Home ಜಿಲ್ಲೆ ಯುವಕರು ಸಾಧಕರಾಗಲು ಪ್ರಯತ್ನಿಸಲಿ

ಯುವಕರು ಸಾಧಕರಾಗಲು ಪ್ರಯತ್ನಿಸಲಿ

ಬೀದರ್À:ಮಾ.೨೫: ಯುವಜನರು ಸಾಧಕರಾಗಲು ಪ್ರಯತ್ನಿಸಬೇಕು. ಈ ಮೂಲಕ ದೇಶಕ್ಕೆ ಕೀರ್ತಿ ತರಬೇಕು ಎಂದು ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಚಿನ್ ಮಲ್ಕಾಪುರೆ ಹೇಳಿದರು.
ನಗರದ ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಮಹಾನ್ ನಾಯಕರ ಜೀವನ ಚರಿತ್ರೆ ಓದಬೇಕು. ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಆಧುನಿಕ ತಂತ್ರಜ್ಞಾನಗಳ ಸಮರ್ಥ ಬಳಕೆಯಿಂದ ದೇಶದ ಪ್ರಗತಿ ಸಾಧ್ಯವಿದೆ ಎಂದರು.
ಡಾ. ರಾಜಕುಮಾರ ಅಲ್ಲೂರೆ ಮಾತನಾಡಿ, ಶಿಬಿರಾರ್ಥಿಗಳು ಗ್ರಾಮೀಣ ಜನರಲ್ಲಿ ಸೇವಾ ಮನೋಭಾವ ಬೆಳೆಸಬೇಕು. ಗ್ರಾಮೀಣ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಶಿಕ್ಷಣದ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಡಾ. ಪಲ್ಲೆದ್ ಮಹೇಶ್ವರಿ ಮಾತನಾಡಿ, ಶಿಬಿರಾರ್ಥಿಗಳು ಜನರ ಸೇವೆಯನ್ನೇ ದೇವರ ಸೇವೆಯೆಂದು ಭಾವಿಸಬೇಕು. ಹೊಸ ಯೋಜನೆಗಳ ಮೂಲಕ ಗ್ರಾಮಗಳ ಉದ್ಧಾರಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪ್ರೊ. ಶಂಕರ ಗಣಗೊಂಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದು, ಸುಶಿಕ್ಷಿತರಾಗಬೇಕು. ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಭಾಷಾ ಐಕ್ಯತೆ ಸಾಧಿಸಬೇಕು. ರಾಜಕೀಯ ವೈಷಮ್ಯ ತಡೆದು, ಒಳ್ಳೆಯ ಸಮಾಜ ನಿರ್ಮಿಸಬೇಕು ಎಂದು ತಿಳಿಸಿದರು.
ಶಿಬಿರದ ನಿರ್ದೇಶಕ ಡಾ. ಸುಚಿತಾನಂದ ಕೆ. ಮಲ್ಕಾಪುರೆ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಮಯಪ್ರಜ್ಞೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಡಾ. ಶಿವಕುಮಾರ, ಡಾ. ಶೀಲಾ, ಡಾ. ಅಶೋಕ ಕೋರೆ, ಡಾ. ನಗ್ಮಾ, ಡಾ. ಸಪ್ನಾ, ಡಾ. ಸುನೀಲಕುಮಾರ ಮೂಲಗೆ, ಡಾ. ಸಂತೋಷ್ ಹಂಗರಗಿ, ಅರುಣಕುಮಾರ, ಡಾ. ಈಶ್ವರಯ್ಯ ಕೂಡಂಬಲ್ ಮತ್ತಿತರರು ಇದ್ದರು.
ಶಿಬಿರದ ನಿರ್ದೇಶಕಿ ಡಾ. ಸುಮನ್‌ಬಾಯಿ ಸಿಂದೆ ನಿರೂಪಿಸಿದರು. ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಬಾಲಸುಬ್ರಹ್ಮಣ್ಯ ವಂದಿಸಿದರು.