Home ಜಿಲ್ಲೆ ಕಲಬುರಗಿ ಪ್ರೊ.ಆರ್.ಆರ್.ಬಿರಾದಾರ ಅವರಿಗೆ ಪಿಎಚ್.ಡಿ ಪದವಿ ಪ್ರದಾನ

ಪ್ರೊ.ಆರ್.ಆರ್.ಬಿರಾದಾರ ಅವರಿಗೆ ಪಿಎಚ್.ಡಿ ಪದವಿ ಪ್ರದಾನ

ಕಲಬುರಗಿ,ಏ.2-ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪೆÇ್ರ.ಆರ್.ಆರ್. ಬಿರಾದಾರ ಅವರಿಗೆ ಮಾ.28 ರಂದು ಮಂಗಳೂರು ವಿಶ್ವವಿದ್ಯಾಲಯದ 44ನೇ ಘಟಿಕೋತ್ಸವದಲ್ಲಿ ಎರಡನೇ ಪಿಎಚ್.ಡಿ ಪದವಿ ಪ್ರಮಾಣಪತ್ರವನ್ನು ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರದಾನ ಮಾಡಿದರು.
ಪೆÇ್ರ.ಬಿರಾದಾರ ಅವರು “ಕೋಶೀಯ ಕಾರ್ಯನಿರ್ವಹಣೆ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಕೋಶೀಯ ನೀತಿ ಸುಧಾರಣೆಗಳ ಪರಿಣಾಮ: ಭಾರತದ ಪ್ರಮುಖ ರಾಜ್ಯಗಳ ಒಂದು ವಿಶ್ಲೇಷಣೆÀ; ಎಂಬ ವಿಷಯದ ಮೇಲೆ ತಮ್ಮ ಪಿಎಚ್.ಡಿ ಪೂರ್ಣಗೊಳಿಸಿದ್ದಾರೆ.
ಈ ಸಂಶೋಧನೆಯನ್ನು ಧಾರವಾಡದ ಸಿಎಂಡಿಆರ್‍ನ ಪೆÇ್ರ.ನಯನತಾರ ಎಸ್. ನಾಯಕ್ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಲಾಗಿದೆ. ಪೆÇ್ರ. ಬಿರಾದಾರ ಅವರ ಸಂಶೋಧನೆಯಲ್ಲಿ, ಕೋಶೀಯ ಸುಧಾರಣೆ
ಮತ್ತು ಬಜೆಟ್ ನಿರ್ವಾಹಣಾ (ಎಫ್‍ಆರ್‍ಬಿಎಮ್) ಕಾಯ್ದೆ ಜಾರಿಯಾದ ನಂತರ ಸಾಮಾನ್ಯ ಸರ್ಕಾರ (ಕೇಂದ್ರ ಮತ್ತು ರಾಜ್ಯ)ದ ಒಟ್ಟು ವೆಚ್ಚದ ವಾರ್ಷಿಕ ಬೆಳವಣಿಗೆ ದರಲ್ಲಿ ಹೆಚ್ಚಾಗಿದೆ ಎಂದು ಕಂಡುಬಂದಿದೆ. ವಿಶೇಷವಾಗಿ, ಆದಾಯ ವೆಚ್ಚಕ್ಕಿಂತ ಬಂಡವಾಳ ವೆಚ್ಚದಲ್ಲಿ ಹೆಚ್ಚು ಏರಿಕೆ ಕಂಡುಬಂದಿದೆ. ಈ ಏರಿಕೆ ರಾಜ್ಯ ಸರ್ಕಾರಗಳಿಗಿಂತ ಕೇಂದ್ರ ಸರ್ಕಾರದ ಮಟ್ಟದಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡುಬಂದಿದೆ. ಇವರ ಅಧ್ಯಯನದ ಪ್ರಕಾರ, ಆದಾಯ ವೆಚ್ಚವು ಜಿಡಿಪಿ ಮೇಲೆ ನಕಾರಾತ್ಮಕ ಪರಿಣಾಮ ಬೀರಿದರೆ, ಬಂಡವಾಳ ವೆಚ್ಚವು ಧನಾತ್ಮಕ ಪರಿಣಾಮ ಬೀರಿದೆ. ಇದೇ ವೇಳೆ, ಸಾಮಾನ್ಯ ಸರ್ಕಾರದ ಒಟ್ಟು ಆದಾಯಗಳು ಕೂಡ ಹೆಚ್ಚಾಗಿವೆ. ಬಂಡವಾಳ ಆದಾಯದ ಹೆಚ್ಚಳವು ರಾಜ್ಯ ಸರ್ಕಾರಗಳಿಗಿಂತ ಕೇಂದ್ರ ಸರ್ಕಾರದಲ್ಲಿ ಹೆಚ್ಚು ಏರಿಕೆ ಕಂಡುಬಂದಿದೆ. ಒಟ್ಟು ವೆಚ್ಚವು ಒಟ್ಟು ಆದಾಯಕ್ಕಿಂತ ಹೆಚ್ಚು ಇರುವುದರಿಂದ, ಒಟ್ಟು ಕೋಶೀಯ ಕೊರತೆ (ಉಡಿoss
ಈisಛಿಚಿಟ ಆeಜಿiಛಿiಣ) ಹೆಚ್ಚಾಗಿದೆ. ಈ ಏರಿಕೆ ರಾಜ್ಯ ಸರ್ಕಾರಗಳಿಗಿಂತ ಕೇಂದ್ರ ಸರ್ಕಾರದಲ್ಲಿ ಹೆಚ್ಚು ಕಂಡುಬಂದಿದೆ. ಆದರೆ, ಈ ಕಾಯ್ದೆ ಜಾರಿಗೆ ಬಂದನಂತರ ಸಾರ್ವಜನಿಕ ಸಾಲದ ಬೇಳವಣಿಗೆ ದರವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸ್ವಲ್ಪ ಮಟ್ಟಿಗೆ ಕುಂಠಿತವಾಗಿದೆ. ಆದರೆ ಸಾರ್ವಜನಿಕ ಸಾಲವು ದೇಶದ ಜಿಡಿಪಿ ಮೇಲೆ ನಕಾರಾತ್ಮಕವಾದ ಪರಿಣಾಮ ಬೀರಿದೆ. ಅಲ್ಲದೆ ಎಫ್‍ಆರ್‍ಬಿಎಮ್ ಕಾಯ್ದೆ ಜಾರಿಯಾದ ನಂತರ ಕೇಂದ್ರ ಮತ್ತುರಾಜ್ಯ ಸರ್ಕಾರಗಳ ಕೋಶೀಯ ಶಿಸ್ತಿನಲ್ಲಿ ಸುಧಾರಣೆ ಕಂಡುಬಂದಿದೆ. ಈ ಸುಧಾರಣೆ ರಾಜ್ಯ ಸರ್ಕಾರಗಳಿಗಿಂತ ಕೇಂದ್ರ ಸರ್ಕಾರದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬಂದಿದೆ. ಇದರಿಂದ, ಕೇಂದ್ರ ಸರ್ಕಾರವು ಬಂಡವಾಳ ವೆಚ್ಚದ ಕಡೆ ಹೆಚ್ಚು ಗಮನಹರಿಸಿ, ಸಾಲದ ಅವಲಂಬನೆಯನ್ನು ಕಡಿಮೆ ಮಾಡಿ, ಆರ್ಥಿಕ ಉತ್ಪಾದಕತೆಯನ್ನು ಹೆಚ್ಚಿಸುವ ದಿಶೆಯಲ್ಲಿ ಸಾಗುತ್ತಿದೆ ಎಂಬುದು ತಿಳಿದುಬರುತ್ತದೆ. ಅಧ್ಯಯನವು ಸೂಚಿಸುವುದೇನೆಂದರೆ ಅನುತ್ಪಾದಕ ವೆಚ್ಚವನ್ನು ಕಡಿಮೆ ಮಾಡಬೇಕು, ಬಂಡವಾಳ ವೆಚ್ಚವನ್ನು ಹೆಚ್ಚಿಸಬೇಕು, ಸಾಲ ಪಡೆದ ಹಣವನ್ನು ವೇತನ, ಪಿಂಚಣಿ, ಫ್ರೀಬೀಜ್ ಯೋಜನೆಗಳು, ಸಾಮಾಜಿಕ ಭದ್ರತಾ
ಸೇವೆ ಮುಂತಾದವುಗಳ ಮೇಲೆ ವೆಚ್ಚಮಾಡುವ ಬದಲು ಉತ್ಪಾದಕ ಆಸ್ತಿಗಳ ನಿರ್ಮಾಣಕ್ಕೆ ಬಳಸಬೇಕು. ಮೇಲ್ಕಂಡ ಸಲಹೆಗಳನ್ನು ಅನುಷ್ಠಾನಗೊಳಿಸಿದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಣಕಾಸು
ಆರೋಗ್ಯ ಮತ್ತು ಶಿಸ್ತಿನಲ್ಲಿ ಇನ್ನಷ್ಟು ಸುಧಾರಣೆ ಆಗುತ್ತದೆ ಮತ್ತು 2047ರೊಳಗೆ “ವಿಕಸಿತ ಭಾರತ” ಎಂಬ ಕನಸು ನನಸಾಗಲು ನೆರವಾಗುತ್ತದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು
ಸತ್ಯನಾರಾಯಣ, ಸಿಎಂಡಿಆರ್ ಧಾರವಾಡದ ನಿರ್ದೇಶಕ ಪೆÇ್ರ. ಬಸವಪ್ರಭು ಜಿರ್ಲಿ ಮತ್ತು ಅವರ ಸಂಶೋಧನಾ ಮಾರ್ಗದರ್ಶಕರಾದ ಪೆÇ್ರ. ನಯನತಾರ ಎಸ್. ನಾಯಕ್ ಅವರು ಪೆÇ್ರ. ಬಿರಾದಾರವರಿಗೆ ಅವರ ಆಡಳಿತ ಜವಾಬ್ದಾರಿಗಳ ಮಧ್ಯೆದಲ್ಲಿಯೂ ಮಾಡಿದ ಶೈಕ್ಷಣಿಕ ಸಾಧನೆ ಮತ್ತು ಸಂಶೋಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.