Home ಜಿಲ್ಲೆ ಕೌಳೂರಿನಲ್ಲಿ ಖರ್ಜೂರ ಗರಿಗಳ ಭಾನುವಾರ ಭಕ್ತಿಪೂರ್ಣ ಆರಾಧನೆ : ಪಾಸ್ಟರ್ ಎಚ್ ಸುಭಾಷ್ ಸಂದೇಶ

ಕೌಳೂರಿನಲ್ಲಿ ಖರ್ಜೂರ ಗರಿಗಳ ಭಾನುವಾರ ಭಕ್ತಿಪೂರ್ಣ ಆರಾಧನೆ : ಪಾಸ್ಟರ್ ಎಚ್ ಸುಭಾಷ್ ಸಂದೇಶ

ಯಾದಗಿರಿ: ಮಾ.29:ತಾಲೂಕಿನ ಕೌಳೂರು ಗ್ರಾಮದಲ್ಲಿ ಖರ್ಜೂರ ಗರಿಗಳ ಭಾನುವಾರ ಅಂಗವಾಗಿ ಭಕ್ತಿಭರಿತ ಹಾಗೂ ಆಧ್ಯಾತ್ಮಿಕ ವಾತಾವರಣದಲ್ಲಿ ವಿಶೇಷ ಆರಾಧನೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.

ಈ ಸಂದರ್ಭದಲ್ಲಿ ಪಾಸ್ಟರ್ ಎಚ್ ಸುಭಾಷ್ ಅವರು ಲುಕನು ಬರೆದ ಸುವಾರ್ತೆ 19:28 ಆಧಾರವಾಗಿ ವಾಕ್ಯ ಹಂಚಿಕೊಂಡು, ಯೇಸು ಕ್ರಿಸ್ತನ ವಿನಮ್ರತೆ, ತ್ಯಾಗ ಹಾಗೂ ಪ್ರೀತಿಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಭಕ್ತರಿಗೆ ಉಪದೇಶಿಸಿದರು.

ಆರಾಧನೆ ಕಾರ್ಯಕ್ರಮದಲ್ಲಿ ಬೈಬಲ್ ವಾಚನವನ್ನು ಸಭೆಯ ಯೌವನಸ್ಥ ಮಾರ್ಕ್ ಮಸ್ಕಿ ಅವರು ನೆರವೇರಿಸಿದರು.

ಸಂದರ್ಭದಲ್ಲಿ ಸುಲೇಶನಮ್ಮ, ಭಾಸ್ಕರ್ ನಿಂಗಪ್ಪ, ದುರ್ಗಪ್ಪ ಮಸ್ಕಿ, ಮೋಸೆಸ್ , ವಸಂತಮ್ಮ (ಶಿವನೂರು), ಸೋನಮ್ಮ ಮಸ್ಕಿ ಹಾಗೂ ತಬಿತಮ್ಮ ತಾಯಪ್ಪ. ಸೇರಿದಂತೆ ಅನೇಕ ಭಕ್ತರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.

ವಿಶೇಷವಾಗಿ, ಭಕ್ತರು ದೇವಾಲಯದ ಸುತ್ತ ಐದು ಸುತ್ತುಗಳನ್ನು ತಿರುಗಿ, “ಹೊಸನ್ನ” ಗೀತೆಗಳನ್ನು ಗಾಯನ ಆಡುತ್ತಾ ದೇವರನ್ನು ಸ್ತುತಿಸಿ ಮೈಮರೆತರು. ಈ ಭಕ್ತಿಪೂರ್ಣ ಸಂಭ್ರಮವು ಯೇಸು ಕ್ರಿಸ್ತನ ವಿಜಯೋತ್ಸವ ಪ್ರವೇಶದ ಸ್ಮರಣೆಯನ್ನು ಜೀವಂತಗೊಳಿಸಿತು.

ಕಾರ್ಯಕ್ರಮವು ಆಧ್ಯಾತ್ಮಿಕ ಭಾವನೆಗಳನ್ನು ಮತ್ತಷ್ಟು ಗಾಢಗೊಳಿಸಿ, ಪವಿತ್ರ ವಾರದ ಆರಂಭಕ್ಕೆ ಶ್ರದ್ಧಾಭರಿತ ನಾಂದಿಯಾಯಿತು.