
ನವದೆಹಲಿ,ಏ.೨- ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆಗಳಲ್ಲಿ ಏರಿಕೆ, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತು ವಿದೇಶಿ ಹೂಡಿಕೆದಾರರರ ಮೇಲೆ ಪರಿಣಾಮ ಬಿದ್ದಿದೆ. ಇದರಿಂದಾಗಿ ಷೇರು ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿದೆ
ಸೆನ್ಸೆಕ್ಸ್ ೧,೫೦೦ ಅಂಕಗಳ ಕುಸಿತ ಮತ್ತು ನಿಫ್ಟಿ ಶೇಕಡಾ ೨ಕ್ಕಿಂತ ಹೆಚ್ಚು ಕುಸಿತದೊಂದಿಗೆ, ೨೨,೨೦೦ ಅಂಕಗಳಿಗಿಂತ ಕೆಳಗಿಳಿದಿದೆ, ಇದು ಹೂಡಿಕೆದಾರರ ಮೇಲೆ ಗಂಬೀರ ಪರಿಣಾಮ ಬೀರಿದೆ
ದಿನದ ಆರಂಭ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ ೧,೫೫೭ ಅಂಕಗಳು ಅಥವಾ ಶೇಕಡಾ ೨.೧೩ ರಷ್ಟು ಕುಸಿದು ಅಂತಿಮ ವಹಿವಾಟು ೭೧,೫೭೬.೩೫ ಕ್ಕೆ ತಲುಪಿದೆ. ನಿಫ್ಟಿ ೫೦ ೪೯೫ ಅಂಕಗಳ ಕುಸಿತ ಅಥವಾ ಶೇಡಕಾ ೨.೧೯ ರಷ್ಟು ಕುಸಿದು ಅಂತಿಮವಾಗಿ ೨೨,೧೮೩.೬೦ ಕ್ಕೆ ತಲುಪಿದೆ. ಒಟ್ಟು ೨೨,೨೦೦ ಅಂಕಗಳಿಗಿಂತ ಕೆಳಮಟ್ಟಕ್ಕೆ ಕುಸಿದಿದೆ.
ಷೇರು ಮಾರುಕಟ್ಟೆ ವಿಸ್ತಾರ ದುರ್ಬಲವಾಗಿಯೇ ಉಳಿದಿದೆ, ಇದರಿಂದ ವಲಯಗಳಲ್ಲಿ ವಿಶಾಲ ಆಧಾರಿತ ಅಪಾಯ-ನಿರಾಕರಣೆ ಮನಸ್ಥಿತಿ ಸೂಚಿಸುತ್ತದೆ. ವಹಿವಾಟು ಆರಂಭವಾದ ಕೆಲವೇ ಗಂಟೆಗಳಲ್ಲಿ ಸುಮಾರು ೧೦ ಲಕ್ಷ ಕೋಟಿ ರೂಪಾಯಿ ಹೂಡಿಕೆದಾರರ ಸಂಪತ್ತು ಖೋತಾ ಆಗಿದೆ,
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಇರಾನ್ ಸಂಘರ್ಷದಲ್ಲಿ ಸಂಭವನೀಯ ಏರಿಕೆಗೆ ಕಾರಣವಾಗಿದೆ. ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ತೀವ್ರ ಏರಿಕೆಯಿಂದ ಮಾರಾಟದ ಮೇಲೆ ಪರಿಣಾಮ ಬೀರಿದೆ. ಇದರಿಂದಜಾಗತಿಕ ಇಂಧನ ಮಾರುಕಟ್ಟೆಗಳಿಗೆ ನಿರ್ಣಾಯಕವಾದ ಪ್ರದೇಶದಲ್ಲಿ ಪೂರೈಕೆ ಅಡಚಣೆ ಎದುರಾಗಿದೆ
ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ ಸುಮಾರು ಶೇಡಕಾ ೫ ರಷ್ಟು ಏರಿಕೆಯಾಗಿ ೧೦೫ ಡಾಲರ್‍ಗೆ ಏರಿಕೆಯಾಗಿದೆ. ಅಮೇರಿಕಾದಲ್ಲಿ ಕಳೆದ ೧೦ ವರ್ಷಗಳ ನಂತರ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ
ಭಾರತಕ್ಕೆ, ಕಚ್ಚಾತೈಲದ ಮೇಲೆ ಪರಿಣಾಮಗಳು ತಕ್ಷಣ ಮತ್ತು ಗಮನಾರ್ಹವಾಗಿವೆ. ಹೆಚ್ಚಿನ ಕಚ್ಚಾ ತೈಲ ಬೆಲೆಗಳು ವ್ಯಾಪಾರ ಕೊರತೆ ಹೆಚ್ಚಿಸುತ್ತವೆ, ಕೈಗಾರಿಕೆಗಳಲ್ಲಿ ಇನ್‌ಪುಟ್ ವೆಚ್ಚ ಹೆಚ್ಚಿಸುತ್ತವೆ ಮತ್ತು ರೂಪಾಯಿಯ ಮೇಲೆ ಒತ್ತಡ ಹೆಚ್ಚಾಗಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.೩.೭ ರಷ್ಟು ಕುಸಿದು ರೂ.೯೭೯.೯೫ ಕ್ಕೆ ತಲುಪಿದ್ದರೆ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಶೇ.೧.೪ ರಿಂದ ಶೇಕಡಾ ೨.೨ ರಷ್ಟು ಕುಸಿದಿವೆ. ವಿದೇಶಿ ಹರಿವು ಮತ್ತು ಕರೆನ್ಸಿ ಚಂಚಲತೆಗೆ ಹಣಕಾಸು ಷೇರುಗಳು ಕುಸಿತಕಂಡಿವೆ
ಆವರ್ತಕ ಷೇರುಗಳಲ್ಲಿ, ಲಾರ್ಸೆನ್ ಅಂಡ್ ಟೂಬ್ರೊ ಶೇ.೩.೭ ರಷ್ಟು ಕುಸಿದು ರೂ.೩,೪೭೩.೪೦ ಕ್ಕೆ ತಲುಪಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ ಶೇ.೨.೭ ರಷ್ಟು ಕುಸಿದು ರೂ.೧,೩೩೨.೫೦ ಕ್ಕೆ ತಲುಪಿದ್ದು, ಇದು ಇಂಧನ-ಸಂಬಂಧಿತ ಮತ್ತು ಬಂಡವಾಳ-ಭಾರೀ ಕುಸಿತ ಕಂಡಿದೆ























