Home ಜಿಲ್ಲೆ ಬೆಂಗಳೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಎನ್.ಡಿ.ಎ. ಅಭ್ಯರ್ಥಿಗಳ ಆಯ್ಕೆ ಖಚಿತ

ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಎನ್.ಡಿ.ಎ. ಅಭ್ಯರ್ಥಿಗಳ ಆಯ್ಕೆ ಖಚಿತ

ಕೋಲಾರ,ಏ,೪- ಕೋಲಾರ ಜಿಲ್ಲೆಯ ಜಾತ್ಯಾತೀತ ಜನತಾ ಪಕ್ಷಕ್ಕೆ ನಾಯಕತ್ವ ವಹಿಸುವವರು ಯಾರು ? ಸಂಘಟನೆ ಮಾಡುವುದು ಹೇಗೆ? ಯಾರನ್ನು ನಂಬಿ ಕೊಂಡು ಕೆಲಸ ನಿರ್ವಹಿಸ ಬೇಕು ? ಎಂಬುವುದು ಯಕ್ಷ ಪ್ರಶ್ನೆಗಳಾಗಿ ಮುಖಂಡರಲ್ಲಿ ಕಾಡಿದವು.


ನಗರ ಹೊರವಲಯದ ಟೇಕಲ್ ರಸ್ತೆಯ ಬೈಪಾಸ್ ಸಮೀಪದ ದಳಪತಿ ಸಿಎಂಆರ್ ಶ್ರೀನಾಥ್ ಅವರ ಗೃಹ ಕಚೇರಿಯಲ್ಲಿ ನಡೆದ ಜೆಡಿಎಸ್ ಸಮಾಲೋಚನಾ ಸಭೆಯಲ್ಲಿಹಲವು ಮುಖಂಡರು ಮಾತನಾಡಿ ಪಕ್ಷವು ಇತ್ತೀಚೆಗೆ ಬಿಜೆಪಿಯ ಮೈತ್ರಿಯ ನಂತರ ಪಕ್ಷದ ಸಂಘಟನೆಯಲ್ಲಿ ನಿರ್ಲಕ್ಷತೆ ಕಂಡು ಬರುತ್ತಿದೆ. ಈ ಕುರಿತು ಪಕ್ಷದ ಮುಖಂಡರುಗಳು ಎಚ್ಚತ್ತು ಕೊಂಡು ಆಗಾಗ್ಗೆ ಸಭೆಗಳನ್ನು ನಡೆಸುವ ಮೂಲಕ ಕಾರ್ಯಕರ್ತರೊಂದಿಗೆ ನಿರಂತರ ಸಂರ್ಪಕದಲ್ಲಿರ ಬೇಕು. ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ನಿರ್ವಹಿಸ ಬೇಕೆಂಬ ಅಭಿಪ್ರಾಯಗಳನ್ನು ಹಲವು ಮುಖಂಡರು ವ್ಯಕ್ತಪಡಿಸಿದರು.


ಜೆ.ಡಿ.ಎಸ್. ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿ ಕೊಂಡಿರುವುದು ಪಕ್ಷದ ಹಿತದೃಷ್ಠಿಯಿಂದ ಸಮಂಜಸವಾಗಿದೆ ಅದರೆ ಕಾರ್ಯಕರ್ತರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿ ಕೊಳ್ಳಲು ಅಗಾಗ್ಗೆ ಎರಡು ಪಕ್ಷಗಳ ಮುಖಂಡರು ಸಂಘಟಿಸಿ ಕಾರ್ಯಕರ್ತರೊಂದಿಗೆ ಸಂರ್ಪಕದಲ್ಲಿರುವಂತಾಗಬೇಕು. ಮೈತ್ರಿ ಎಂಬುವುದು ಕೇವಲ ಚುನಾವಣೆಗಳಿಗೆ ಮಾತ್ರ ಮೀಸಲಾಗಿರ ಬಾರದು ಎಂದು ತಿಳಿಸಿದರು


