
ಯಾದಗಿರಿ:ಮಾ.೨೮: ಜಿಲ್ಲೆಯ ವಡಗೇರಾ ತಾಲ್ಲೂಕಿನ ಹಾಲಿಗೇರಾ ಗ್ರಾಮದಲ್ಲಿ ನಕಲಿ ವೈದ್ಯರ ಹಾವಳಿ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸಾರ್ವಜನಿಕರ ಜೀವ ಭದ್ರತೆ iಣseಟಜಿ ಅಪಾಯದಲ್ಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಆರೋಗ್ಯ ಜಾಗೃತಿ ಕೊರತೆಯನ್ನು ದುರುಪಯೋಗಪಡಿಸಿಕೊಂಡ ಕೆಲವರು ಯಾವುದೇ ಮಾನ್ಯ ಅರ್ಹತೆ ಇಲ್ಲದೆ ವೈದ್ಯರಂತೆ ನಟಿಸಿ ಚಿಕಿತ್ಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಗ್ರಾಮಸ್ಥರ ದೂರಿನ ಪ್ರಕಾರ, ಅಮೀನ್ ಸಾಬ್ ಮೌಲನ್ ಎಂಬ ವ್ಯಕ್ತಿ ಯಾವುದೇ ಅಧಿಕೃತ ವೈದ್ಯಕೀಯ ಪದವಿ ಅಥವಾ ಅನುಮತಿ ಇಲ್ಲದೆ ಕ್ಲಿನಿಕ್ ನಡೆಸುತ್ತಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಬಹಿರಂಗವಾಗಿದೆ. ಅವರ ಕ್ಲಿನಿಕ್‌ನಲ್ಲಿ ಕಡ್ಡಾಯವಾಗಿ ಇರಬೇಕಾದ ಕ್ಲಿನಿಕ್ ಲೈಸೆನ್ಸ್, ಟ್ರೇಡ್ ಲೈಸೆನ್ಸ್, ರಾಜ್ಯ ವೈದ್ಯಕೀಯ ಮಂಡಳಿ ನೋಂದಣಿ, ರಿಜಿಸ್ಟ್ರೇಷನ್ ಸಂಖ್ಯೆ, ಹಾಗು ವೈದ್ಯರ ಹೆಸರು ಮತ್ತು ಪದವಿ ಹೊಂದಿರುವ ಪ್ರಿಸ್ಕ್ರಿಪ್ಷನ್ ಪ್ಯಾಡ್ ಸೇರಿದಂತೆ ಯಾವುದೇ ದಾಖಲೆಗಳಿಲ್ಲ ಎಂಬುದು ಆರೋಪವಾಗಿದೆ.
ಇದರೊಂದಿಗೆ, ಕ್ಲಿನಿಕಲ್ ಎಸ್ಟಾಬ್ಲಿಶ್ಮೆಂಟ್ ಕಾಯ್ದೆಯಡಿ ನೋಂದಣಿ ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದರೂ, ತಾವು ವೈದ್ಯರೆಂದು ಹೇಳಿಕೊಂಡು ನಿರಪರಾಧ ಜನರನ್ನು ಮೋಸಗೊಳಿಸುತ್ತಿದ್ದು, ಚಿಕಿತ್ಸೆ ಹೆಸರಿನಲ್ಲಿ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.
“ಅಸಲಿ ವೈದ್ಯನೆಂಬ ನಂಬಿಕೆಯಿAದ ನಾವು ಚಿಕಿತ್ಸೆ ಪಡೆಯಲು ಹೋಗುತ್ತೇವೆ. ನಂತರ ಅದು ನಕಲಿ ಎಂದು ತಿಳಿದು ಆಘಾತವಾಗುತ್ತಿದೆ. ನಮ್ಮ ಜೀವದೊಂದಿಗೆ ಆಟವಾಡಲಾಗುತ್ತಿದೆ,” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಜಿಲ್ಲಾಡಳಿತದಿಂದ ನಕಲಿ ವೈದ್ಯರ ವಿರುದ್ಧ ಕೆಲವೊಂದು ಕ್ರಮಗಳು ಕೈಗೊಳ್ಳಲಾಗಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ದೊರಕದಿರುವುದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ.
ಹೀಗಾಗಿ, ಸಂಬAಧಿತ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಗ್ರಾಮಸ್ಥರಿಗೆ ಸುರಕ್ಷಿತ, ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಶಾಶ್ವತ ಕ್ರಮಗಳನ್ನು ಜಾರಿಗೆ ತರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




















