
ಜೇವರ್ಗಿ:ಮಾ.29: ಕೌಶಲ ಬೆಳಸಿಕೊಳ್ಳುವುದು ಯುವಕರಿಗೆ ಅಗತ್ಯವಾಗಿದ್ದು, ಇದನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು,
ಸದೃಢ ಯುವಕರು ಹೆಚ್ಚಾಗಿರುವ ದೇಶ ಭಾರತ, ಯುವಶಕ್ತಿ ದೇಶದ ಆಸ್ತಿ, ಯುವಕರು ದೇಶದ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸುತ್ತಾರೆ ಎಂದು ಆಳಂದ ತೋಂಟದಾರ್ಯ ಅನುಭವ ಮಂಟಪದ ಪರಮ ಪೂಜ್ಯ ಕೊರಣೇಶ್ವರ ಮಹಾಸ್ವಾಮಿಗಳು ಹೇಳಿದರು. ಅವರು ಜೇವರ್ಗಿ ನಗರದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಷಣ್ಮುಖ ಶಿವಯೋಗಿ ರೂರಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎನ್ ಎಸ್ ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಯುವಕರಿಗಾಗಿ ನನ್ನ ಭಾರತ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು
ಸಂಸ್ಕಾರಯುತ ಮೌಲ್ಯಾಧಾರಿತ ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಅಕ್ಷರ ಜ್ಞಾನದೊಂದಿಗೆ ನೈತಿಕತೆ, ಶಿಸ್ತು, ಸಂಸ್ಕøತಿ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಮಗ್ರ ಕಲಿಕಾ ವಿಧಾನವಾಗಿದೆ. ಇದು ಕೇವಲ ಅಂಕಪಟ್ಟಿ ಗಳಿಕೆಯಲ್ಲದೆ, ಸಮಾಜಮುಖಿ, ಜವಾಬ್ದಾರಿಯುತ ಮತ್ತು ಹೃದಯವಂತ ನಾಗರಿಕರನ್ನು ರೂಪಿಸಲು ನೆರವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೌದ್ಧಿಕ ಬೆಳವಣಿಗೆಯ ಜೊತೆಗೆ, ವ್ಯಕ್ತಿತ್ವ ವಿಕಸನಕ್ಕೆ ಈ ಶಿಕ್ಷಣ ಅನಿವಾರ್ಯವಾಗಿದೆ.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎನ್‍ಎಸ್‍ಎಸ್ ಪಾತ್ರ ಪ್ರಮುಖವಾಗಿದೆ. ಸಮಾಜದ ಪರಿವರ್ತನೆಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಪಣ ತೊಡಬೇಕು ಎಂದರು. ಸೇವೆ ಮತ್ತು ತ್ಯಾಗದ ಮಹತ್ವವನ್ನು ಜನಸಮುದಾಯ ಹಾಗೂ ಇಂದಿನ ಯುವ ಜನರಲ್ಲಿ ಬಿತ್ತುವಂತಹ ಕಾರ್ಯವನ್ನು ಎನ್.ಎಸ್.ಎಸ್. ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಮಾಡಬೇಕಿದೆ. ಸರಳ ಜೀವನ, ಪ್ರಿ?ತಿ, ಸಹನೆ, ಶ್ರಮದಾನ, ಸಹಕಾರ ಮನೋಭಾವ, ಕಷ್ಟಕರ ಜೀವನ, ಸಮಯಪ್ರಜ್ಞೆ, ಸಹೋದರತ್ವ ಮುಂತಾದ ಮೌಲ್ಯಗಳನ್ನು ಎನ್‍ಎಸ್‍ಎಸ್ ಯೋಜನೆಯಿಂದ ಯುವಕರು ಕಲಿತುಕೊಳ್ಳಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ವಿಶ್ವಾಸ್ ಶಿಂಧೆ, ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಎಸ್ ಬಿ ಮಮದಾಪೂರ, ಎನ್ ಎಸ್ ಎಸ್ ಘಟಕದ ಮುಖ್ಯಸ್ಥರಾದ ಮಲ್ಲಾರೆಡ್ಡಿ, ವಿಶ್ವನಾಥ್, ಸೇರಿ ಮುಂತಾದವರು ಹಾಜರಿದ್ದರು.




