ಕಳೆದ ಮೂರು ವರ್ಷಗಳಿಂದ ಪಕ್ಷವನ್ನು ಸಂಘಟಿಸ ಬೇಕೆಂದು ಪಕ್ಷದ ವರಿಷ್ಟರ ಗಮನಕ್ಕೆ ಹಲವರು ಬಾರಿ ಗಮನಕ್ಕೆ ತಂದರೂ ಯಾವೂದೇ ಪ್ರಯೋಜವಾಗಲಿಲ್ಲ. ಜಿಲ್ಲೆಯಲ್ಲಿ ಜೆ.ಡಿ.ಎಸ್.ನಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಈ ಬಗ್ಗೆ ಯಾರು ತಲೆ ಕೆಡಿಸಿ ಕೊಳ್ಳಲಿಲ್ಲ. ಸಂಘಟನೆಯ ಸಭೆಗಳು ಕೇವಲ ಚುನಾವಣೆಗಳಿಗೆ ಮಾತ್ರ ಮೀಸಲಾಗಿರ ಬಾರದು ಪಕ್ಷವನ್ನು ಯಾರು ಮುನ್ನಡೆಸ ಬೇಕೆಂದು ಪಕ್ಷದ ಹೈ ಕಮಾಂಡ್ ಸ್ವಷ್ಟ ನಿರ್ದೇಶನ ನೀಡುವಂತೆ ಅದರೆ ನಾವು ಆದೇಶಗಳನ್ನು ಪರಿಪಾಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಜೆ.ಡಿ.ಎಸ್. ಪಕ್ಷದ ಮುಖಂಡರಾದ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಯಾವೂದೇ ಚುನಾವಣೆಗಳು ಬರಲಿ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಲಿ ಅವರ ಪರವಾಗಿ ಕೆಲಸ ಮಾಡುವುದು ನಮ್ಮ ಕೆಲಸವಾಗಿರುತ್ತದೆ ಹೊರತಾಗಿ ಅವರಿಗೆ ಟಿಕೆಟ್ ಇವರಿಗೆ ಟೆಕೆಟ್ ಎಂಬ ಚರ್ಚೆಗಳು ಅನಾವಶ್ಯಕವಾದದ್ದು ಈ ಬಗ್ಗೆ ಯಾರೂ ಚರ್ಚಿಸ ಬೇಡಿ, ಕೋಲಾರ ವಿಧಾನ ಸಭಾ ಕ್ಷೇತ್ರ ನನ್ನ ಜನ್ಮ ಭೂಮಿ ಹಾಗೂ ನನ್ನ ಕರ್ಮ ಭೂಮಿಯಾಗಿದೆ. ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ೫೩ ಸಾವಿರ ಮತಗಳನ್ನು ನೀಡಿದ್ದಾರೆ. ಆ ಮತದಾರ ಋಣ ತೀರಿಸುವ ಕೆಲಸ ಮಾಡುತ್ತಿದೇನೆ ಎಂದು ಮುಖಂಡರನ್ನು ಕಾರ್ಯಕರ್ತರನ್ನು ಸಮಾಧಾನ ಪಡೆಸಿದರು.


ಚುನಾವಣೆ ಎಂದ ಮೇಲೆ ಎಲ್ಲರಿಗೂ ಸ್ವರ್ಧೆ ಮಾಡಬೇಕೆಂಬ ಆಸೆಯು ಸಹಜವಾದದ್ದೆ. ಇದನ್ನು ಅಲ್ಲಲ್ಲಿ ವ್ಯಕ್ತ ಪಡೆಸಿರುತ್ತಾರೆ ಇದರಿಂದ ಮುಖಂಡರು ಹಾಗೂ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗ ಬೇಡಿ ಯಾರೂ ಭಯಬೀತರಾಗುವುದು ಬೇಡಾ, ಪ್ರಥಮವಾಗಿ ಪಕ್ಷವನ್ನು ಸಂಘಟಿಸಿ ಸಧೃಡ ಪಡೆಸಿ ಕೊಳ್ಳೂಣಾ ಮುಂಬರಲಿರುವ ಚುನಾವಣೆಗಳಲ್ಲಿ ಜೆ.ಡಿ.ಎಸ್. ಮತ್ತು ಬಿಜೆಪಿ ಪಕ್ಷಗಳ ಮೈತ್ರಿ ಪಕ್ಷವು ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಎನ್.ಡಿ.ಎ. ಅಭ್ಯರ್ಥಿ ಶಾಸಕರಾಗುವುದು ಖಚಿತ ಎಂದು ಭವಿಷ್ಯ ನುಡಿದರು.


