
ಕಲಬುರಗಿ:ಮಾ.೨೪: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶ್ವ ಜ್ಯೋತಿ ಪ್ರತಿಷ್ಠಾನದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದಲ್ಲಿ, ಅಂಬಿಗರ ಯುವ ಸೈನ್ಯದ ಜಿಲ್ಲಾ ಜಯಂತೋತ್ಸವದ ಅಧ್ಯಕ್ಷರು ಹಾಗೂ ಅಂಬಿಗರ ಸೇವಾದಳದ ನಗರಾಧ್ಯಕ್ಷ ರಾಜು ಸೊನ್ನ ಅವರಿಗೆ “ಸೇವಾ ಶ್ರೀ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಸಾರ್ವಜನಿಕ ಹಿತದಾಯಕ ಕಾರ್ಯಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ರಾಜು ಸೊನ್ನ ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಪ್ರಶಸ್ತಿ ಸ್ವೀಕರಿಸಿದ ಈ ಕ್ಷಣವು ಅವರ ಅಭಿಮಾನಿಗಳು ಮತ್ತು ಬಂಧುಬಳಗದವರಿಗೆ ಸಂತಸದ ಕ್ಷಣವಾಗಿ ಪರಿಣಮಿಸಿತು.
ಈ ಸಂದರ್ಭದಲ್ಲಿ ಸಂಗಮನಾಥ ಕಣ್ಣಿ, ದೇವೇಂದ್ರಪ್ಪ ಯರಗೋಳ್, ಜಗನ್ನಾಥ ಭೀಮಳ್ಳಿಕರ್, ಅರ್ಜುನ ಜಮಾದಾರ, ಮಲ್ಲಿನಾಥ ಜೋಕೆ, ಧರ್ಮರಾಜ ಜವಳಿ, ರಾಜೇಂದ್ರ ಝಳಕಿ, ಸುಖದೇವ್ ಕೋಗನೂರು, ದಿಲೀಪ ಕಿರಸಾವಳಗಿ, ಶರಣು ಬಮನಳ್ಳಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸ್ನೇಹಿತರು, ಬಂಧುಬಳಗದವರು ರಾಜು ಸೊನ್ನ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.






















