ ಹೊರತುಪಡಿಸಿ ಉಳಿದ ಮೊತ್ತದ ಎರಡು ಪಟ್ಟು ಕಂದಾಯ ತುಂಬಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಾರಣ ಸಾರ್ವಜನಿಕರು ಸಾರ್ವಜನಿಕರು ಸ್ವಯಂ ಘೋಷಿತ ಆಸ್ತಿ ತೆರಿಗೆ ತುಂಬಲು ಪುರಸಭೆ ವತಿಯಿಂದ ನೀಡಲಾಗಿರುವ ರಿಯಾಯಿತಿಯ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ ಅವರು ತಿಳಿಸಿದ್ದಾರೆ.