
ಚನ್ನಮ್ಮನ ಕಿತ್ತೂರು,ಮಾ.೩೦: ಸಹಕಾರಿ ಸಂಘಗಳು ಗಟ್ಟಿಯಾದರೆ ಮಾತ್ರ ರೈತರು ಬೆಳೆಯಲು ಸಾಧ್ಯವೆಂದು ಅರಭಾಂವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ವಿವಿಧ ಸಹಕಾರಿ ಸಂಘಗಳ ವತಿಯಿಂದ ಪಟ್ಟಣದ ರಾಣಿಚನ್ನಮ್ಮ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಕಾರ್ಯಕ್ರಮದ ದೀಪ ಬೆಳಗಿಸಿ ಮಾತನಾಡಿದರು. ಸಂಸ್ಥೆ ಉಳಿಯಬೇಕಾದರೆ ಜಾತಿ, ಪಕ್ಷ, ಭೇಧ ಮರೆತು ಸರಿಯಾಗಿ ಸಂಘ-ಸAಸ್ಥೆ ನಡೆಸಿದಾಗ ಬೆಳೆಯಲು ಮತ್ತು ಲಾಭಾಂಶ ಕಾಣಲು ಸಾಧ್ಯ. ರೈತರು ಹೆಚ್ಚಿಗೆ ಹೈನುಗಾರಿಕೆ ಮಾಡಿ ಕೆಎಂಎಫ್ ಸಂಘ ಬೆಳೆಸಿ, ರೈತರು ತಮ್ಮ ಮನೆಯಲ್ಲಿ ಹಸು ಸಾಕಿ ಇದರ ಜೊತೆಯಲ್ಲಿ ನಿಮ್ಮ ಉತ್ಪನ್ನ ಹೆಚ್ಚಿಸಿಕೊಳ್ಳಿ. ಈ ಭಾಗದ ಶಾಸಕರು ಕ್ಷೇತ್ರಕ್ಕೆ ನೀರಾವರಿ ಯೋಜನೆ ತರುತ್ತಿದ್ದಾರೆ ಅವರಿಗೆ ನಿಮ್ಮ ಸಹಕಾರ ಸದಾ ಇರಲಿ. ಅದಲ್ಲದೇ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಡಿಸಿಸಿ ಬ್ಯಾಂಕಿನಿAದ ರೂ. ೫೦ ಕೋಟಿ ಸಾಲ ನೀಡುತ್ತೇವೆ. ರೈತರ ಎಳಿಗೆಗಾಗಿ ನಾವು ಸದಾ ಬದ್ಧರಿದ್ದೇವೆಂದರು.
ಮಾಜಿ ಸಂಸದ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಉದ್ಘಾಟಿಸಿ ಮಾತನಾಡಿ ಡಿಸಿಸಿ ಬ್ಯಾಂಕಿನಿAದ ಎಲ್ಲ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅದರ ಚುಕ್ಕಾಣಿ ಹಿಡಿದಿದ್ದೇನೆ. ರಾಜ್ಯದಲ್ಲಿ ೦% ದಲ್ಲಿ ಸಾಲವಿತರಿಸುವ ಬ್ಯಾಂಕ ಎಂದರೆ ಅದು ಡಿಸಿಸಿ ಬ್ಯಾಂಕ ಮಾತ್ರ. ಯಾರು ಎಷ್ಟೇ ವಿರೋಧ ಮಾಡಿದರೂ ದಿನದಲ್ಲಿ ೨೫ ರಿಂದ ೩೦ ಕೋಟಿ ಠೇವಣಿ ಬರುತ್ತಿದೆ. ಬರುವ ದಿನಗಳಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಮೊದಲನೆ ಸ್ಥಾನ ಗಳಿಸುವ ಪ್ರಯತ್ನದಲ್ಲಿದ್ದೇವೆಂದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಒಕ್ಕುಲತನ ನಂಬಿ ಕುಳಿತುಕೊಳ್ಳಬಾರದು ರೈತರು ಇದರ ಜೊತೆಗೆ ಹೈನುಗಾರಿಕೆ ಮಾಡಬೇಕು ಅಂದಾಗ ಮಾತ್ರ ರೈತರು ಏಳಿಗೆಯಾಗಲು ಸಾಧ್ಯ. ಇಂದಿನ ಕಾಲದಲ್ಲಿ ನಮ್ಮ ಉತ್ಪನ್ನ ಹೆಚ್ಚಾಗುವ ಕಸುಬು ಹೂಡಿಕೊಂಡು ಮುಂದೆ ಬರಬೇಕೆಂದು ಸಲಹೆ ನೀಡಿದರು.
ಮಾಜಿ ತಾಪಂ ಅಧ್ಯಕ್ಷ ಹಾಗೂ ಕೆಎಂಎಫ್ ನಿರ್ದೇಶಕ ಬಸವರಾಜ ಪರವಣ್ಣವರ ಮಾತನಾಡಿ ರೈತರು ಸಂಘ-ಸAಸ್ಥೆಗಳಲ್ಲಿ ಸಾಲ ತೆಗೆದುಕೊಂಡು ಮರುಪಾವತಿಸಬೇಕು. ಅಂದಾಗ ಮಾತ್ರ ಸಂಘ ಬೆಳೆಯಲು ಸಾಧ್ಯ. ಅದರ ಜೊತೆಯಲ್ಲಿ ಸಾಲ ವಸೂಲಾತಿಯು ಆಗಬೇಕು. ಮುಂಬರುವ ದಿನಗಳಲ್ಲಿ ಕೆಎಂಎಫ್ದಿAದ ಹಸು ಸಾಕಲು ಸಾಲನೀಡುವ ವಿಚಾರವಿದೆ ಅದರ ಲಾಭ ರೈತರು ಪಡೆದುಕೊಳ್ಳಬೇಕು. ಶಾಸಕ ಬಾಲಚಂದ್ರ ಜಾರಕಿಹೊಳಿ, ಶಾಸಕ ಬಾಬಾಸಾಹೇಬ ಪಾಟೀಲ, ವಿಪ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಜಿಪಂ ಸದಸ್ಯ ಬಿಸಿ ಪಾಟೀಲ ಮಾತನಾಡಿದgರು. ಪಪಂ ಅಧ್ಯಕ್ಷ ಜೈಸಿದ್ರಾಮ ಮಾರಿಹಾಳ, ಸೊ.ಸ.ಸ.ಕಾ. ಅಧ್ಯಕ್ಷ ರಮೇಶ ಬಾಳೆಕುಂದ್ರಿಗಿ, ಜಗದೀಶ ಗಟನಟ್ಟಿ, ಸಂಗಮೇಶ ಪರವಿನಾಯ್ಕರ, ಹನೀಪ್ ಸುತಗಟ್ಟಿ, ಬಾಬು ಕಟ್ಟಿ, ಶಂಕರ ಹೊಳಿ, ಮ.ಸ.ಸ.ಕಾ. ಉಪಾಧ್ಯಕ್ಷ ಬಸನಗೌಡ ಪಾಟೀಲ, ಕೆಎಂಎಫ್ ಎಂಡಿ ಶ್ರೀಕಾಂತ, ಎನ್.ಜಿ.ಕಲಾವಂತ, ರಾಮನಗೌಡ ಪಾಟೀಲ, ಅಶಪಾಕ ಹವಾಲ್ದಾರ, ಕೃಷ್ಣಾ ಬಾಳೇಕುಂದ್ರಗಿ, ಸುನೀಲ್ ಉಪಸ್ಥಿತರಿದ್ದರು.




















