
ಬೀದರ,ಮಾ.೨೪:ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೀದರ್ಇವರ ಮುಖಾಂತರಕರ್ನಾಟಕಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಬೀದರ್ಜಿಲ್ಲಾಘಟಕದಿಂದ ” ಕರ್ನಾಟಕಜಾಹೀರಾತು ನೀತಿ-೨೦೨೬” ರಲ್ಲಿ ಅಳವಡಿಸಿರುವ ಮಾರಕ ನಿಯಮಗಳನ್ನು ತೆಗೆದು ಹಾಕಬೇಕೆಂದುಕೋರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯಆಯುಕ್ತರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವಿಜಯಕುಮಾರ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಪಾಟೀಲ್, ಉಪಾಧ್ಯಕ್ಷರಾದ ಸೈಯದ್ಉಲ್ ಹಸನ್ಖಾದ್ರಿ, ಮಾಜಿಕೆಡಬ್ಲ್ಯೂಜಿಅಧ್ಯಕ್ಷರು ಹಾಗೂ ನಮ್ಮ ಸಂಘದ ರಾಜ್ಯ ಪ್ರತಿನಿಧಿಯಾಗಿರುವಅಶೋಕ್ಕುಮಾರ್ಕಾರಂಜಿ, ಮಾಜಿಕೆಡಬ್ಲ್ಯೂಜೆ ಅಧ್ಯಕ್ಷರುಗಳಾದ ಸಿದ್ದರಾಮಯ್ಯ ಸ್ವಾಮಿ, ಗಣಪತಿಡಿಕೆ, ಹೈದರಾಬಾದ್ಕರ್ನಾಟಕ ಸಂಪಾದಕರಾದಅಬ್ದುಲ್ ಅಲಿ, ಪಬ್ಲಿಕ್ಕಾನ್ಫರೆನ್ಸ್ ಸಂಪಾದಕರಾದಅಬ್ದುಲ್ಖದೀರ್, ಕರ್ನಾಟಕಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಬೀದರ್ಜಿಲ್ಲಾಘಟಕದರಾಜ್ಯ ಪ್ರತಿನಿಧಿ ಅಜಯ್ ಭೋಸ್ಲೆ, ಬೀದರ್ಜಾಗೃತಿ ಪತ್ರಿಕೆಯ ಸಂಪಾದಕರಾದ ಶ್ರೀನಿವಾಸ್ಚೌದರಿ, ಪೃಥ್ವಿರಹಸ್ಯ ಸಂಪಾದಕರಾದ ಪೃಥ್ವಿರಾಜ್, ಆಶೀರ್ವಾದ ವಾಣಿ ಪತ್ರಿಕೆಯ ಸಹ ಸಂಪಾದಕರಾದಜಯಕುಮಾರ ಉಪಸ್ಥಿತರಿದ್ದರು.
ಸಂಪಾದಕರುಗಳಾದ ಬುಡಾ ಮಾಜಿಅಧ್ಯಕ್ಷರು ಹಾಗೂ ಕೆಡಬ್ಲ್ಯೂಜೆ ಮಾಜಿಅಧ್ಯಕ್ಷರು, ಸಲಹೆಗಾರರಾದ ಬಾಬು ವಾಲಿ, ಹಿರಿಯ ಪತ್ರಿಕೆ ಬೀದರ್ಜಂಗ್ ಸಂಪಾದಕರಾದ ದೀಪಕ್ ವಾಲಿ, ಮಾಜಿಕೆಡಬ್ಲ್ಯೂಜೆಅಧ್ಯಕ್ಷರುಆಗಿರುವ ಮಲ್ಲಿಕಾರ್ಜುನ್ ಪರಿಹಾರ ಇವರುಗಳು ನಮ್ಮ ಸಂಘಕ್ಕೆ ಬಂದು ಬೆಂಬಲ ಸೂಚಿಸಿದ್ದಾರೆ.






















