
ಕೊಲ್ಹಾರ:ಮಾ.28: ದ ಯುನೈಟೆಡ್ ರಾಷ್ಟ್ರ ಸೇವಾ ಫೌಂಡೇಶನ್ ಕರ್ನಾಟಕ ಹಾಗೂ ಶ್ರೀ ಕ್ಷೇತ್ರ ಧರ್ಮದ್ವಜ ಪ್ರತಿಷ್ಠಾನ ಬೆಂಗಳೂರ ಇವರು ಕೊಡಮಾಡುವ 2025-26 ನೇ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಆವಾರ್ಡ “ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯು ಪಟ್ಟಣದ ಶೀಲವಂತ ಹಿರೇಮಠದ ಧರ್ಮರತ್ನ ಭಾರತ ಭೂಷಣ ಪ ಪೂ ಡಾ.ಕೈಲಾಸನಾಥ ಮಹಾಸ್ವಾಮಿಗಳಿಗೆ ಲಭಿಸಿದೆ.ಪ್ರಶಸ್ತಿಯು 25 ಸಾವಿರ ರೂಪಾಯಿಯ ನಗದು ಸಹಿತ ಪುರಸ್ಕಾರ ಒಳಗೊಂಡಿದೆ. ಶ್ರೀಗಳು ನಾಡಿನಾದ್ಯಂತ ಧರ್ಮ ಪ್ರಚಾರ ಕಾರ್ಯ ನಿರ್ವಹಿಸುತ್ತ ಆಧ್ಯಾತ್ಮಿಕತೆಯ ಭೋಧನೆ ನೀಡುವ ಮೂಲಕ ಸರ್ವ ಧರ್ಮದ ಸಿದ್ಧಾಂತ ಮೈಗೂಡಿಸಿಕೊಂಡು ಸನಾತನ ಧರ್ಮ ಪರಂಪರೆಯ ಸಂದೇಶ ಸಾರುವ ಮೂಲಕ ತಮ್ಮದೆಯಾದ ಘಣತೆಯೊಂದಿಗೆ ಕೊಲ್ಹಾರ ಪಟ್ಟಣದ ಕೀರ್ತಿಯನ್ನು ಹೆಚ್ಚಿಸುವ ಶ್ರೀಗಳಿಗೆ ಈಗಾಗಲೆ ಬಸವಜ್ಞಾನ ಪ್ರವಚಣ ಭಾಸ್ಕರ,ಹಾನಗಲ್ಲ ಗುರು ಕುಮಾರೇಶ್ವರ ರಾಷ್ಟ್ರೀಯ ಪ್ರಶಸ್ತಿ,ಸ್ವಾತಂತ್ರ್ಯ ಹೋರಾಟಗಾರ ವೀರಸೇನಾನಿ ವೀರಸಾವರ್ಕರ್ ಸಮ್ಮಾನ ಪ್ರಶಸ್ತಿ,ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಡಾ ಎ ಪಿ ಜೆ ಅಬ್ದುಲ್ ಕಲಾಂ ಎಕ್ಸಲೇನ್ಸ ರಾಷ್ಟ್ರೀಯ ಆವಾರ್ಡ,ಇಂಡಿಯನ್ ಆಯ್ಕಾನ ಆವಾರ್ಡ ಪ್ರದಾನವಾಗಿದೆ,ಇತ್ತೀಚೆಗಿನ ದಿನಗಳಲ್ಲಿ ದೇಹಲಿಯ ರಾಷ್ಟ್ರೀಯ ಸಂತರ ಚಿಂತನ ಮಂಥನ ನಡೆದಾಗ ಜಗಜ್ಯೋತಿಬಸವೇಶ್ವರ ಸಂಪೂರ್ಣ ಬಸವ ಪುರಾಣ 48 ನಿಮೀಷದಲ್ಲಿ ಪಾರಾಯನ ಮಾಡಿ ವಿಶ್ವ ಧಾಖಲೆಯಾಗಿ ರಿಯಾಲಿಟಿ ಬುಕ್ ಆಫ್ ವರ್ಡ ರೆಕಾರ್ಡ್ ಗಿನ್ನಿಸ್ ದಾಖಲೆ ಸೇರ್ಪಡೆಯಾದದ್ದು ಬಸವ ನಾಡಿನ ಹೆಮ್ಮೆ ಕೊಲ್ಹಾರ ಪಟ್ಟಣದ ಕೀರ್ತಿಯನ್ನು ತಂದ ಪೂಜ್ಯರಿಗೆ ಪ್ರತಿಷ್ಠಿತ “ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ”ಯು ಲಭಿಸಿದ್ದು ಶ್ರೀಗಳ ಸಾಧನೆಗೆ ದೊರೆತ ಗೌರವ ಎಂದು ಪಟ್ಟಣದ ಗುರು ಹಿರಿಯರು ಶಿಷ್ಯ ಬಳಗ ಹರ್ಷ ವ್ಯಕ್ತಪಡಿಸಿದರು






















