
ಕಲಬುರಗಿ:ಮಾ.23: ಭಗತಸಿಂಗ್,ಸುಖದೇವ ಮತ್ತು ರಾಜಗುರು ಅವರು ಬ್ರಿಟೀಷರನ್ನು ಭಾರತದಿಂದ ಹೊಡೆದೋಡಿಸಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ನೀಡುವಲ್ಲಿ ಸಾಕಷ್ಟು ಪ್ರಯತ್ನಿಸಿದ್ದಾರೆ.ಅದಕ್ಕಾಗಿ ಬಾಲ್ಯದಲ್ಲಿಯೇ ನೇಣುಗಂಬ ಏರಿದ ಅವರು ಸ್ವಾತಂತ್ರ್ಯ ಹೋರಾಟದ ತ್ರಿರತ್ನಗಳಾಗಿದ್ದಾರೆ. ಅವರಲ್ಲಿರುವ ಅಪ್ಪಟ ದೇಶಭಕ್ತಿ ಇಂದಿನ ಯುವಕರಿಗೆ ಮಾದರಿಯಾಗಿದ್ದು, ಅವರ ಬಲಿದಾನ ಅಮರವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ‘ಜೆ.ಆರ್ ನಗರದ ಖಾದ್ರಿ ಚೌಕ್ ಹತ್ತಿರದ ‘ಸಕ್ಸಸ್ ಕಂಪಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ಭಗತಸಿಂಗ, ಸುಖದೇವ ಮತ್ತು ರಾಜಗುರು ಹುತಾತ್ಮ ದಿನಾಚರಣೆಯಲ್ಲಿ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಬ್ರಿಟಿಷರಿಗೆ ಸಿಂಹ ಸ್ವಪ್ನರಾಗಿ ಕಾಡಿದ್ದ ಭಗತಸಿಂಗ, ಸುಖದೇವ ಮತ್ತು ರಾಜಗುರು ಅಪ್ಪಟ ದೇಶಭಕ್ತರಾಗಿದ್ದಾರೆ. ಇಂತಹ ಸ್ವಾತಂತ್ರ ಹೋರಾಟಗಾರರೇ ದೇಶದ ನೈಜ ಹಿರೋಗಳಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಬಳಗದ ಗೌರವ ಸಲಹೆಗಾರ ಶಿವಯೋಗೆಪಾ ಎಸ್.ಬಿರಾದಾರ ಹಾಗೂ ಶಿಕ್ಷಕಿಯರು, ವಿದ್ಯಾರ್ಥಿಗಳಿದ್ದರು.




















