Home ಜಿಲ್ಲೆ ಇಲ್ಯಾಸ್ ಪಟೇಲರ ನೂತನ ‘ಅತಿಥಿ ಹೃದಯ’ ಪುಸ್ತಕದ ಶೀರ್ಷಿಕೆ ಅನಾವರಣ

ಇಲ್ಯಾಸ್ ಪಟೇಲರ ನೂತನ ‘ಅತಿಥಿ ಹೃದಯ’ ಪುಸ್ತಕದ ಶೀರ್ಷಿಕೆ ಅನಾವರಣ

ಸಂಜೆವಾಣಿ ವಾರ್ತೆ
ಕೆಂಭಾವಿ:ಏ.೪:ವೈವಿಧ್ಯಮಯ ಸಂಸ್ಕೃತಿಯನ್ನು ಪ್ರೀತಿಸೋಣ, ಗೌರವಿಸೋಣ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯೋಣ, ಸೂಫಿ ಸಂತರು, ದಾಸ ಶ್ರೇಷ್ಠರು, ಮಹಾತ್ಮರು, ಶಿವಶರಣರು ತೋರಿದ ಮಾರ್ಗದಲ್ಲಿ ಸಾಗೋಣ ಎಂದು ಸಜ್ಜಾದ ನಶಿನ್ ಮಾಸಾಬಿ ದುರ್ಗಾದ ಸಾಹೇಬ್ ಶಾಹೀದ್ ಹುಸೇನ್ ಫಾರೂಕಿ ಹೇಳಿದರು.ಪಟ್ಟಣದ ಶ್ರೀ ಗುರು ಕಾತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಹಿರೇಮಠ ಸಂಸ್ಥಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯಲ್ಲಿ ಇಲಿಯಾಸ್ ಪಟೇಲರ ಚೊಚ್ಚಲ ಕೃತಿ ‘ಅತಿಥಿ ಹೃದಯ’ ಕಾದಂಬರಿ ಮುಖಪುಟ ಅನಾವರಣ ಮಾಡಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದ
ಮಲ್ಲಯ್ಯ ಸ್ವಾಮಿ ವಡಿಗೇರಿ ಹೆಣ್ಣು, ಹೊನ್ನು, ಮಣ್ಣು, ಅಧಿಕಾರ, ಅಂತಸ್ತು, ಬಯಸದೆ, ಬದುಕಿನುದ್ದಕ್ಕೂ ಸೇವಾ ಮನೋಭಾವ ಮೈಗೂಡಿಸಿಕೊಂಡರೆ ಭಗವಂತನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ ಎಂದವರು, ಹಿರೇಮಠದ ಪೀಠಾಧಿಪತಿ ಷ ಬ್ರ ಚನ್ನಬಸವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜರುಗುವ ಮಾಸಿಕ ಸತ್ಸಂಗವು
ಸಾಹಿತ್ಯ, ಸಂಗೀತ,ಕಲೆ, ಸಂಸ್ಕೃತಿ, ಆಚಾರ, ವಿಚಾರ, ಶ್ರದ್ಧೆ, ಮತ್ತು, ಸಂಪ್ರದಾಯಗಳ ಪಾಠಶಾಲೆ ಎಂದು ಬಣ್ಣಿಸಿದರು.

ಪೀಠಾಧಿಪತಿ ಷ ಬ್ರ ಶ್ರೀ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸೋಮನಾಥ ಯಾಳಗಿ ಹಾಗೂ ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು. ಇದೇ ವೇಳೆ ಮಲ್ಲಮ್ಮ ನುಡಿ ಪತ್ರಿಕೆಯ ಯುಗಾದಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಸಾಹಿತಿ ನಿಂಗನಗೌಡ ದೇಸಾಯಿ, ನಿಜಗುಣಿ ವಿಶ್ವಕರ್ಮ, ಪುರಸಭೆ ಸದಸ್ಯ ಭೀಮನಗೌಡ ಮಲ್ಕಾಪುರ, ದೇವಿಂದ್ರ ಕರಡಕಲ್, ನಯೋಮ್ ಖಾಜಿ ಅಬ್ದುಲ್ ರಜಾಕ್ ಸಾಸನೂರ, ಬಂದೇ ನವಾಜ್ ನಾಲತವಾಡ , ಇಲಿಯಾಸ್ ವಡಿಕೇರಿ, ಡಾ ಯಂಕನಗೌಡ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು