Home ಜಿಲ್ಲೆ ಕಲಬುರಗಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಜಂಗಮ ಸಮಾಜದವರ ನೆರವಿಗೆ ಬನ್ನಿ: ರಾಜ್ಯ ಸರ್ಕಾರದ ಗಮನ ಸೆಳೆದ ಶಾಸಕ...

ಅಭಿವೃದ್ಧಿ ನಿಗಮ ಸ್ಥಾಪಿಸಿ ಜಂಗಮ ಸಮಾಜದವರ ನೆರವಿಗೆ ಬನ್ನಿ: ರಾಜ್ಯ ಸರ್ಕಾರದ ಗಮನ ಸೆಳೆದ ಶಾಸಕ ಅಲ್ಲಂಪ್ರಭು ಪಾಟೀಲ್

ಕಲಬುರಗಿ:ಮಾ.26:ಆರ್ಥಿಕವಾಗಿ ತುಂಬ ಕೆಳ ಹಂತದಲ್ಲಿರುವ ಜಗಂಮ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಆದಷ್ಟು ಬೇಗ ಜಂಗಮ ಅಭಿವೃದ್ಧಿ ನಿಗಮ ಸ್ಥಾಪಿಸಿ ಹಣ ನೀಡಬೇಕು ಎಂದು ಕಲುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ಸದನದಲ್ಲಿ ಮಾತನಾಡಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಶಾಸಕರು, ಹಿದೆಲ್ಲಾ ಗ್ರಾಮಗಳಲ್ಲಿ ಜಂಗಮ ಸಮಾಜದವರು ನಿತ್ಯ ಬೆಳಗಿನ ಜಾವ ಎದ್ದು ಕೈಯಲ್ಲಿ ಕಂದೀಲಿ, ಚಿಮಣಿ ಹಿಡಿದು, ಜೋಳಿಗೆ ಹೆಗಿಗೆ ಹಾಕಿ ಮನೆ ಮನೆ ಕದ ತಟ್ಟುತ್ತ ಎಲ್ಲರನ್ನು ಎಬ್ಬಿಸಿ ಕಾಯಕಕ್ಕೆ ಹಚ್ಚುತ್ತಿದ್ದರು.

ರೈತರಿಗಂತೂ ಈ ಜಂಗಮ ಸಮಾಜದವರೆಂದರೆ ಪಂಚಪ್ರಾಣವಾಗಿದ್ದರು. ಈಗ ಬದಲಾದ ಕಾಲಘಟ್ಟದಲ್ಲಿ ಇಂತಹ ಯಾವ ಆಚರಣೆಗಳು ಇಲ್ಲ. ಹೀಗಾಗಿ ಜಂಗಮ ಸಮಾಜ ಇಂದು ಕಡು ಕಷ್ಟದಲ್ಲಿದೆ. ಈ ಸಮಾಜದವರು ಅಭಿವೃದ್ಧಿ ನಿಗಮದ ಬೇಡಿಕೆಯೊಂದಿಗೆ ಗಮನ ಸೆಳೆಯುತ್ತಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅಲ್ಲಂಪ್ರಭು ಪಾಟೀಲ್ ಆಗ್ರಹಿಸಿದ್ದಾರೆ.

ಕಲಬುರಗಿ ಭಾಗದಲ್ಲಿ ಜಂಗಮ ಸಮಾಜದವರು ತುಂಬಾ ಸಂಖ್ಯೆಯಲ್ಲಿದ್ದಾರೆ. ಈ ಸಮಾಜದ ಏಳಿಗೆಗೆ ಸರ್ಕಾರವೇ ಯೋಜನೆ ರೂಪಿಸಬೇಕು, ಮನಿಗಮ ಮಂಡಳಿ ರಚಿಸಿ ಅವರ ಕೈ ಹಿಡಿಯಬೇಕೆಂದೂ ಶಾಸಕರು ಆಗ್ರಹಿಸಿದರು.

ಕಲಬುರಗಿಯನ್ನು ಸ್ಮಾರ್ಟ್ ಸಿಟಿ ಮಟ್ಟಕ್ಕೆ ಅಭಿವೃದ್ಧಿ ಪಡಿಸುವ ಸಂಕಲ್ಪ ಸಚಿವ ಸಂಪುಟ ಸಭೆಯಲ್ಲಾಗಿತ್ತು. ಅದರಂತೆ ನಗರದ ರಸ್ತೆ ಸೇರಿದಂತೆ ಮೂಲ ಸೌಕರ್ಯಕ್ಕೆ ಹಣ ನೀಡಬೇಕು. 700 ಕಿಮೀ ಉದ್ದದ ಚರಂಡಿಗೂ ಹಣ ಬಿಡುಗಡೆಯಾಗಬೇಕು , ನಗರದಲ್ಲಿ ನಾಲ್ಕೂ ದಿಕ್ಕಿನಲ್ಲಿ ಉಪ ನಗರ ಬಸ್ ???ಲ್ದಾಣಕ್ಕಾಗಿ ಬೇಗ ಯೋಜನೆ ರೂಪಿಸಿ ಹಣ ನೀಡಬೇಕು ಎಂದೂ ಶಾಸಕರು ಆಗ್ರಹಿಸಿದರು.

ಕಲಬುರಗಿ ನಗರದ ರಾಮ ಮಂದಿರ ರಸ್ತೆಯಲ್ಲಿ ಬರುವ ಕೋಟನೂರ್ ಬಳಿಯ ಜಿಡಗಾ ಮಠದ ಪ್ರದೇಶದಲ್ಲಿ ಹೊಸ ಪೆÇಲೀಸ್ ಠಾಣೆ ಆರಂಭಿಸಬೇಕು ಎಂಬ ಬೇಡಿಕೆ ಇದೆ. ಈಗಾಗಲೇ ಈ ಬಗ್ಗೆ ಗೃಹ ಸಚಿವರ ಗಮನ ಸೆಳೆದಿದ್ದು ಅವರು ಮಂಜೂರು ಮಾಡೋದಾಗಿ ಹೇಳಿದ್ದಾರೆ. 40 ಸಾವಿರ ಜನಸಂಖ್ಯೆ ಇಲ್ಲಿದ್ದರೂ ಠಾಣೆ ತುಂಬ ದೂರ. ಹೀಗಾಗಿ ಈ ಪ್ರದೇಶಕ್ಕೆ ಹೊಸ ಠಾಣೆ ಅಗತ್ಯವಿದೆ ಎಂದು ಶಾಸಕ ಅಲ್ಲಂಪ್ರಭು ವಿಷಯ ಪ್ರತಿಪಾಸಿದಿರು.


ಅಲ್ಲಂಪ್ರಭು ಪಾಟೀಲರು ಅಭಿನಂದನೆಗೆ ಅರ್ಹರು- ರೇವಣಸಿದ್ದ ಶಿವಾಚಾರ್ಯರು

ಸದನದಲ್ಲಿ ಜಂಗಮ ಸಮಾಜದ ಸಂಕಷ್ಟಗಳನ್ನು ಹೇಳುತ್ತ ಅಭಿವೃದಧಿ ನಿಗಮ ಸ್ಥಾಪನೆಗೆ ಆಗ್ರಹಿಸುವ ಮೂಲಕ ಸರ್ಕಾರದ ಗಮನ ಸೆಳೆದಿರುವ ಶಾಸಕರಾದ ಅಲ್ಲಂಪ್ರಭು ಪಾಟೀಲರನ್ನು ಸರಡಗಿ ಚಿಕ್ಕವಿಕೇಶ್ವರ ಮಠದ ರೇವಣಸಿದ್ದ ಶಿವಾಚಾರ್ಯರು ಅಭಿನಂದಿಸಿದ್ದಾರೆ.

ಜಂಗಮ ಸಮಾಜ ಇಂದು ಕಡು ಕಷ್ಟದಲ್ಲಿದೆ. ಪಾರಂಪರಿಕ ಕಾಯಕವಿಲ್ಲ. ಬದಲಾದ ಜಗದಲ್ಲಿ ಈ ಸಮಾಜ ಬದುಕಬೇಕು, ಸರ್ಕಾರದಿದ ಅಭಿವೃದ್ಧಿ ಮಂಡಳಿ ರಿಸಿ ಹಣ ನಡಬೇಕು ಎಂದು ಸಮಾಜದ ಪರವಾಗಿ ಶಾಸಕರಿಗೆ ಮನವಿ ಮಾಡಿದ್ದೇವು. ಅದರ ಹಿನ್ನೆಲೆಯಲ್ಲಿ ಸನದಲ್ಲಿ ಶಾಸಕರು ನಮ್ಮ ನೋವು ಪ್ರಸ್ತಾಪಿಸಿ ಅಭಿವೃದ್ಧಿ ಮಂಡಳಿಗೆ ಗಮನ ಸೆಳೆದಿದ್ದಾರೆ. ಜಂಗಮ ಸಮಾಜದ ಪರವಾಗಿ ಹಾಗೂ ವೈಯಕ್ತಿಕವಾಗಿ ಶಾಸಕರಿಗೆ ತಾವು ಅಭಿನಂದಿಸೋದಾಗಿ ರೇವಣಸಿದ್ದ ಶಿವಾಚಾರ್ಯರು ಹೇಳಿದ್ದಾರೆ.