ಕಳೆದ ಚುನಾವಣೆಯಲ್ಲಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರದಿಂದ ಸ್ವರ್ದಿಸುವ ಪ್ರಯತ್ನ ನಡೆಸಿದ್ದರು ಅದರೆ ಹಲವು ಸಮೀಕ್ಷೆಗಳ ವರದಿಯಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಭಿನ್ನಮತದ ಗುಂಪುಗಳಿರುವುದು ಜೂತೆಗೆ ಜೆ.ಡಿ.ಎಸ್. ಪಕ್ಷವು ಸದೃಢವಾಗಿದೆ ಎಂಬ ಮಾಹಿತಿಯ ಹಿನ್ನಲೆಯ ಕಾಂಗ್ರೆಸ್ ಸೋಲುವುದು ಖಚಿತ ಎಂಬ ಸಮೀಕ್ಷೆಯ ವರದಿಯ ಹಿನ್ನಲೆಯಲ್ಲಿ ಸಿದ್ದರಾಮಯ್ಯನವರು ಸ್ವರ್ದೆಯಿಂದ ಹಿಂದೆ ಸರಿದು ಕ್ಷೇತ್ರವನ್ನು ಬದಲಾಯಿಸಿದರು ಎಂಬುವುದು ಎಲ್ಲಾರಿಗೂ ತಿಳಿದ ವಿಷಯವಾಗಿದೆ ಎಂದರು.


ಅದರೆ ಈ ಭಾರಿ ಬಿಜೆಪಿ ಪಕ್ಷವು ಜೆ.ಡಿ.ಎಸ್. ಪಕ್ಷದೊಂದಿಗೆ ಮೈತ್ರಿ ಅಗಿರುವುದರಿಂದ ಈ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯು ಗೆಲವು ಖಚಿತ ಎಂಬ ಸಮೀಕ್ಷಾ ವರದಿಗಳು ಈಗಾಗಲೇ ಸ್ವಷ್ಟ ಪಡೆಸಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡು ಪಕ್ಷಗಳ ಮೈತ್ರಿಯಿಂದ ಗೆಲವು ಸಾಧ್ಯವಾದಂತೆ ಈ ಭಾರಿ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲು ಎನ್.ಡಿ.ಎ. ಅಭ್ಯರ್ಥಿಗಳು ಗೆಲವು ಖಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು ಈಗಿನಿಂದಲೇ ಮೈತ್ರಿ ಪಕ್ಷವನ್ನು ಸಂಘಟಿಸಿ ಬಲ ಪಡೆಸ ಬೇಕು. ಮುಂಬರಲಿರುವ ಪಂಚಾಯತ್ ಸೇರಿದಂತೆ ಎಲ್ಲಾ ಚುನಾವಣೆಗಳನ್ನು ಎದುರಿಸುವ ಸಿದ್ದತೆಗಳನ್ನು ಮಾಡಿ ಕೊಳ್ಳ ಬೇಕೆಂದು ಕರೆ ನೀಡಿದರು


ವೇಮಗಲ್ ಕುರುಗಲ್ ಪಟ್ಟಣ ಪಂಚಾಯ್ತಿ ಸದಸ್ಯ ಲೋಕೇಶ್ ಮರಿಯಪ್ಪ ಮಾತನಾಡಿ ಕೋಲಾರ ವಿಧಾಸಭಾ ಕ್ಷೇತ್ರದಲ್ಲಿ ಬೆಂಗಳೂರಿನ ಹಣವಂತರು ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದು ಇವರಿಗೆ ನಮ್ಮ ಪಕ್ಷದವರೇ ಕುಮ್ಮಕ್ಕು ನೀಡುತ್ತಿರುವುದರಿಂದಾಗಿ ಹಳ್ಳಿಗಳಲ್ಲಿ ಎರಡು ಗುಂಪುಗಳಾಗಿವೆ. ಹೀಗಾಗಿ ದಳದ ಮುಖಂಡರು ಎಚ್ಚೆತ್ತುಕೊಂಡು ದೊಡ್ಡ ಗೌಡರು ಮತ್ತು ಕುಮಾರಣ್ಣನ ಬಳಿ ಚರ್ಚೆ ಮಾಡಿ ಮುಖಂಡ ಸಿಎಂಆರ್ ಶ್ರೀನಾಥ್ ಅವರಿಗೆ ಟಿಕೇಟ್ ಖಾತ್ರಿ ಪಡಿಸಿಕೊಳ್ಳಬೇಕೆಂದು ಆಗ್ರಹಿಸಿದರು.


ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬುಮೌನಿ, ಬಾಲಾಜಿ ಚನ್ನಯ್ಯ, ಟಿಎಪಿಎಂಎಸ್ ಅಧ್ಯಕ್ಷ ವಡಗೂರುರಾಮು,ಮುಖಂಡ ವಿ.ಕೆ.ರಾಜೇಶ್ ಇದ್ದರು.
.