
ಲಕ್ಷ್ಮೇಶ್ವರ,ಮಾ24: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಗರ್ಭಕಂಠ ಕ್ಯಾನ್ಸರ್ ನಿರೋಧಕ ಲಸಿಕಾ ಕಾರ್ಯಕ್ರಮಕ್ಕೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಕಾಂತ ಕಾಟೆವಾಲೆ ಚಾಲನೆ ನೀಡಿದರು.
ಆರೋಗ್ಯ ಕೇಂದ್ರದಲ್ಲಿ 14ರಿಂದ 15 ವರ್ಷದ ಒಳಗಿನ ಬಾಲಕಿಯರಿಗೆ ಉಚಿತವಾಗಿ ಎಚ್. ಪಿ. ವಿ. ಲಸಿಕೆಯನ್ನು ಹಾಕಲಾಗುತ್ತಿದೆ ದೇಶದ ಮಹಿಳೆಯರನ್ನು ಕಾಡುವ ಕ್ಯಾನ್ಸರ್ ಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಒಂದಾಗಿದೆ ಈ ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಹ್ಯೂಮನ್ ಪ್ಯಾಪಿಲೋಮ್ ವೈರಸ್ ಲಸಿಕಾ ಕಾರ್ಯಕ್ರಮವನ್ನು ಸರ್ಕಾರ ಉಚಿತವಾಗಿ ಹಮ್ಮಿಕೊಂಡಿದ್ದು ಕಡ್ಡಾಯವಾಗಿ 14 ರಿಂದ 15 ವರ್ಷದ ಬಾಲಕಿಯರಿಗೆ ಈ ಲಸಿಕೆಯನ್ನು ಹಾಕಿಸಲು ಮುಂದಾಗಬೇಕು ಎಂದು ಹೇಳಿದ್ದಾರೆ. ಸೋಮವಾರ ಒಂದೇ ದಿನ 45ಕ್ಕೂ ಹೆಚ್ಚು ಬಾಲ ಕೀಯರಿಗೆ ಈ ಲಸಿಕೆಯನ್ನು ಹಾಕಲಾಗಿದೆ.
ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಅತ್ಯಂತ ಆಸಕ್ತಿಯಿಂದ ಬಾಲಕಿಯರನ್ನು ಶಾಲೆಗಳಿಂದ ಕರೆತಂದು ಎಚ್ ಪಿ ವಿ ಲಸಿಕೆಯನ್ನು ಹಾಕಿಸಲು ಶಾಲೆಗಳಿಂದ ಆಸ್ಪತ್ರೆಗೆ ಕರೆತರುವಲ್ಲಿ ಮುಂದಾಗಿದ್ದಾರೆ.
ಪ್ರತಿನಿತ್ಯವೂ ಆಸ್ಪತ್ರೆಯಲ್ಲಿ ಎಚ್ ಪಿ ವಿ ಲಸಿಕೆಯನ್ನು ಹಾಕಲಾಗುತ್ತಿದ್ದು 14 ರಿಂದ 15 ವರ್ಷದ ಬಾಲಕಿಯರಿಗೆ ಅತ್ಯಂತ ಉಪಯುಕ್ತ ವಾಗಿದ್ದು ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಲಸಿಕೆಗೆ2500 ರೂಗಳಿಂದ 3000 ವರೆಗೆ ಹಾಕಲಾಗುತ್ತಿದೆ ಎಂದು ಸರ್ಕಾರ ಈ ಯೋಜನೆಯನ್ನು ಉಚಿತವಾಗಿ ಮಾಡುತ್ತಿದ್ದು ಇದರ ಲಾಭ ಪಡೆಯಬೇಕು ಎಂದು ಹೇಳಿದರು.
ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಯಕ್ಕೆ ಇದನ್ನು ಯುದ್ಧೋಪಾದಿಯಲ್ಲಿ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಆಸ್ಪತ್ರೆ ಸಿಬ್ಬಂದಿ ವರ್ಗದವರು ಇದ್ದರು..





















