Home ಜಿಲ್ಲೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ತಪಾಸಣಾ ಶಿಬಿರ

ಸಂಜೆವಾಣಿ ವಾರ್ತೆ,
ವಿಜಯಪುರ, ಎ. ೫: ನಗರದ ಬಿ. ಎಲ್.ಡಿ.ಇ.ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದ ರೆಡ್ ಕ್ರಾಸ್ ಘಟಕ, ಕ್ರೀಡಾ ವಿಭಾಗ ಮತ್ತು ಬಿ. ಎಲ್.ಡಿ.ಇ.ಸಂಸ್ಥೆಯ ಮೆಡಿಕಲ್ ಕಾಲೀಜಿನ ಸಹಯೋಗದೊಂದಿಗೆ ವೈದ್ಯಕೀಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ರೆಡ್ ಕ್ರಾಸ್ ಘಟಕದ ಸಂಯೋಜಕರು, ಮತ್ತು ಸಹಪ್ರಾಧ್ಯಾಪಕರು ಡಾ. ಎಮ್.ಬಿ.ಕೋರಿ ಅವರು ಮಾತನಾಡಿ, ನಮ್ಮ ಮಹಾವಿದ್ಯಾಲಯದಲ್ಲಿ ರೆಡ್ ಕ್ರಾಸ್ ಘಟಕದ ಅಡಿಯಲ್ಲಿ ಪ್ರಶಿಕ್ಷಣಾರ್ಥಿಗಳ ಸ್ವಾಸ್ಥ್ಯ ಆರೋಗ್ಯಕ್ಕಾಗಿ ಹಲವಾರು ವೈದ್ಯಕೀಯ ತಪಾಸಣಾ ಕಾರ್ಯಕ್ರಮಗಳನ್ನು ಮತ್ತು ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗಿದೆ ಎಂದು ಪ್ರಸ್ತಾವಿಕ ನುಡಿಗಳನ್ನಾಡಿದರು. ಡಾ. ವಿಶಾಲ.ಎಸ್.ಕೌಲಗಿ(ಜನರಲ್ ಮೆಡಿಸಿನ್ ವಿಭಾಗ) ಇವರು ಮಾತನಾಡಿ, ಭಾರತೀಯ ಸಮಾಜದ ಆರೋಗ್ಯದ ಸ್ಥಿತಿಗತಿಯನ್ನು ಗಮನಿಸಿದರೆ ಇಂದಿನ ಯುವಕರಲ್ಲಿಯೇ ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೃದಯ ಗಾಥ, ಉಸಿರಾಟದ ತೊಂದರೆ ಇಂತಹ ಮೊದಲಾದ ರೋಗಗಳು ಹರಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು. ಇಂತಹ ನೂರಾರು ರೋಗಗಳು ಬರಲು ನಮ್ಮ ಜೀವನ ಶೈಲಿ, ಆಹಾರ ಪದ್ಧತಿ, ಖಿನ್ನತೆ, ಅಧಿಕ ಒತ್ತಡ ಈ ಮೊದಲಾದ ಅಂಶಗಳೇ ಮುಖ್ಯ ಕಾರಣವಾಗಿವೆ ಎಂದರು. ಜೊತೆಗೆ ಇವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪರಿಹಾರ ಕ್ರಮಗಳನ್ನು ತಿಳಿಸಿದರು.
ಡಾ. ಸರ್ವದಾ ಕನ್ನೂರ, ಸ್ತ್ರೀರೋಗ ತಜ್ಞರು, ಇವರು ಮಾತನಾಡಿ, ಮಹಿಳೆಯರಲ್ಲಿ ಹರಡುವ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಮತ್ತು ಇದರ ನಿಯಂತ್ರಣಕ್ಕಾಗಿ ಊPಗಿ ಲಸಿಕೆಯ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷರು ಮತ್ತು ಪ್ರಾಚಾರ್ಯರು ಡಾ. ಭಾರತಿ.ವಾಯ್.ಖಾಸನೀಸ ಅವರು ಮಾತನಾಡಿ, ಇಂದಿನ ಆಧುನಿಕ ದಿನಮಾನಗಳಲ್ಲಿ ಉತ್ತಮ ಆರೋಗ್ಯಕ್ಕೆ ವಿಶೇಷ ಮಹತ್ವ ನೀಡುವುದು ಅತ್ಯಗತ್ಯವಾಗಿದೆ ಎಂದರು. ಭವಿತವ್ಯದಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಆರೋಗ್ಯದ ಅರಿವು ಮೂಡಿಸಬೇಕೆಂಬ ಕಾರಣಕ್ಕಾಗಿ ಇಂದು ಪ್ರತಿ ವರ್ಷ ನಾವು ಭಾವಿ ಶಿಕ್ಷಕರಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾ.ಸಿದ್ದು. ಭೂಮಣ್ಣವರ, ಡಾ ಕಾವ್ಯ.ಕೆ, ಸಹ ಪ್ರಾಧ್ಯಾಪಕ ಡಾ. ಎಂ.ಎಸ್.ಹಿರೇಮಠ, ಸಹಾಯಕ ಪ್ರಾಧ್ಯಾಪಕ ಶ್ರೀ ಎಮ್. ಪಿ. ಕುಪ್ಪಿ, ಶ್ರೀ. ಪಿ.ಡಿ.ಮುಲ್ತಾನಿ, ಡಾ. ಎಸ್.ಪಿ.ಶೇಗುಣಸಿ, ಸಂಶೋಧನಾ ವಿದ್ಯಾರ್ಥಿನಿ ಸುಜಾತಾ ಮತ್ತಿವಾಡ, ಶ್ರೀ ವಿನೋದ ಗಲಗಲಿ, ಸವಿತಾ ಪಾಟೀಲ, ಗಂಗೂಬಾಯಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಬಿ.ಎಸ್.ಹಿರೇಮಠ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಜೆ.ಎಸ್. ಪಟ್ಟಣಶೆಟ್ಟಿ ನಿರೂಪಿಸಿದರು.