Home ಜಿಲ್ಲೆ ಬೆಂಗಳೂರು ಚನ್ನರಾಯಪುರ ಡೇರಿ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಚನ್ನರಾಯಪುರ ಡೇರಿ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಕೋಲಾರ: ೩೧- ತಾಲ್ಲೂಕಿನ ಹುತ್ತೂರು ಹೋಬಳಿಯ ಚನ್ನರಾಯಪುರ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸಿ.ಎನ್ ಚಂದ್ರಪ್ಪ, ಉಪಾಧ್ಯಕ್ಷರಾಗಿ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾದರು


ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಎರಡು ಸ್ಥಾನಕ್ಕೆ ಒಂದೊಂದು ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆ ನಡೆಯಿತು.


ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ವೆಂಕಟೇಶ್ ಬಾಬು ಕಾರ್ಯನಿರ್ವಹಿಸಿದರು. ಇದಕ್ಕೂ ಮೊದಲು ನಡೆದ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ನೂತನ ನಿರ್ದೇಶಕರಾಗಿ ಎಸ್.ವೆಂಕಟರಾಮಪ್ಪ, ಜಿ.ವೆಂಕಟೇಶಪ್ಪ, ವೆಂಕಟೇಶಪ್ಪ, ಸಿ.ಎ ಅಂಬರೀಶ್, ಆರ್.ಗೋಪಾಲಕೃಷ್ಣ, ಲಕ್ಷಮ್ಮ, ಲಕ್ಷ್ಮೀದೇವಮ್ಮ, ಸಂಪತ್, ಸಿ ಅಶ್ವಥ್, ಆಯ್ಕೆಯಾದರು

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗ್ರಾಪಂ ಸದಸ್ಯ ಸಿ.ವಿ ಹನುಮೇಗೌಡ, ಮಾಜಿ ಸದಸ್ಯರಾದ ಮುನಿರಾಯಣಸ್ವಾಮಿ, ಆರ್.ನಾರಾಯಣಸ್ವಾಮಿ, ವೈ ನಾರಾಯಣಸ್ವಾಮಿ, ಮಂಜುನಾಥ್, ಕಾರ್ಯದರ್ಶಿ ರಮೇಶ್ ಸೇರಿದಂತೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು,