Home ಜಿಲ್ಲೆ ಅಲ್ಲಿಪೂರ್ ಗ್ರಾಮದಲ್ಲಿ ಯೇಸು ಕ್ರಿಸ್ತನ ಪುನರುತ್ಥಾನ ಹಬ್ಬ ಭಕ್ತಿಭಾವದಿಂದ ಆಚರಣೆ

ಅಲ್ಲಿಪೂರ್ ಗ್ರಾಮದಲ್ಲಿ ಯೇಸು ಕ್ರಿಸ್ತನ ಪುನರುತ್ಥಾನ ಹಬ್ಬ ಭಕ್ತಿಭಾವದಿಂದ ಆಚರಣೆ

ಯಾದಗಿರಿ:ಏ.೫: ಸಮೀಪದ ಅಲ್ಲಿಪೂರ್ ಗ್ರಾಮದಲ್ಲಿ ಯೇಸು ಕ್ರಿಸ್ತನ ಪುನರುತ್ಥಾನ ಹಬ್ಬವನ್ನು ಭಕ್ತಿಭಾವ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಘನ ಬೋಧಕ ರೇವ. ಮೋಹನ್ ಕುಮಾರ್ ಅವರು ಸಭಿಕರಿಗೆ ಆಶೀರ್ವಚನ ನೀಡಿದರು.

ತಮ್ಮ ಸಂದೇಶದಲ್ಲಿ ಅವರು ಯೇಸು ಕ್ರಿಸ್ತನ ಪುನರುತ್ಥಾನವು ಮಾನವಕುಲಕ್ಕೆ ಆಶಾ, ನಂಬಿಕೆ ಮತ್ತು ನಿತ್ಯಜೀವನದ ಸಂದೇಶವನ್ನು ಸಾರುತ್ತದೆ ಎಂದು ತಿಳಿಸಿದರು. ದುಃಖ, ಸಂಕಷ್ಟಗಳ ನಡುವೆಯೂ ದೇವರಲ್ಲಿ ನಂಬಿಕೆ ಇಟ್ಟು ಮುಂದುವರಿಯುವAತೆ ಕರೆ ನೀಡಿದರು.

ಸಭೆಯಲ್ಲಿ ಭಕ್ತರು ಪ್ರಾರ್ಥನೆಗಳಲ್ಲಿ ಭಾಗವಹಿಸಿ, ಭಜನೆಗಳು ಹಾಗೂ ಕೀರ್ತನೆಗಳ ಮೂಲಕ ದೇವರನ್ನು ಸ್ತುತಿಸಿದರು. ಈ ಸಂದರ್ಭದಲ್ಲಿ ಡಿ. ಭಾಸ್ಕರ್ (ಅಲ್ಲಿಪೂರ್) ಸೇರಿದಂತೆ ಗ್ರಾಮದ ಮಹಿಳೆಯರು ಹಾಗೂ ಯುವನಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ಆತ್ಮೀಯ ವಾತಾವರಣದಲ್ಲಿ ನೆರವೇರಿದ್ದು, ಕೊನೆಯಲ್ಲಿ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿ ಸಮಾರಂಭವನ್ನು ಸಮಾಪ್ತಿಗೊಳಿಸಲಾಯಿತು.